Income Tax: ಈ ಬಾರಿ ಯುನಿಯನ್ ಬಜೆಟ್ನಲ್ಲಿ ಆದಾಯ ತೆರಿಗೆ ಪಾವತಿಸುವವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 7 ಲಕ್ಷ ರೂ.ವರೆಗಿನ ಆದಾಯದವರೆಗೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಘೋಷಿಸಿದ್ದಾರೆ.
7 ಲಕ್ಷದವರೆಗೆ ಆದಾಯ ತೆರಿಗೆ ಇಲ್ಲ: ವಿತ್ತ ಸಚಿವೆ
2023ರ ಬಜೆಟ್ನಲ್ಲಿ ಆದಾಯ ತೆರಿಗೆದಾರರಿಗೆ ಬಿಗ್ ರಿಲೀಫ್ ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈಗ ವಾರ್ಷಿಕ 7 ಲಕ್ಷ ರೂ.ವರೆಗಿನ ಆದಾಯದವರೆಗೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಘೋಷಿಸಿದರು. ಗಮನಾರ್ಹವಾಗಿ, ಈ ಮಿತಿ ಮೊದಲು ಐದು ಲಕ್ಷ ರೂಪಾಯಿಗಳಷ್ಟಿತ್ತು.
ಇದನ್ನೂ ಓದಿ- budget 2023 : ಬಜೆಟ್ನಲ್ಲಿ ರೈತರಿಗೆ ಭರ್ಜರಿ ಗಿಫ್ಟ್! ಅನ್ನ ಯೋಜನೆ ಘೋಷಿಸಿದ ವಿತ್ತ ಮಂತ್ರಿ
ಇದಲ್ಲದೆ, ಹೊಸ ತೆರಿಗೆ ರಚನೆಯನ್ನು ಡೀಫಾಲ್ಟ್ ತೆರಿಗೆ ಆಯ್ಕೆಯನ್ನಾಗಿ ಮಾಡಲು ಸರ್ಕಾರ ಪ್ರಸ್ತಾಪಿಸಿದೆ. ಹೊಸ ಆದಾಯ ಪದ್ಧತಿಯ ಸೆಕ್ಷನ್ 87ಎ ಅಡಿಯಲ್ಲಿ ರಿಯಾಯಿತಿಯನ್ನು 7 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ಅದೇ ಸಮಯದಲ್ಲಿ, ಈ ಬಾರಿಯ ಬಜೆಟ್ನಲ್ಲಿ ತೆರಿಗೆ ಸ್ಲ್ಯಾಬ್ ಅನ್ನು ಕಡಿಮೆ ಮಾಡಲಾಗಿದೆ. ಮೊದಲು ಏಳು ತೆರಿಗೆ ಸ್ಲ್ಯಾಬ್ಗಳಿದ್ದವು. ಈಗ ಐದು ಸ್ಲ್ಯಾಬ್ಗಳು ಮಾತ್ರ ಇರುತ್ತವೆ.
ಇದನ್ನೂ ಓದಿ- Health Budget 2023: ಆರೋಗ್ಯ ಕ್ಷೇತ್ರಕ್ಕೆ ಬೂಸ್ಟರ್ ಡೋಸ್ ನೀಡಿದ ವಿತ್ತ ಸಚಿವೆ
ಆದಾಯ | ತೆರಿಗೆ % |
0 ರಿಂದ 3 ಲಕ್ಷ | 0% |
3 ರಿಂದ 6 ಲಕ್ಷ | 5% |
6 ರಿಂದ 9 ಲಕ್ಷ | 10% |
9 ರಿಂದ 12 ಲಕ್ಷ | 15% |
12 ರಿಂದ 15 ಲಕ್ಷ | 20% |
ಹೆಚ್ಚು 15 ಲಕ್ಷ | 30% |
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.