Budget 2022: ನಿರುದ್ಯೋಗ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಬಜೆಟ್ ನಲ್ಲಿ ಸಿಗಲಿದೆಯೇ ಪರಿಹಾರ ?

Budget2022Expectations : ಕರೋನಾ ಮಹಾಮಾರಿಯಿಂದ ತಗ್ತರಿಸಿರುವ ದೇಶದ ಜನತೆ, ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡನೆಯಾಗಲಿರುವ ಬಜೆಟ್ ಬಗ್ಗೆ ಭಾರೀ ನಿರೀಕ್ಷೆಗಳನ್ನು ಹೊಂದಿದ್ದಾರೆ. 

Written by - Ranjitha R K | Last Updated : Jan 31, 2022, 06:02 PM IST
  • ನಾಳೆ ಮಂಡನೆಯಾಗಲಿರುವ ಬಜೆಟ್ ಬಗ್ಗೆ ಅಪಾರ ನಿರೀಕ್ಷೆ
  • ಸರ್ಕಾರ ಘೋಷಿಸಲಿರುವ ಪರಿಹಾರದ ಬಗ್ಗೆ ಎದುರು ನೋಡುತ್ತಿರುವ ಜನತೆ
  • ರೈತರಿಗೆ ಸಿಗಲಿದೆಯೇ ಪರಿಹಾರ ?
Budget 2022: ನಿರುದ್ಯೋಗ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಬಜೆಟ್ ನಲ್ಲಿ ಸಿಗಲಿದೆಯೇ ಪರಿಹಾರ ? title=
ನಾಳೆ ಮಂಡನೆಯಾಗಲಿರುವ ಬಜೆಟ್ ಬಗ್ಗೆ ಅಪಾರ ನಿರೀಕ್ಷೆ (file photo)

ನವದೆಹಲಿ : Budget2022Expectations : ಕರೋನಾ ಮಹಾಮಾರಿಯಿಂದ ತಗ್ತರಿಸಿರುವ ದೇಶದ ಜನತೆ, ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡನೆಯಾಗಲಿರುವ ಬಜೆಟ್ (Budget 2022) ಬಗ್ಗೆ ಭಾರೀ ನಿರೀಕ್ಷೆಗಳನ್ನು ಹೊಂದಿದ್ದಾರೆ. SMC ಗ್ಲೋಬಲ್ ಸೆಕ್ಯುರಿಟೀಸ್‌ನ ವರದಿಯ ಪ್ರಕಾರ ಸರ್ಕಾರವು ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50,000 ರಿಂದ 1 ಲಕ್ಷಕ್ಕೆ ಹೆಚ್ಚಿಸಬಹುದು ಎನ್ನಲಾಗಿದೆ. ಇದರಲ್ಲಿ ಗೃಹ ಸಾಲದ ಮೇಲಿನ ಬಡ್ಡಿ (Home loan interest) ಮತ್ತು ಅಸಲು ಮೊತ್ತದ ಮರುಪಾವತಿ ಆದಾಯ ತೆರಿಗೆ ಲಾಭವನ್ನು ತಲಾ 50-50 ಸಾವಿರ ರೂ.ಗಳಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

ರೈಲ್ವೆಗೆ ಹೊಸ ರೂಪ ನೀಡಲು ಸರ್ಕಾರ ಸಂಪೂರ್ಣ ಬದ್ಧವಾಗಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ರೈಲ್ವೆಗೆ ಬಜೆಟ್ (Railway budget) ಹಂಚಿಕೆಯಲ್ಲಿ ದಾಖಲೆಯ ಹೆಚ್ಚಳವನ್ನು ಮಾಡಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೇ ಪೆಟ್ರೋಲಿಯಂ ಉತ್ಪನ್ನಗಳ ಕಡಿತವನ್ನೂ ನಿರೀಕ್ಷಿಸಲಾಗಿದೆ . ವಸತಿ, ಆಟೊಮೊಬೈಲ್ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳಿಗೂ ಸರ್ಕಾರದಿಂದ ಪರಿಹಾರ ಸಿಗುವ ನಿರೀಕ್ಷೆ ಇದೆ. 

ಇದನ್ನೂ ಓದಿ : Economic Survey 2022: ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷಾ ವರದಿ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇಲ್ಲಿವೆ ಹೈಲೈಟ್ಸ್

NMP ಅಡಿಯಲ್ಲಿ ಸರ್ಕಾರವು ಸಾರ್ವಜನಿಕ ವಲಯದ ಉದ್ಯಮಗಳ ( PSUs) ಆಸ್ತಿ ಹಣಗಳಿಕೆಯನ್ನು ಘೋಷಿಸಬಹುದು. ಇದರಲ್ಲಿ ಫ್ಲೋಟಿಂಗ್  REIT ಗಳ ಮೂಲಕ ತನ್ನ ಮಾಲೀಕತ್ವದ ವಸತಿ ಮತ್ತು ವಾಣಿಜ್ಯ ರಿಯಲ್ ಎಸ್ಟೇಟ್ ಆದಾಯ ಸೇರಿದೆ. 

