Edible Oil Price Cut: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರದಿಂದ ಶ್ರೀಸಾಮಾನ್ಯ ಕಂಗೆಟ್ಟು ಹೋಗಿದ್ದಾನೆ. ಆದರೆ, ಇದೀಗ ಸಾಮಾನ್ಯ ಜನರಿಗೆ ಪರಿಹಾರ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ. ಅಡುಗೆ ಎಣ್ಣೆ ಬೆಲೆ ಇಳಿಕೆ ಮಾಡುವಂತೆ ಹೇಳಿ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ. ಇದಾದ ಬಳಿಕ ಖಾದ್ಯ ತೈಲದ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಖಾದ್ಯ ತೈಲದ ಬೆಲೆಯನ್ನು ತಕ್ಷಣವೇ ಲೀಟರ್‌ಗೆ 15 ರೂಪಾಯಿಗಳಷ್ಟು ಕಡಿಮೆ ಮಾಡುವಂತೆ ಎಡಿಲ್ ಆಯಿಲ್ ಅಸೋಸಿಯೇಷನ್‌ಗೆ ಕೇಂದ್ರ ಸರ್ಕಾರ ಆದೇಶ ನೀಡಿದೆ.
ಇದನ್ನೂ ಓದಿ- 7th Pay Commission: ಡಿಎ ಬಾಕಿ ಕುರಿತಾದ ಬಿಗ್ ಅಪ್ಡೇಟ್ ಪ್ರಕಟ, ಈ ದಿನ ಖಾತೆಗೆ ಬರಲಿದೆ ಹಣ!
ಆದೇಶ ಹೊರಡಿಸಿದ ಕೇಂದ್ರ ಸಾಕಾರ
ಖಾದ್ಯ ತೈಲದ ಬೆಲೆಯಲ್ಲಿನ ಇಳಿಕೆಯ ಲಾಭವನ್ನು ತಕ್ಷಣವೇ ಗ್ರಾಹಕರಿಗೆ ವರ್ಗಾಯಿಸುವಂತೆ ಆಹಾರ ಮತ್ತು ಸರಬರಾಜು ಸಚಿವಾಲಯವು ಖಾದ್ಯ ತೈಲ ಸಂಘಕ್ಕೆ ಆದೇಶ ನೀಡಿದೆ. ಈ ಹಿಂದೆಯೂ ಸರ್ಕಾರ ಈ ಕುರಿತು ಸೂಚನೆ ನೀಡಿತ್ತು. ಜೂನ್ 6 ರಂದು ಆಹಾರ ಮತ್ತು ಸರಬರಾಜು ಸಚಿವಾಲಯವು ಮಹತ್ವದ ಸಭೆಯನ್ನು ನಡೆಸಿದೆ ಎಂಬುದು ಇಲ್ಲಿ ಗಮನಾರ್ಹ. ಇದಾದ ಬಳಿಕ ದೇಶದ ಎಲ್ಲ ದೊಡ್ಡ ಖಾದ್ಯ ತೈಲ ಸಂಘಗಳಿಗೆ ಖಾದ್ಯ ತೈಲದ ಬೆಲೆಯನ್ನು ಕೂಡಲೇ ಲೀಟರ್‌ಗೆ 15 ರೂಪಾಯಿ ಇಳಿಸುವಂತೆ ಆದೇಶ ನೀಡಲಾಗಿದೆ.
ಮದರ್ ಡೇರಿ ಬೆಲೆ ಇಳಿಕೆ
ದೆಹಲಿ-ಎನ್‌ಸಿಆರ್‌ನಲ್ಲಿ ಹಾಲಿನ ಪ್ರಮುಖ ಪೂರೈಕೆದಾರರಲ್ಲಿ ಒಂದಾದ ಮದರ್ ಡೈರಿ, ಸೋಯಾಬೀನ್ ಮತ್ತು ರೈಸ್ ಬ್ರಾನ್ ಆಯಿಲ್‌ನ ಬೆಲೆಯನ್ನು ಲೀಟರ್‌ಗೆ 14 ರೂ.ವರೆಗೆ ಕಡಿತಗೊಳಿಸಿದೆ. ಈ ಕುರಿತು ಮಾಹಿತಿ ನೀಡಿದ ಮದರ್ ಡೇರಿಯ ವಕ್ತಾರರು, ''ಸರ್ಕಾರದ ಮಧ್ಯಪ್ರವೇಶದ ನಂತರ ತೈಲ ಬೆಲೆ ಕುಸಿತದ ಲಾಭವನ್ನು ಗ್ರಾಹಕರಿಗೆ ನೀಡಲಾಗಿದ್ದು, ಧಾರಾ ಸೋಯಾಬೀನ್ ಎಣ್ಣೆ ಮತ್ತು ಧಾರಾ ರೈಸ್ ಬ್ರ್ಯಾನ್ ತೈಲದ ಎಂಆರ್‌ಪಿಯನ್ನು ಕಡಿಮೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಪ್ರತಿ ಲೀಟರ್‌ಗೆ 14 ರೂ. ಕಡಿತದೊಂದಿಗೆ ಮುಂದಿನ ವಾರದ ವೇಳೆಗೆ ಹೊಸ ಬೆಲೆಯೊಂದಿಗೆ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿರಲಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