ದುಬಾರಿ ಪೆಟ್ರೋಲ್ ಜಾಗಕ್ಕೆ ಬರಲಿದೆ ಪರ್ಯಾಯ ಇಂಧನ. ಬೆಲೆ ಕೇವಲ 62 ರೂ./ಲೀ

ಪೆಟ್ರೋಲ್, ಡೀಸೆಲ್ ಇದೀಗ ವಿಪರೀತ ತುಟ್ಟಿ ಆಗಿವೆ. ಇದರ ದರ ನಿಯಂತ್ರಣಕ್ಕೆ ತರುವುದು ಕೂಡಾ ಸರಕಾರಕ್ಕೆ ಕಷ್ಟವಾಗಿದೆ. ಯಾಕೆಂದರೆ ಇವು ಜಾಗತಿಕ ಮಾರುಕಟ್ಟೆಯ ಮೌಲ್ಯದ ಮೇಲೆ ನಿರ್ಧಾರಿತವಾಗುತ್ತವೆ.

Written by - Ranjitha R K | Last Updated : Jun 21, 2021, 09:08 AM IST
  • ಪೆಟ್ರೋಲ್, ಡೀಸೆಲ್ ಇದೀಗ ವಿಪರೀತ ತುಟ್ಟಿ ಆಗಿವೆ. ಇದರ ದರ ನಿಯಂತ್ರಣಕ್ಕೆ ತರುವುದು ಕೂಡಾ ಸರಕಾರಕ್ಕೆ ಕಷ್ಟವಾಗಿದೆ.
  • ಯಾಕೆಂದರೆ ಇವು ಜಾಗತಿಕ ಮಾರುಕಟ್ಟೆಯ ಮೌಲ್ಯದ ಮೇಲೆ ನಿರ್ಧಾರಿತವಾಗುತ್ತವೆ.
  • ಹಾಗಾಗಿ, ಪೆಟ್ರೋಲ್ ಮತ್ತು ಡೀಸೆಲ್ ಗೆ ಪರ್ಯಾಯ ಇಂಧನ ಇದೀಗ ಹುಡುಕಲೇ ಬೇಕಾದ ಅನಿವಾರ್ಯತೆ ಇದೆ.
ದುಬಾರಿ ಪೆಟ್ರೋಲ್ ಜಾಗಕ್ಕೆ ಬರಲಿದೆ ಪರ್ಯಾಯ ಇಂಧನ. ಬೆಲೆ ಕೇವಲ 62 ರೂ./ಲೀ title=
ಪೆಟ್ರೋಲ್ ಜಾಗಕ್ಕೆ ಬರಲಿದೆ ಅಗ್ಗದ ಇಂಧನ..! (photo zee news)

ನವದೆಹಲಿ : ಪೆಟ್ರೋಲ್, ಡೀಸೆಲ್ (petrol diesel price) ಇದೀಗ ವಿಪರೀತ ತುಟ್ಟಿ ಆಗಿವೆ. ಇದರ ದರ ನಿಯಂತ್ರಣಕ್ಕೆ ತರುವುದು ಕೂಡಾ ಸರಕಾರಕ್ಕೆ ಕಷ್ಟವಾಗಿದೆ. ಯಾಕೆಂದರೆ ಇವು ಜಾಗತಿಕ ಮಾರುಕಟ್ಟೆಯ ಮೌಲ್ಯದ ಮೇಲೆ ನಿರ್ಧಾರಿತವಾಗುತ್ತವೆ. ಹಾಗಾಗಿ, ಪೆಟ್ರೋಲ್ ಮತ್ತು ಡೀಸೆಲ್ ಗೆ ಪರ್ಯಾಯ ಇಂಧನ ಇದೀಗ ಹುಡುಕಲೇ ಬೇಕಾದ ಅನಿವಾರ್ಯತೆ ಇದೆ. 
ಪೆಟ್ರೋಲ್ ಜಾಗಕ್ಕೆ ಇದೀಗ  ಇಥೆನಾಲ್ ಬರಲಿದೆ..

ಮುಂದಿನ ಕೆಲವು ದಿನಗಳಲ್ಲಿ ಸರ್ಕಾರ ಫ್ಲೆಕ್ಸ್  ಪ್ಯುವೆಲ್ ಇಂಜನ್ (flex-fuel engines) ಅತಿ ದೊಡ್ಡ ನಿರ್ಧಾರವನ್ನು ಪ್ರಕಟಿಸಲಿದೆ. ಇಂಥ ಇಂಧನ ಅಟೋಮೊಬೈಲ್  ಉದ್ಯಮಕ್ಕೆ ಅನಿವಾರ್ಯ ಎನ್ನಲಾಗಿದೆ.  ಪ್ಲೆಕ್ಸ್  ಫ್ಯೂವೆಲ್ ಅರ್ಥ ವೇನೆಂದರೆ ಫ್ಲೆಕ್ಸಿಬಲ್  ಇಂಧನ (Flexible Fuel). ರಸ್ತೆ ಮತ್ತು  ಸಾರಿಗೆ  ಮಂತ್ರಿ ನಿತಿನ್ ಗಡ್ಕರಿ (Nitin Gadkari) ಪ್ರಕಾರ  ಈ ಇಂಧನ 60-62/ಲೀಟರ್ ಸಿಗಲಿದೆ.  ಹಾಗಾಗಿ ಇದರಿಂದ ಪ್ರತಿ  ಲೀಟರ್ ಮೇಲೆ 30-35 ರೂಪಾಯಿ ಉಳಿತಾಯವಾಗಲಿದೆ. 

