Twitter Takeover: ಟ್ವಿಟ್ಟರ್-ಎಲೋನ್ ಮಸ್ಕ್ ಒಪ್ಪಂದದಲ್ಲಿ ಚೀನಾ ಕನೆಕ್ಷನ್ ಕಂಡ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್

Elon Musk's Twitter Takeover: ಎಲೋನ್ ಮಸ್ಕ್ ಇದೀಗ ಮೈಕ್ರೋಬ್ಲಾಗಿಂಗ್ ಸೈಟ್ ಆಗಿರುವ ಟ್ವಿಟರ್‌ನ ನೂತನ ಮಾಲೀಕರಾಗಲಿದ್ದಾರೆ. ಸದ್ಯ ಇಂಟರ್ನೆಟ್ ನಲ್ಲಿ ನಡೆಯುತ್ತಿರುವ ಬಿಸಿ ಚರ್ಚೆ ಇದಾಗಿದೆ, ಈ ಕುರಿತು ನೆಟ್ಟಿಗರ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಏತನ್ಮಧ್ಯೆ, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್, ಟ್ವಿಟರ್ ಸ್ವಾಧೀನ ಒಪ್ಪಂದದಲ್ಲಿ ಚೀನಾದ ಕನೆಕ್ಷನ್ ಕಂಡುಹಿಡಿದಿದ್ದಾರೆ.

Written by - Nitin Tabib | Last Updated : Apr 26, 2022, 01:53 PM IST
  • ಎಲೋನ್ ಮಸ್ಕ್ ಸ್ವಾಧೀನಕ್ಕೆ ಟ್ವಿಟ್ಟರ್
  • ಪ್ರತಿಕ್ರಿಯೆ ನೀಡಿದ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್
  • ಒಪ್ಪಂದದಲ್ಲಿ ಚೀನಾ ಕನೆಕ್ಷನ್ ಕಂಡ ಬೆಜೋಸ್
Twitter Takeover: ಟ್ವಿಟ್ಟರ್-ಎಲೋನ್ ಮಸ್ಕ್ ಒಪ್ಪಂದದಲ್ಲಿ ಚೀನಾ ಕನೆಕ್ಷನ್ ಕಂಡ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ title=
Twitter Takeover

Jeff Bezos Founds Chinese Connection Over Twitter Takeover Deal: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಅವರು ಅಂತಿಮವಾಗಿ ಟ್ವಿಟರ್ ಅನ್ನು ಖರೀದಿಸಿದ್ದಾರೆ. 44 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ, ಸುಮಾರು 3368 ಶತಕೋಟಿ ರೂಪಾಯಿಗಳಿಗೆ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಮಸ್ಕ್ ಕಂಪನಿ ಹೇಳಿಕೊಂಡಿದೆ. ಈ ನಡುವೆ ಈ ಒಪ್ಪಂದದ ಕುರಿತು ಅಮೆಜಾನ್ ಮುಖ್ಯಸ್ಥರಾಗಿರುವ ಜೆಫ್ ಬೆಜೋಸ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದು, ಈ ಒಪ್ಪಂದದಲ್ಲಿ ಚೀನಾ ಕನೆಕ್ಷನ್ ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. 