ಬಂಡವಾಳ ಹಿಂತೆಗೆತದ ಯೋಜನೆಯು ಕೂಡಾ ಬಜೆಟ್‌ ನಲ್ಲಿ (budget 2022) ಸ್ಪಷ್ಟ ವಾಗುವ ಸಾಧ್ಯತೆ ಇದೆ. . ಪಿಎಸ್‌ಯುನಲ್ಲಿ (PSU) ತನ್ನ ಪಾಲನ್ನು ಮಾರಾಟ ಮಾಡುವ ಮೂಲಕ ಸರ್ಕಾರವು ಇದುವರೆಗೆ 9,330 ಕೋಟಿ ರೂ.ಗಳನ್ನು ಸಂಗ್ರಹಿಸಲು ಸಾಧ್ಯವಾಗಿದೆ ಎಂದು ವರದಿ ಹೇಳಿದೆ.

ಮಾರ್ಚ್ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿರುವ ಎಲ್ಐಸಿ ಐಪಿಒ (LIC IPO), 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸುವ ಮೂಲಕ ಸರ್ಕಾರಕ್ಕೆ ದೊಡ್ಡ ರೀತಿಯಲ್ಲಿ ಸಹಾಯವಾಗಲಿದೆ ಎನ್ನಲಾಗಿದೆ.  

ಇದನ್ನೂ ಓದಿ : Budget 2022: ಈ ಬಜೆಟ್ ಅಧಿವೇಶನದಲ್ಲಿ ತೆರಿಗೆ ಪಾವತಿದಾರರಿಗೆ ಸಿಗಲಿದೆ ಈ ಸಂತಸದ ಸುದ್ದಿ!

ಎಲ್‌ಐಸಿ ಐಪಿಒ ಹೊರತುಪಡಿಸಿ, ಐಡಿಬಿಐ ಬ್ಯಾಂಕ್ (IDBI Bank), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಪವನ್ ಹನ್ಸ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಬಿಇಎಂಎಲ್ ಮತ್ತು ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಹೂಡಿಕೆ ಬಾಕಿ ಉಳಿದಿವೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಈ ಬಜೆಟ್ ರೆಂಟಲ್ ಹೌಸಿಂಗ್ ಮಾರ್ಕೆಟ್  ಹಾಗೂ ಕೈಗೆಟಕುವ ದರದ ವಸತಿ ಕ್ಷೇತ್ರ ಎರಡಕ್ಕೂ ಉತ್ತೇಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಮುಂಬರುವ ಬಜೆಟ್‌ನಿಂದ ಈ ವಲಯವು ಉದ್ಯಮದ ಸ್ಥಾನಮಾನದ ಬೇಡಿಕೆ ಮತ್ತು ಹಣಕಾಸಿನ ಸುಲಭ ಲಭ್ಯತೆಯಂತಹ ನಿರೀಕ್ಷೆಗಳನ್ನು ಹೊಂದಿದೆ. 

ಹೊರಗಿನಿಂದ ಆಮದು ಮಾಡಿಕೊಳ್ಳುವುದರಿಂದ ಜಾಗತಿಕ ಮಟ್ಟದಲ್ಲಿ ಗೊಬ್ಬರದ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದು ಭಾರತದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಬಳಸುವ ಯೂರಿಯಾದ ಬೆಲೆ ಒಂದೂವರೆ ವರ್ಷದ ಹಿಂದಿನ ಬೆಲೆಗೆ ಹೋಲಿಸಿದರೆ ಟನ್‌ಗೆ ಮೂರು ಪಟ್ಟು ಹೆಚ್ಚಾಗಿದೆ. ಪ್ರಸ್ತುತ ದೇಶದ ನಾನಾ ರಾಜ್ಯಗಳಲ್ಲಿ ರೈತರು ರಸಗೊಬ್ಬರದ ಕೊರತೆ ಎದುರಿಸುತ್ತಿದ್ದು, ಕೇಂದ್ರದ ಮಧ್ಯಸ್ಥಿಕೆ ವಹಿಸಿ ಸಮರ್ಪಕವಾಗಿ ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ಮುಂದಾಗಬೇಕಿದೆ.