ಇದನ್ನೂ ಓದಿ : LIC Policy: LICಯ ಈ ಪಾಲಸಿಯಲ್ಲಿ ನಿತ್ಯ ರೂ.30 ಹೂಡಿಕೆ ಮಾಡಿ ಲಕ್ಷಾಧಿಪತಿಯಾಗಬಹುದು

ಸಚಿವ ಗಡ್ಕರಿ ಹೇಳಿದ್ದೇನು..?
ಸಭೆಯೊಂದರಲ್ಲಿ ಮಾತನಾಡಿದ ಸಚಿವ ಗಡ್ಕರಿ, ``ನಾನು ಸಾರಿಗೆ ಸಚಿವ. ನಾನೊಂದು ಆದೇಶ ಜಾರಿ ಮಾಡಲಿದ್ದೇನೆ. ಇನ್ನು ಕೇವಲ ಪೆಟ್ರೋಲ್ ಇಂಜನ್ ಇರಲ್ಲ. ಫ್ಲೆಕ್ಸ್ ಇಂಧನದ ಇಂಜನ್ ಕೂಡಾ ಇರಲಿದೆ. ಇದೊಂದು ಆಯ್ಕೆ ಜನರಿಗೆ ಸಿಗಲಿದೆ.  ಜನರು ಒಂದೋ ಕಚ್ಚಾ ತೈಲ ಬಳಸಬಹುದು. ಇಲ್ಲದಿದ್ದರೆ ಎಥೆನಾಲ್ ಬಳಸಬಹುದು. 8-10 ದಿನಗಳಲ್ಲಿ ಈ ಆದೇಶ ಜಾರಿಗೆ ಬರಲಿದೆ.  ಫ್ಲೆಕ್ಸ್ ಫ್ಯೂಲ್ ಇಂಜನ್ ಅಟೋಮೊಬೈಲ್ ಕ್ಷೇತ್ರಕ್ಕೆ ಅನಿವಾರ್ಯ ಮಾಡಲು ಹೊರಟಿದ್ದೇವೆ’’ ಎಂದು ಹೇಳಿದ್ದಾರೆ.

ಹಲವು ದೇಶಗಳಲ್ಲಿವೆ ಫ್ಲೆಕ್ಸ್ ಫ್ಯೂಯೆಲ್
ಬ್ರೆಜಿಲ್, ಕೆನಡಾ (Canada) ಮತ್ತು ಆಮೇರಿಕಾ ದೇಶಗಳಅಟೊ ಮೊಬೈಲ್ ಕಂಪನಿಗಳು ಫ್ಲೆಕ್ಸ್ ಪ್ಯೂಲ್ ಇಂಧನ  ಉತ್ಪಾದನೆ ಮಾಡುತ್ತವೆ.  ಈ ದೇಶದ ಗ್ರಾಹಕರಿಗೆ 100 ಶೇಕಡಾ ಪೆಟ್ರೋಲ್ ಅಥವಾ 10 ಶೇ. ಬಯೋ ಇಥೆನಾಲ್  (ethanol) ಆಯ್ಕೆ ಸಿಗುತ್ತಿವೆ. ಗಡ್ಕರಿ ಪ್ರಕಾರ ‘ಇದೀಗ ಪ್ರತಿ ಲೀಟರ್ ಪೆಟ್ರೋಲಿನಲ್ಲಿ ಶೇ. 8.5 ಎಥನಾಲ್ ಸೇರಿಸಲಾಗುತ್ತಿದೆ.  2014ರಲ್ಲಿ ಇದರ ಪ್ರಮಾಣ ಕೇವಲ ಶೇ. 1 ರಿಂದ ಶೇ. 1.5 ರಷ್ಟಿತ್ತು. ಎಥನಾಲ್ ಖರೀದಿಯೂ ಈಗ ಹೆಚ್ಚಿದೆ’ ಎಂದು ಹೇಳಿದ್ದಾರೆ. 

ಇದನ್ನೂ ಓದಿ : Gold Hallmarking ನಿಯಮದ ಬಳಿಕ ಮನೆಯಲ್ಲಿಟ್ಟ ಚಿನ್ನ ಏನಾಗಲಿದೆ, ಹಾಲ್ಮಾರ್ಕಿಂಗ್ ಮಾಡಿಸಬೇಕೆ? ಬೇಡವೇ?

ಪೆಟ್ರೋಲಿಗಿಂತ ಬೆಸ್ಟ್ ಇಥೆನಾಲ್
ಗಡ್ಕರಿಯವರ ಪ್ರಕಾರ ಪೆಟ್ರೋಲಿಗಿಂತ (Petrol) ಬೆಸ್ಟ್  ಫ್ಲೆಕ್ಸ್  ಫ್ಯೂಲ್ ಅಂತೆ.  ಅದಕ್ಕೆ ಕಾರಣ 1. ಬೆಲೆ ಕಡಿಮೆ,2. ವಾಯು ಮಾಲಿನ್ಯ ಇಲ್ಲ. 3. ಇದು ಸಂಪೂರ್ಣ ಸ್ವದೇಶಿ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News