ಟ್ವೀಟ್ ಮಾಡಿದ ಜೆಫ್ ಬೆಜೋಸ್
ಈ ಒಪ್ಪಂದದ ಕುರಿತು ಪ್ರತಿಕ್ರಿಯೆ ನೀಡಿರುವ  ಬೆಜೋಸ್, ನ್ಯೂಯಾರ್ಕ್ ಟೈಮ್ಸ್ ವರದಿಗಾರ ಮೈಕ್ ಫಾರ್ಸಿತ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ. ತನ್ನ ಪೋಸ್ಟ್ ಗೆ ಶೀರ್ಷಿಕೆ ಬರೆದುಕೊಂಡಿರುವ ಬೆಜೋಸ್, 'ಇಂಟರೆಸ್ಟಿಂಗ್ ಪ್ರಶ್ನೆ! ಟೌನ್ ಸ್ಕ್ವೇರ್ ಮೂಲಕ ಚೀನಾ ಸರ್ಕಾರ ಸ್ವಲ್ಪ ಲಾಭ ಗಳಿಸಿದೆಯೇ?' ಎಂಬ ಸಂದೇಹ ಹೊರಹಾಕಿದ್ದಾರೆ.  ಬೆಜೋಸ್ ಅವರ ಈ ಟ್ವೀಟ್ ಚೀನಾದೊಂದಿಗೆ ಮಸ್ಕ್ ಕಂಪನಿಯ ನಿಕಟ ಸಂಬಂಧವನ್ನು ಸೂಚಿಸುತ್ತದೆ ಎಂಬಂತಿದೆ. ಇನ್ನೊಂದೆಡೆ, ಮಸ್ಕ್ ಕಂಪನಿಗೆ ಚೀನಾ ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಾಗಿದೆ. ಟೆಸ್ಲಾ ಚೀನಾದಲ್ಲಿ ತನ್ನ ಕಾರು ಉತ್ಪಾದಕ ಘಟಕವನ್ನು ಸ್ಥಾಪಿಸಿದೆ. ಇದೇ ವೇಳೆ ಇವಿ ಬ್ಯಾಟರಿಗಳಿಗಾಗಿ ಚೈನೀಸ್ ಪೂರೈಕೆದಾರರ ಮೇಲೆ ಇಲೆಕ್ಟ್ರಿಕ್ ವಾಹನ ತಯಾರಿಕೆಯ ದೈತ್ಯ ಕಂಪನಿಯ ಅವಲಂಬನೆಯನ್ನು ಈ ಟ್ವೀಟ್ ಸೂಚಿಸುತ್ತಿದೆ.

ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಎಲೋನ್ ಮಸ್ಕ್, ತಮ್ಮ ಟ್ವೀಟ್ ನಲ್ಲಿ ವಾಕ್ ಸ್ವಾತಂತ್ರ್ಯ ಒಂದು ಕಾರ್ಯಶೀಲ ಪ್ರಜಾಪ್ರಭುತ್ವದ ಆಧಾರವಾಗಿದೆ ಮತ್ತು ಮಾನವತೆಯ ಭವಿಷ್ಯದ ಕುರಿತು ಮಹತ್ವದ ಚರ್ಚೆ ನಡೆಸಲು ಟ್ವಿಟ್ಟರ್ ಒಂದು ಡಿಜಿಟಲ್ ಟೌನ್ ಸ್ಕ್ವೇರ್ ಆಗಿದೆ ಎಂದಿದ್ದರು.

ಮುಂದೆ ಏನಾಗುತ್ತದೆ ಕಾದುನೋಡೋಣ: ಬೆಜೋಸ್
ಈ ಪೋಸ್ಟ್‌ನ ಮೂಲಕ ಬೆಜೋಸ್, ಟೆಸ್ಲಾ ಮತ್ತು ಟ್ವಿಟರ್ ಎರಡರಲ್ಲೂ ಚೀನಾ ಪಾತ್ರವನ್ನು ನಿರ್ವಹಿಸಬೇಕಾಗಲಿದೆ ಎಂಬ ತಮ್ಮ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ. ಒಪ್ಪಂದದ ಕುರಿತು ಪ್ರತಿಕ್ರಿಯೆ ನೀಡುವ ತಮ್ಮ ಮತ್ತೊಂದು ಟ್ವೀಟ್ ನಲ್ಲಿ ಬೆಜೋಸ್, 'ಈ ಪ್ರಶ್ನೆಗೆ ಬಹುಶಃ ನನ್ನ ಬಳಿ ಸ್ವಂತ ಯಾವುದೇ  ಉತ್ತರವಿಲ್ಲ. ಆದರೆ, ಟ್ವಿಟ್ಟರ್ ನಲ್ಲಿ ಸೆನ್ಸಾರ್‌ಶಿಪ್‌ಗಿಂತ ಹೆಚ್ಚಾಗಿ ಚೀನಾದಲ್ಲಿ ಟೆಸ್ಲಾಗೆ ತೊಡಕುಗಳು ಉಂಟಾಗಬಹುದು ಎಂಬುದು ಈ ನಿಟ್ಟಿನಲ್ಲಿ ಹೆಚ್ಚು ಸಂಭವನೀಯ ಫಲಿತಾಂಶವಾಗಿದೆ. ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ಕಾದುನೋಡೋಣ' ಎಂದಿದ್ದಾರೆ.