ಇದನ್ನೂ ಓದಿ : Budget 2022 ಮಂಡನೆಗೂ ಮುನ್ನ ಸಂತಸದ ಸುದ್ದಿ ಪ್ರಕಟಿಸಿದ ಬ್ಯಾಂಕ್ ಗಳು, Fixed Deposit ಬಡ್ಡಿ ದರ ಹೆಚ್ಚಳ

ಗ್ರಾಮೀಣ ಭಾರತದ ಮೇಲೆ ಕೆಟ್ಟ ಪರಿಣಾಮ ಬೀರಿರುವ ಕರೋನಾ ಸಾಂಕ್ರಾಮಿಕ (Coronavirus) ರೋಗದಿಂದಾಗಿ ರೈತರು ಈಗಾಗಲೇ ತೊಂದರೆ ಅನುಭವಿಸುತ್ತಿದ್ದಾರೆ. ಹೆಚ್ಚಿನ ಬೆಲೆಗಳು ಮತ್ತು ರಸಗೊಬ್ಬರಗಳ ಕೊರತೆಯು ಅವರ ಆರ್ಥಿಕ ಸ್ಥಿತಿಯ  ಮೇಲೆ ಮತ್ತಷ್ಟು ಪ್ರತಿಕೂಲವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ಸರ್ಕಾರವು ಕೃಷಿ ಆರ್ಥಿಕತೆಯನ್ನು ಉತ್ತೇಜಿಸುವ ಮೂಲಕ ರೈತರ ಆದಾಯವನ್ನು ಸುಧಾರಿಸುವತ್ತ ಗಮನ ಹರಿಸುವ ನಿರೀಕ್ಷೆಯಿದೆ. ಇದರೊಂದಿಗೆ, ಕೃಷಿ ವಲಯದಲ್ಲಿನ ಬೀಜಗಳು, ರಸಗೊಬ್ಬರಗಳು, ಬೆಳೆ ರಕ್ಷಣೆ, ರಾಸಾಯನಿಕಗಳು ಮತ್ತು ಟ್ರಾಕ್ಟರ್‌ಗಳು ಇತ್ಯಾದಿಗಳ ವೆಚ್ಚದಿಂದ ಇಡೀ ಕೃಷಿ ಕ್ಷೇತ್ರವು ಪ್ರಯೋಜನವನ್ನು ಪಡೆಯುವ ನಿರೀಕ್ಷೆಯಿದೆ.  ಮುಂಬರುವ ಬಜೆಟ್‌ನಲ್ಲಿ 1.3 ಲಕ್ಷ ಕೋಟಿ ರೂಪಾಯಿಗಳ ರಸಗೊಬ್ಬರ ಸಬ್ಸಿಡಿಯನ್ನು ನಿರೀಕ್ಷಿಸಲಾಗಿದೆ ಎಂದು ವರದಿ ಹೇಳಿದೆ.

ಇದರ ಹೊರತಾಗಿ, ಸರ್ಕಾರವು ಈ ಹಿಂದೆ ಅಳವಡಿಸಿಕೊಂಡ ನೀತಿಯನ್ನೇ ಮುಂದುವರೆಸಿಕೊಂಡು ಪ್ರಸಕ್ತ ವರ್ಷಕ್ಕೆ ಕೃಷಿ ಸಾಲವನ್ನು (Agriculture loan) 16.5 ಲಕ್ಷ ಕೋಟಿಯಿಂದ 18 ಲಕ್ಷ ಕೋಟಿಗೆ ಹೆಚ್ಚಿಸಬಹುದು ಎಂದು ವರದಿ ಹೇಳಿದೆ. 

ಸಾಂಕ್ರಾಮಿಕ ಪೀಡಿತ MSME ವಲಯಕ್ಕೆ ಹಣಕಾಸಿನ ನೆರವು ನೀಡಲು ಕೇಂದ್ರ ಸರ್ಕಾರವು ಮಾರ್ಚ್ 2020 ರಲ್ಲಿ ತುರ್ತು ಕ್ರೆಡಿಟ್ ಲಿಂಕ್ಡ್ ಗ್ಯಾರಂಟಿ ಯೋಜನೆಯನ್ನು ಪರಿಚಯಿಸಿತು. ನಂತರ, ಸಾಲದ ಮಿತಿಯನ್ನು 3 ಲಕ್ಷ ಕೋಟಿಯಿಂದ 4.5 ಲಕ್ಷ ಕೋಟಿಗೆ ಹೆಚ್ಚಿಸಲಾಯಿತು, ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಇತರ ಕೈಗಾರಿಕೆಗಳಿಗೂ ಅದರ ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಈ ಯೋಜನೆಯನ್ನು ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿದೆ. ಕ್ಷೇತ್ರವು ಇನ್ನೂ ಸಾಕಷ್ಟು ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಅನೇಕ ಅರ್ಹ ಎಂಎಸ್‌ಎಂಇಗಳು ಪುನಾರಚನೆಯ  ವಿವಿಧ ಹಂತಗಳಲ್ಲಿವೆ.

SMC ಗ್ಲೋಬಲ್ ಸೆಕ್ಯುರಿಟೀಸ್ ಸರ್ಕಾರವು ಮಾರ್ಚ್ 2023 ರವರೆಗೆ ಅಥವಾ ಆರ್ಥಿಕತೆಯು ಪುನಶ್ಚೇತನಗೊಳ್ಳುವವರೆಗೆ ಯೋಜನೆಯನ್ನು ವಿಸ್ತರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ  ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News