State Bank Of India ನ 45 ಕೋಟಿ ಗ್ರಾಹಕರಿಗೊಂದು ಮಹತ್ವದ ಸುದ್ದಿ, ವಹಿವಾಟಿನ ನಿಯಮಗಳು ಬದಲಾಗಿವೆಯಾ?

PIB Fact Check: ವೈರಲ್ ಆಗುತ್ತಿರುವ ಒಂದು ಸಂದೇಶದಲ್ಲಿ ಉಳಿತಾಯ ಖಾತೆಯಲ್ಲಿ ನೀವು ವಾರ್ಷಿಕವಾಗಿ ಕೇವಲ 40 ವಹಿವಾಟುಗಳನ್ನು ಮಾತ್ರ ಮಾಡಬಹುದು ಮತ್ತು ಒಂದು ವೇಳೆ 40 ವಹಿವಾಟುಗಳು ದಾಟಿದರೆ, ಪ್ರತಿ ಹೆಚ್ಚುವರಿ ವಹಿವಾಟಿಗೆ ನಿಮ್ಮ ಖಾತೆಯಲ್ಲಿ ನೀವು ಇರಿಸಿದ ಹಣದಿಂದ ರೂ.57.50 ಕಡಿತಗೊಳಿಸಲಾಗುವುದು ಎನ್ನಲಾಗಿದೆ.  

Written by - Nitin Tabib | Last Updated : Aug 19, 2022, 01:12 PM IST
  • ನೀವೂ ಕೂಡ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದರೆ,
  • ಈ ಸುದ್ದಿ ನಿಮಗಾಗಿ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನಲ್ಲಿನ
  • ವಹಿವಾಟಿನ ಕುರಿತು ಸಂದೇಶವೊಂದು ಭಾರಿ ವೈರಲ್ ಆಗುತ್ತಿದೆ.
State Bank Of India ನ 45 ಕೋಟಿ ಗ್ರಾಹಕರಿಗೊಂದು ಮಹತ್ವದ ಸುದ್ದಿ, ವಹಿವಾಟಿನ ನಿಯಮಗಳು ಬದಲಾಗಿವೆಯಾ? title=
State Bank Of India Latest News

PIB Fact Check: ನೀವೂ ಕೂಡ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದರೆ, ಈ ಸುದ್ದಿ ನಿಮಗಾಗಿ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಜೊತೆಗಿನ ವಹಿವಾಟಿನ ಕುರಿತು ಸಂದೇಶವೊಂದು ಭಾರಿ ವೈರಲ್ ಆಗುತ್ತಿದೆ. ಈ ವೈರಲ್ ಸಂದೇಶದಲ್ಲಿ ನೀವು ಒಂದು ವರ್ಷದಲ್ಲಿ ಕೇವಲ 40 ವಹಿವಾಟುಗಳನ್ನು ಮಾತ್ರ ನಡೆಸಬಹುದು ಎನ್ನಲಾಗಿದೆ. ಒಂದು ವೇಳೆ ನಿಮ್ಮ ವಹಿವಾಟುಗಳ ಸಂಖ್ಯೆ 40 ದಾಟಿದರೆ ಪ್ರತಿಯೊಂದು ಹೆಚ್ಚುವರಿ ವಹಿವಾಟಿಗೆ ನಿಮ್ಮ ಖಾತೆಯಿಂದ ರೂ.57.50 ಕಡಿತಗೊಳಿಸಲಾಗುವುದು ಎನ್ನಲಾಗುತ್ತಿದೆ. 

ಇದೊಂದು ನಕಲಿ ಸುದ್ದಿ ಎಂದ PIB
ಈ ಕುರಿತಾದ ಮತ್ತೊಂದು ವೈರಲ್ ಆಗುತ್ತಿರುವ ಸಂದೇಶದಲ್ಲಿ ನೀವು ಏಟಿಎಂನಿಂದ 4 ಬಾರಿಗಿಂತ ಹೆಚ್ಚು ಬಾರಿ ಹಣವನ್ನು ಪಡೆದರೆ ನಿಮ್ಮ ಖಾತೆಯಿಂದ ರೂ.173 ಕಡಿತಗೊಳಿಸಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಇಂತಹ ಯಾವುದೇ ನಿಯಮ ಬ್ಯಾಂಕ್ ಮಾಡಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ. ಈ ಕುರಿತಾದ ಎಲ್ಲಾ ಹಕ್ಕುಮಂಡನೆಗಳು ನಕಲಿಯಾಗಿವೆ ಮತ್ತು ವಹಿವಾಟಿಗೆ ಸಂಬಂಧಿಸಿದ ಯಾವುದೇ ನಿಯಮಗಳಲ್ಲಿ ಬ್ಯಾಂಕ್ ಬದಲಾವಣೆ ಮಾಡಿಲ್ಲ ಎಂದು ಅದು ಹೇಳಿದೆ.

