ಅಕ್ಕಿನೇನಿ ಕುಟುಂಬಕ್ಕೆ ಮತ್ತೊಮ್ಮೆ ಬಿಗ್‌ಶಾಕ್..‌ ಮದುವೆಯಾದ ಒಂದೇ ತಿಂಗಳಲ್ಲಿ ಸೆನ್ಸೇಷನಲ್ ನಿರ್ಧಾರ ತೆಗೆದುಕೊಂಡ ಶೋಭಿತಾ-ನಾಗಚೈತನ್ಯ!

Shobita Dhulipala-Nag Cahitanya: ಇತ್ತೀಚೆಗಷ್ಟೇ ಮದುವೆಯಾದ ನಾಗ ಚೈತನ್ಯ-ಶೋಭಿತಾ ದಾಂಪತ್ಯ ಜೀವನದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.  

Written by - Savita M B | Last Updated : Jan 28, 2025, 11:42 AM IST
  • ಅವರ ಮದುವೆಯು ಟಾಲಿವುಡ್ ವಲಯಗಳಲ್ಲಿ ಹಲವಾರು ಚರ್ಚೆಗಳ ವಿಷಯವಾಗಿತ್ತು.
  • ಈ ಮದುವೆ ಸಂಭ್ರಮಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ಟ್ರೆಂಡ್ ಆಗಿದ್ದವು..
ಅಕ್ಕಿನೇನಿ ಕುಟುಂಬಕ್ಕೆ ಮತ್ತೊಮ್ಮೆ ಬಿಗ್‌ಶಾಕ್..‌ ಮದುವೆಯಾದ ಒಂದೇ ತಿಂಗಳಲ್ಲಿ ಸೆನ್ಸೇಷನಲ್ ನಿರ್ಧಾರ ತೆಗೆದುಕೊಂಡ ಶೋಭಿತಾ-ನಾಗಚೈತನ್ಯ!  title=

Nag Cahitanya: ಸಮಂತಾ ಅಕ್ಕಿನೇನಿ ಕುಟುಂಬದಿಂದ ಬೇರ್ಪಟ್ಟಾಗಿನಿಂದ ನಾಗ ಚೈತನ್ಯಗೆ ಸಂಬಂಧಿಸಿದ ಹಲವು ವಿಷಯಗಳು ಹಾಟ್ ಟಾಪಿಕ್ ಆಗಿವೆ. ಸಮಂತಾ ಅವರೊಂದಿಗಿನ ವಿಚ್ಛೇದನದ ನಂತರ, ಶೋಭಿತಾ ಅವರೊಂದಿಗಿನ ಅವರ ಪ್ರಣಯ ಮತ್ತು ನಂತರ ಅವರ ಮದುವೆಯು ಟಾಲಿವುಡ್ ವಲಯಗಳಲ್ಲಿ ಹಲವಾರು ಚರ್ಚೆಗಳ ವಿಷಯವಾಗಿತ್ತು.

ಕೊನೆಗೂ ಅಕ್ಕಿನೇನಿ ಅವರ ವಾರಸುದಾರ ನಾಗ ಚೈತನ್ಯ ಅವರು ಸೋಭಿತಾ ಧೂಳಿಪಾಲ್ ಅವರನ್ನು ಎರಡನೇ ಮದುವೆಯಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ 4 ರಂದು ಅನ್ನಪೂರ್ಣ ಸ್ಟುಡಿಯೋದಲ್ಲಿ ಸೋಭಿತಾ-ನಾಗ ಚೈತನ್ಯ ವಿವಾಹ ಸಮಾರಂಭ ಕೆಲವೇ ಅತಿಥಿಗಳೊಂದಿಗೆ ನಡೆದಿತ್ತು. ಈ ಮದುವೆ ಸಂಭ್ರಮಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ಟ್ರೆಂಡ್ ಆಗಿದ್ದವು..

ಇದನ್ನೂ ಓದಿ-ʼಸಂಬಂಧ ಮುರಿದೇ ಹೋಯಿತುʼ ವಿಚ್ಛೇದನದ ಬಗ್ಗೆ ಬಹಿರಂಗ ಹೇಳಿಕೆ ನೀಡಿದ ಖ್ಯಾತ ನಟಿ!   

