ಹೊಸ ವರ್ಷದಲ್ಲಿ ದುಪ್ಪಟ್ಟಾಗುವುದು ಸರ್ಕಾರಿ ನೌಕರರ ವೇತನ .! ಸರ್ಕಾರವೇ ನೀಡಿದ ಮಾಹಿತಿ ಇದು

2024ರ ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರಿ ನೌಕರರ ಫಿಟ್‌ಮೆಂಟ್  ಫ್ಯಾಕ್ಟರ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾತ್ರವಲ್ಲ ತುಟ್ಟಿ ಭತ್ಯೆ ಮತ್ತು ಹಳೆಯ ಪಿಂಚಣಿ ಯೋಜನೆ ಬಗ್ಗೆಯೂ ನಿರ್ಧಾರ ಪ್ರಕಟವಾಗಬಹುದು. 

Written by - Ranjitha R K | Last Updated : Dec 5, 2022, 02:52 PM IST
  • ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ
  • ಕೆಲವು ಪ್ರಮುಖ ನಿರ್ಧಾರಗಳಿಗೆ ಸರ್ಕಾರ ಅಸ್ತು ಎನ್ನುವ ಸಾಧ್ಯತೆ
  • ಫಿಟ್‌ಮೆಂಟ್ ಅಂಶದ ಬಗ್ಗೆ ಹೊರ ಬೀಳಲಿದೆ ನಿರ್ಧಾರ
ಹೊಸ ವರ್ಷದಲ್ಲಿ ದುಪ್ಪಟ್ಟಾಗುವುದು ಸರ್ಕಾರಿ ನೌಕರರ ವೇತನ .! ಸರ್ಕಾರವೇ ನೀಡಿದ ಮಾಹಿತಿ ಇದು   title=
7th pay commission

ಬೆಂಗಳೂರು : ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ಸಿಗಲಿದೆ. 2023 ರ ಆರಂಭದಲ್ಲಿಯೇ, ಸರ್ಕಾರವು  ಕೆಲವು ಪ್ರಮುಖ ನಿರ್ಧಾರಗಳಿಗೆ ಅಸ್ತು ಎನ್ನುವ ಸಾಧ್ಯತೆಗಳು ದಟ್ಟವಾಗಿದೆ. ಹೊಸ ವರ್ಷದ ಆರಂಭದಲ್ಲಿಯೇ  ನೌಕರರ ಡಿಎ ಹೆಚ್ಚಳವಾಗಲಿದೆ. ಇದಲ್ಲದೇ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಮೂರು  ಪ್ರಮುಖ ನಿರ್ಧಾರಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಲಿದೆ.  

ಸರ್ಕಾರ ತೆಗೆದುಕೊಳ್ಳಲಿರುವ ಎಲ್ಲಾ ನಿರ್ಧಾರಗಳು ನೌಕರರ ವೇತನದೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. 2023 ರಲ್ಲಿ ದೀರ್ಘಾವಧಿಯಿಂದ ನಡೆದುಕೊಂಡು ಬಂದಿರುವ ಫಿಟ್‌ಮೆಂಟ್ ಅಂಶದ ಕುರಿತು, ಸರ್ಕಾರ ಈ ಬಾರಿ ನಿರ್ಧಾರ ತೆಗೆದುಕೊಳ್ಳಬಹುದು. 2024ರ ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರಿ ನೌಕರರ ಫಿಟ್‌ಮೆಂಟ್  ಫ್ಯಾಕ್ಟರ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾತ್ರವಲ್ಲ ತುಟ್ಟಿ ಭತ್ಯೆ ಮತ್ತು ಹಳೆಯ ಪಿಂಚಣಿ ಯೋಜನೆ ಬಗ್ಗೆಯೂ ನಿರ್ಧಾರ ಪ್ರಕಟವಾಗಬಹುದು. 