ಇದನ್ನೂ ಓದಿ-PNB ಗ್ರಾಹಕರೇ ಆಗಸ್ಟ್ 31ರ ಮೊದಲು ಈ ಕೆಲಸವನ್ನು ತಪ್ಪದೇ ಪೂರ್ಣಗೊಳಿಸಿ

ಪ್ರತಿ ತಿಂಗಳು 5 ವಹಿವಾಟುಗಳು ಉಚಿತ
ಇನ್ನೊಂದೆಡೆ ನೀವು ನಿಮ್ಮ ಬ್ಯಾಂಕಿನ ಎಟಿಎಂನಿಂದ ತಿಂಗಳಿಗೆ ಒಟ್ಟು 5 ವಹಿವಾಟುಗಳನ್ನು ಉಚಿತವಾಗಿ ಮಾಡಬಹುದು ಎಂದು ಪಿಐಬಿ ಸ್ಪಷ್ಟಪಡಿಸಿದೆ. ಇದನ್ನು ಹೊರತುಪಡಿಸಿ ರೂ.21 ಗರಿಷ್ಟ ವಹಿವಾಟು ಶುಲ್ಕ ಮತ್ತು ಒಂದು ವೇಳೆ ಯಾವುದೇ ರೀತಿಯ ತೆರಿಗೆ ಇದ್ದರೆ ಅದನ್ನು ಪ್ರತ್ಯೇಕವಾಗಿ ಪಾವತಿಸಬೇಕು ಎಂದು ಫ್ಯಾಕ್ಟ್ ಚೆಕ್ ತಂಡ ಹೇಳಿದೆ. ಹೀಗಾಗಿ ವೈರಲ್ ಆಗುತ್ತಿರುವ ಎರಡು ಸಂದೇಶಗಳು ನಕಲಿಯಾಗಿವೆ ಎಂದು ಪಿಐಬಿ ಹೇಳಿದೆ. ವೈರಲ್ ಆಗುತ್ತಿರುವ ಈ ಸಂದೇಶಗಳಲ್ಲಿ ಆಧಾರ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ 4.78ಲಕ್ಷ ಸಾಲ ನೀಡುವ ಕುರಿತು ಕೂಡ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ-Used Cars: 2 ಲಕ್ಷ ಬಜೆಟ್‌ನಲ್ಲಿ ಖರೀದಿಸಿ ಈ ಕಾರುಗಳನ್ನು!

ಪಿಐಬಿ ಫ್ಯಾಕ್ಟ್ ಚೆಕ್ ಏನು?
ಸಾಮಾಜಿಕ ಮಾಧ್ಯಮಗಳ ಇಂದಿನ ಯುಗದಲ್ಲಿ ನಕಲಿ ಸುದ್ದಿಗಳ ಹರಡುವಿಕೆಯ ಅಪಾಯ ಕೂಡ ಹೆಚ್ಚಾಗಿದೆ. ಒಂದು ವೇಳೆ ನಿಮ್ಮ ವಾಟ್ಸ್ ಆಪ್ ಖಾತೆ ಅಥವಾ ಇತರ ಸಾಮಾಜಿಕ ಮಾಧ್ಯಮ ಖಾತೆಗೂ ಕೂಡ ಇಂತಹ ಯಾವುದೇ ರೀತಿಯ ನಕಲಿ ಸಂದೇಶ ಬಂದಿದ್ದು ಅಥವಾ ಅವುಗಳ ಮೇಲೆ ನಿಮ್ಮ ಸಂದೇಹವಿದ್ದಲ್ಲಿ, ಪಿಐಬಿ ಮೂಲಕ ನೀವು ಅವುಗಳ ಫ್ಯಾಕ್ಟ್ ಚೆಟ್ ಮಾಡಬಹುದು. ಇದಕ್ಕಾಗಿ ನೀವು https://factcheck.pib.gov.in/ ಗೆ ಭೇಟಿ ನೀಡಬಹುದು ಅಥವಾ 8799711259 ಮೊಬೈಲ್ ಸಂಖ್ಯೆಗೆ ವಾಟ್ಸ್ ಆಪ್ ಅಥವಾ pibfactcheck@gmail.com ಗೆ ಮೇಲ್ ಬರೆದೂ ಕೂಡ ಅದರ ಫ್ಯಾಕ್ಟ್ ಚೆಕ್ ಕೈಗೊಳ್ಳಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News