ಇದನ್ನೂ ಓದಿ-ಎಲಾನ್ ಮಸ್ಕ್ ಅಧೀನದಲ್ಲಿ ಟ್ವಿಟರ್ ಭವಿಷ್ಯ ಅಸ್ಪಷ್ಟ.. ಸಿಇಒ ಪರಾಗ್ ಅಗರವಾಲ್ ಹೀಗೆಂದಿದ್ದೇಕೆ?

ಒಂದರ ಮೇಲೊಂದರಂತೆ ಹಲವಾರು ಟ್ವೀಟ್ ಗಳನ್ನು ಮಾಡಿರುವ ಜೆಫ್ ಬೆಜೋಸ್ ನಂತರ ಎಲೋನ್ ಮಸ್ಕ್ ಕುರಿತು ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಈ ಕುರಿತು ಮುಂದೆ ಬರೆದುಕೊಂಡಿರುವ ಬೆಜೋಸ್, ಮಸ್ಕ್  ತುಂಬಾ ನಿಪುಣರಾಗಿದ್ದಾರೆ ಮತ್ತು ಅವರು ಈ ವಿಷಯದ ಸಂಕೀರ್ಣತೆಯನ್ನು ಉತ್ತಮವಾಗಿ ನಿಭಾಯಿಸುತ್ತಾರೆ ಎಂದಿದ್ದಾರೆ. ಆದರೆ, ತಮ್ಮ ಎರಡನೇ ಟ್ವೀಟ್ ನಲ್ಲಿ ತಮ್ಮ ಪ್ರಶ್ನೆಗೆ ತಾವೇ ಉತ್ತರಿಸಿರುವ ಅವರು, ' ಬಹುಶಃ ಈ ಪ್ರಶ್ನೆಗೆ ನನ್ನ ಬಳಿ ಯಾವುದೇ ಸ್ವಂತ ಉತ್ತರವಿಲ್ಲ' ಎಂದಿದ್ದು ಮಾತ್ರ ನಿಜ.

ಇದನ್ನೂ ಓದಿ-Twitter-Elon Musk Deal: ಎಲಾನ್ ಮಸ್ಕ್ ಟ್ವಿಟ್ಟರ್ ಗೆ ನೂತನ ಮುಖ್ಯಸ್ಥ! 3.25 ಲಕ್ಷ ಕೋಟಿಯ ಡೀಲ್ ಆಲ್ಮೋಸ್ಟ್ ಫೈನಲ್!
 
ನನ್ನ ಕೆಟ್ಟ ವಿಮರ್ಶಕರು ಮುಂದೆಯೂ ಕೂಡ ಟ್ವಿಟ್ಟರ್ ನಲ್ಲಿರಲಿದ್ದಾರೆ: ಮಸ್ಕ್
ಟ್ವಿಟರ್ ಸ್ವಾಧೀನದ ಒಪ್ಪಂದಕ್ಕೆ ಸಂಬಂಧಿಉಸಿದ ಪ್ರತಿಕ್ರಿಯೆಗಳು ಮುಂದುವರೆಯುತ್ತಿವೆ. ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಟ್ವೀಟ್‌ - ಮರು ಟ್ವೀಟ್‌ಗಳು ಮುಂದುವರೆದಿವೆ. ಇಂತಹ ಮತ್ತೊಂದು ವೈರಲ್ ಟ್ವೀಟ್ ಕುರಿತು ಮಾತನಾಡಿರುವ ಮಸ್ಕ್, 'ನನ್ನನ್ನು ಕೆಟ್ಟದಾಗಿ ವಿಮರ್ಶೆ ಮಾಡುವವರು ಮುಂದೆಯೂ ಕೂಡ ಟ್ವಿಟ್ಟರ್ ನಲ್ಲಿ ಮುದುವರೆಯಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಇದುವೇ ವಾಕ್ ಸ್ವಾತಂತ್ರ್ಯದ ನಿಜವಾದ ಅರ್ಥ' ಎಂದಿದ್ದರು. ಮಸ್ಕ್ ಅವರ ಈ ಟ್ವೀಟ್ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News