ಇದನ್ನೂ ಓದಿ : Best Mileage Car: ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುತ್ತೆ ಮಾರುತಿ ಸುಜುಕಿಯ ಈ ಕಾರ್

ಫಿಟ್‌ಮೆಂಟ್ ಅಂಶದ  ಬಗ್ಗೆ ನಿರ್ಧಾರ  : 
ಕೇಂದ್ರ ಸರ್ಕಾರಿ ನೌಕರರು ಭಾರೀ ನಿರೀಕ್ಷೆಯಲ್ಲಿರುವ  ಫಿಟ್ ಮೆಂಟ್ ಅಂಶದ ಬಗ್ಗೆ ಹೊಸ ವರ್ಷದಲ್ಲಿ ನಿರ್ಧಾರ ಹೊರ ಬೀಳುವ ಎಲ್ಲಾ ಸಾಧ್ಯತೆಗಳಿವೆ. ತುಟ್ಟಿಭತ್ಯೆ, ಎಚ್‌ಆರ್‌ಎ, ಟಿಎ, ಬಡ್ತಿ ನಂತರ, ಫಿಟ್‌ಮೆಂಟ್ ಅಂಶದ ಬಗ್ಗೆ ನಿಖರ ನಿರ್ಧಾರ ಹೊರ ಬೀಳುವ ಎಲ್ಲಾ ಸಾಧ್ಯತೆಗಳಿವೆ. ನೌಕರರ ವೇತನವನ್ನು 8000 ರೂ.ಗಳಷ್ಟು ಹೆಚ್ಚಿಸುವ ಬಗ್ಗೆ ಸರರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನಲಾಗುತ್ತಿದೆ.  

ಮತ್ತೆ ಹೆಚ್ಚಲಿದೆ ತುಟ್ಟಿಭತ್ಯೆ  :
ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಪ್ರತಿ 6 ತಿಂಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. AICPI ಡೇಟಾದ ಆಧಾರದ ಮೇಲೆ, ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಜನವರಿ ಮತ್ತು ಜುಲೈ ತಿಂಗಳಲ್ಲಿ ತುಟ್ಟಿಭತ್ಯೆಯಲ್ಲಿ ಹೆಚ್ಚಳವಾಗುತ್ತದೆ. ಪ್ರತಿ ವರ್ಷದಂತೆ 2023ರಲ್ಲೂ ಕೇಂದ್ರ ನೌಕರರ ತುಟ್ಟಿ ಭತ್ಯೆಯಲ್ಲಿ ಹೆಚ್ಚಳವಾಗಲಿದೆ. ಜನವರಿ 2023 ರ  ಡಿಎಯನ್ನು ಮಾರ್ಚ್ ಗೂ ಮುನ್ನ ಘೋಷಿಸಲಾಗುವುದು. ಇದುವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ ಮುಂದಿನ ವರ್ಷವೂ ಶೇ.4ರಷ್ಟು ಡಿಎ ಹೆಚ್ಚಳವಾಗುವ ನಿರೀಕ್ಷೆಯಿದೆ.  

ಇದನ್ನೂ ಓದಿ : ರೈತರಿಗೊಂದು ಸಿಹಿ ಸುದ್ದಿ.! eKYC ಮಾಡಿಸಿದರೆ ಸರ್ಕಾರ ನೀಡುವುದು 6,000 ರೂಪಾಯಿ.!

ಸಿಗಲಿದೆ ಹಳೆ ಪಿಂಚಣಿ ಯೋಜನೆಯ ಲಾಭ !
ಮುಂದಿನ ವರ್ಷ ಕೇಂದ್ರ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರಬಹುದು. ಹಳೆ ಪಿಂಚಣಿ ಜಾರಿಯಾಗಬೇಕು ಎಂಬುದು ನೌಕರರ ಬಹುದಿನಗಳ ಬೇಡಿಕೆ. ಕೆಲವು ರಾಜ್ಯಗಳು ಚುನಾವಣಾ ಭರವಸೆಗಳನ್ನು ಇಟ್ಟುಕೊಂಡು ಹಳೆಯ ಪಿಂಚಣಿಯನ್ನು ಜಾರಿಗೆ ತಂದಿವೆ. ಮೂಲಗಳ ಪ್ರಕಾರ, 7 ನೇ ವೇತನ ಆಯೋಗದ ಅಡಿಯಲ್ಲಿ, ಮೋದಿ ಸರ್ಕಾರವು 2024ಕ್ಕೂ ಮೊದಲು ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವ ಸಾಧ್ಯತೆಗಳು ದಟ್ಟವಾಗಿವೆ.  

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News