ಸದ್ಯ ಸೋಭಿತಾ-ನಾಗ ಚೈತನ್ಯ ದಂಪತಿ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಆದರೆ ಇವರಿಬ್ಬರ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ತಲೆದೂರಿವೆ ಎಂಬ ಮಾತು ಹೊರಬಿದ್ದಿದೆ. ಇದಕ್ಕೆ ಪ್ರಮುಖ ಕಾರಣ ಚೈತು ಪತ್ನಿ ಸೋಭಿತಾ ಎನ್ನಲಾಗಿದೆ. ಹೌದು ಮದುವೆಯ ನಂತರವೂ ಸೋಭಿತಾಗೆ ಸಿನಿಮಾ ಆಫರ್‌ಗಳು ಬರುತ್ತಿವೆ. ಅದೂ ಹೆಚ್ಚಾಗಿ ಬಾಲಿವುಡ್ ನಿಂದ. ಹಾಗಾಗಿಯೇ ಅವರು ಮುಂಬೈಗೆ ಶಿಫ್ಟ್ ಆಗುವ ಪ್ಲಾನ್ ಇದೆ ಎಂಬ ಮಾತು ಕೇಳಿಬರುತ್ತಿದೆ.

ಆದರೆ ನಾಗ ಚೈತನ್ಯ ವಿಶೇಷವಾದ ಪ್ಲಾನ್‌ ಮಾಡಲು ಕೊಂಚ ಯೋಚಿಸುತ್ತಿದ್ದು, ಅಂತಹ ನಿರ್ಧಾರ ತನಗೆ ಬೇಡ ಸ್ವಲ್ಪ ದಿನ ಕಾಯೋಣ ಎಂದು ಚೈತು ಹೇಳುತ್ತಿದ್ದಾರಂತೆ. ಈ ವಿಚಾರವನ್ನು ನಾಗಾರ್ಜುನ ಕೂಡ ಒಪ್ಪಿದ್ದಾರಂತೆ.. ಆದರೆ ಅವರು ನಿರ್ಧಾರವನ್ನು ಇಬ್ಬರಿಗೂ ಬಿಟ್ಟಿದ್ದಾರೆ ಎನ್ನಲಾಗಿದೆ.. 

ಇದನ್ನೂ ಓದಿ-ʼಸಂಬಂಧ ಮುರಿದೇ ಹೋಯಿತುʼ ವಿಚ್ಛೇದನದ ಬಗ್ಗೆ ಬಹಿರಂಗ ಹೇಳಿಕೆ ನೀಡಿದ ಖ್ಯಾತ ನಟಿ!   

ಈ ಹಿಂದೆಯೂ ಸಮಂತಾ ವಿಚಾರದಲ್ಲೂ ಇದೇ ಆಗಿತ್ತು. ಚೈತು-ಸಮಂತಾ ಮದುವೆಯ ನಂತರ ಪ್ರತ್ಯೇಕ ಮನೆಯಲ್ಲಿ ವಾಸಿಸಲು ಬಯಸಿದ್ದರು ಎಂಬ ಮಾತು ಕೇಳಿಬಂದಿತ್ತು. ಅದು ಬಿಟ್ಟರೆ ಈಗ ಶೋಭಿತಾ ವಿಚಾರದಲ್ಲೂ ಅದೇ ಆಗುತ್ತಿದೆ ಎಂಬ ಮಾತು ಟಾಲಿವುಡ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಇನ್ನೊಂದೆಡೆ ಇತ್ತೀಚೆಗೆ ಶೋಭಿತಾ ಅವರ ಗ್ಲಾಮರ್ ಶೋ ಕೂಡ ಹಾಟ್ ಟಾಪಿಕ್ ಆಗುತ್ತಿದೆ. ಶೋಭಿತಾ ಅವರ ಹಲವು ಫೋಟೋಗಳು ವೈರಲ್ ಆಗಿವೆ. ಈ ಲೆಕ್ಕಾಚಾರ ನೋಡಿದರೆ ಸಮಂತಾ ಅವರಂತೆ ಶೋಭಿತಾ ಸಹ ಮದುವೆಯ ನಂತರ ಸಿನಿಮಾ ಮಾಡಲು ರೆಡಿಯಾಗುತ್ತಿದ್ದಾರಂತೆ. ಆದರೆ ಈ ಸುದ್ದಿಯಲ್ಲಿ ಎಷ್ಟು ಸತ್ಯ ಇದೆ ಎಂದು ಕಾದು ನೋಡಬೇಕಿದೆ.. ಅಲ್ಲದೇ ಇದಕ್ಕೆ ಚೈತು ಶೋಭಿತಾ ಪ್ರತಿಕ್ರಿಯಿಸುತ್ತಾರೋ ಇಲ್ಲವೋ ಯಾರಿಗೂ ತಿಳಿದಿಲ್ಲ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News