ಬೆಂಗಳೂರು : ಕರೋನಾ ಅವಧಿಯಲ್ಲಿ ಲಾಕ್‌ಡೌನ್ ಹೇರಿದ ನಂತರ ಬಡತನ ರೇಖೆಗಿಂತ ಕೆಳಗಿರುವ ಜನರು ಮತ್ತು ಕಾರ್ಮಿಕರಿಗಾಗಿ ಸರ್ಕಾರವು ಉಚಿತ ಪಡಿತರ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಎಂದು ಹೆಸರಿಡಲಾಗಿದೆ. ಕೊನೆಯ ದಿನಗಳಲ್ಲಿ ಈ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಸಹ ಮಾಡಲಾಗಿದೆ.
ಈ ಯೋಜನೆಯ ಲಾಭ ಪಡೆಯಬೇಕಾದರೆ ಪಡಿತರ ಚೀಟಿಯನ್ನು ಹೊಂದಿರಬೇಕು. ಆಧಾರ್ ಕಾರ್ಡ್ ಮೂಲಕವೂ ಈ ಯೋಜನೆಯ ಲಾಭವನ್ನು ಪಡೆಯಬಹುದು. ಇನ್ನು ಪಡಿತರ ಸಿಗದೆ ಹೋದರೆ ಈ ಬಗ್ಗೆ ದೂರು ನೀಡಬಹುದು. ದೂರು ನೀಡಲು ಎಲ್ಲಿಯೂ ಹೋಗುವ ಅಗತ್ಯವಿಲ್ಲ, ಆನ್‌ಲೈನ್‌ನಲ್ಲಿ ದೂರು ದಾಖಲಿಸಬಹುದು.
ಇದನ್ನೂ ಓದಿ : GST Council Meeting: ಹಣದುಬ್ಬರದ ಶಾಕ್! ಬ್ಯಾಂಕ್‌ನ ಈ ಸೇವೆಗೆ ತೆರಿಗೆ, ಈ ವಸ್ತುಗಳು ದುಬಾರಿ?
ಪಡಿತರ ಸಿಗದೇ ಹೋದರೆ ದೂರು ನೀಡುವುದು ಹೇಗೆ ?
ಪಡಿತರ ಸಿಗದೇ ಹೋದರೆ ವೆಬ್‌ಸೈಟ್ ಮತ್ತು ಇ-ಮೇಲ್ ಮೂಲಕ ಆನ್‌ಲೈನ್‌ನಲ್ಲಿ ದೂರು ನೀಡಬಹುದು. ಇದಲ್ಲದೇ ಸಹಾಯವಾಣಿ ಸಂಖ್ಯೆಗೂ ದೂರು ನೀಡಬಹುದು. ಇ-ಮೇಲ್‌ನಲ್ಲಿ ದೂರು ನೀಡುವುದಾದರೆ ದೂರನ್ನು ಬರೆದು ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು. ಮಾತ್ರವಲ್ಲ ಪಡಿತರ ಡಿಪೋ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಬೇಕು.
ಇ-ಮೇಲ್ ಮೂಲಕ ದೂರು ನೀಡುವುದು :
ಸರ್ಕಾರವು ಒದಗಿಸುತ್ತಿರುವ ಸೌಲಭ್ಯದ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗದೇ ಹೋದರೆ ದೂರನ್ನು prs-fcs@karnataka.gov.inಗೆ ಕಳುಹಿಸಬಹುದು. ಇದಲ್ಲದೆ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ಕೂಡಾ ದೂರು ದಾಖಲಿಸಬಹುದು. ಇನ್ನು 18004259339 ಗೆ ಕರೆಟೋಲ್ ಫ್ರೀ ನಂಬರ್ ಗೆ ಕರೆ ಮಾಡುವ ಮೂಲಕ ಕೂಡಾ ದೂರು ದಾಖಲಿಸಬಹುದು. ಇದಕ್ಕಾಗಿ ಫೋನ್‌ನಲ್ಲಿ ಹೆಸರು, ವಿಳಾಸ, ಪಡಿತರ ಚೀಟಿಗೆ ಸಂಬಂಧಿಸಿದ ಮಾಹಿತಿ ಪಡಿತರ ಡಿಪೋ ಬಗ್ಗೆಯೂ ಮಾಹಿತಿ ನೀಡಬೇಕಾಗುತ್ತದೆ. ಇದಲ್ಲದೆ, ಕಚೇರಿಗೆ ಭೇಟಿ ನೀಡುವ ಮೂಲಕವೂ ದೂರು ಸಲ್ಲಿಸಬಹುದು.
ಇದನ್ನೂ ಓದಿ : Arecanut Price: ರಾಜ್ಯದ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ ಎಷ್ಟಿದೆ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.