Rs 2000 Notes Exchange: ಈ ವರ್ಷದ ಆರಂಭದಲ್ಲಿ ಆರ್‌ಬಿಐ 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ತಿಳಿಸಿತ್ತು. ಇದರೊಂದಿಗೆ 2000 ರೂ. ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶವನ್ನು ನೀಡಿತ್ತು. 2000 ರೂ. ಮುಖಬೆಲೆಯ ನೋಟನ್ನು ಹೊಂದಿರುವವರು ದೇಶದ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂದು ಹೇಳಿತ್ತು.
ಆರಂಭದಲ್ಲಿ ಇದಕ್ಕಾಗಿ ಸೆಪ್ಟೆಂಬರ್ 30, 2023ರವರೆಗೆ ಸಮಯಾವಕಾಶವನ್ನು ನೀಡಿತ್ತು. ಬಳಿಕ, ಗಡುವನ್ನು ಅಕ್ಟೋಬರ್ 7, 2023 ರವರೆಗೆ ವಿಸ್ತರಿಸಲಾಗಿತ್ತು. ಆದರೀಗ ಆರ್‌ಬಿಐ 2000 ರೂ.ಗಳ ನೋಟು ವಿನಿಮಯಕ್ಕಾಗಿ ನೀಡಿದ್ದ ಗಡುವು ಮುಗಿದಿದೆ. ಆದರೆ, 2000 ರೂ. ನೋಟುಗಳು ಇನ್ನೂ ನಿಮ್ಮ ಬಳಿ ಇದ್ದರೆ ಚಿಂತಿಸುವ ಅಗತ್ಯವಿಲ್ಲ. ಈಗಲೂ ಸಹ ನೀವು ಈ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.
ಇದನ್ನೂ ಓದಿ- ಜನಸಾಮಾನ್ಯರ ಕಣ್ಣಲ್ಲಿ ಕಣ್ಣೀರು ತರಿಸಿದ ಈರುಳ್ಳಿ!
2000 ರೂಪಾಯಿ ನೋಟುಗಳನ್ನು ಇನ್ನೂ ಎಲ್ಲಿ ಬದಲಾಯಿಸಬಹುದೇ?
ಹೌದು, ನೀವು ಇನ್ನೂ 2000 ರೂ. ಮುಖಬೆಲೆಯ ನೋಟುಗಳನ್ನು ಹೊಂದಿದ್ದಾರೆ ಅವುಗಳನ್ನು ಯಾವುದೇ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶವಿಲ್ಲ. ಆದರೆ, ಆರ್‌ಬಿಐನ 19 ಸಂಚಿಕೆ ಕಚೇರಿಗಳಲ್ಲಿ ಇನ್ನೂ ಸಹ ಈ ಸೌಲಭ್ಯ ಲಭ್ಯವಿದೆ.
ಇದನ್ನೂ ಓದಿ- ಮತ್ತೆ ಹೊಳಪು ಪಡೆದ ಚಿನ್ನ ಮತ್ತು ಬೆಳ್ಳಿ ! ಇಂದು ಎಷ್ಟಿದೆ ನೋಡಿ ಬಂಗಾರದ ಬೆಲೆ
ಆರ್‌ಬಿಐನ 19 ಸಂಚಿಕೆ ಕಚೇರಿಗಳಲ್ಲಿ ರೂ 2,000 ಬ್ಯಾಂಕ್‌ನೋಟುಗಳ ಠೇವಣಿ ಅಥವಾ ವಿನಿಮಯಕ್ಕಾಗಿ ವಿಂಡೋ ಲಭ್ಯವಿರುತ್ತದೆ. ಆ 19 ಆರ್‌ಬಿಐ ಸಂಚಿಕೆ ಕಚೇರಿಗಳು ಅಹಮದಾಬಾದ್, ಬೆಂಗಳೂರು, ಬೇಲಾಪುರ, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂನಲ್ಲಿವೆ. ಸಾರ್ವಜನಿಕರು ಭಾರತೀಯ ಅಂಚೆ ಕಚೇರಿಗಳ ಮೂಲಕ 2,000 ರೂ. ಮುಖಬೆಲೆಯ ನೋಟುಗಳನ್ನು ಕಳುಹಿಸುವ ಸೌಲಭ್ಯವನ್ನು ಪಡೆದುಕೊಳ್ಳಲು ವಿನಂತಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.