Free Seat, Free Food Offer: ಉಚಿತ ವಿಮಾನ ಪ್ರಯಾಣಕ್ಕೆ ಇಲ್ಲಿದೆ ಸುವರ್ಣಾವಕಾಶ, ಉಚಿತ ಪ್ರವಾಸದ ಜೊತೆಗೆ ಉಚಿತ ಊಟ !

Free Seat And Free Food Offer - ಅಗ್ಗದ ವಿಮಾನಗಳನ್ನು ಒದಗಿಸುವ ವಿಮಾನಯಾನ ಸಂಸ್ಥೆಯಾದ GoFirst ತನ್ನ ವೆಬ್‌ಸೈಟ್ www.flygofirst.com ನಲ್ಲಿ 'ಉಚಿತ ಆಸನ ಮತ್ತು ಉಚಿತ ಊಟ' ಕೊಡುಗೆಯ ವಿವರಗಳನ್ನು ಹಂಚಿಕೊಂಡಿದೆ. ಈ ಕೊಡುಗೆಯು ಡಿಸೆಂಬರ್ 16 ರಿಂದ ಜನವರಿ 10, 2022 ರವರೆಗೆ ಮಾತ್ರ ಲಭ್ಯವಿದೆ.

Written by - Nitin Tabib | Last Updated : Dec 20, 2021, 08:12 PM IST
  • ಈಗ ನೀವು ಉಚಿತವಾಗಿ ವಿಮಾನದಲ್ಲಿ ಪ್ರಯಾಣಿಸಬಹುದು
  • ಇದಕ್ಕಾಗಿ GoFirst ಏರ್‌ಲೈನ್ 'ಉಚಿತ ಆಸನಗಳು ಮತ್ತು ಉಚಿತ ಊಟ' ನೀಡುತ್ತಿದೆ
  • ಈ ಕೊಡುಗೆಯ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ
Free Seat, Free Food Offer: ಉಚಿತ ವಿಮಾನ ಪ್ರಯಾಣಕ್ಕೆ ಇಲ್ಲಿದೆ ಸುವರ್ಣಾವಕಾಶ, ಉಚಿತ ಪ್ರವಾಸದ ಜೊತೆಗೆ ಉಚಿತ ಊಟ ! title=
Free Seat, Free Food Offer (File Photo)

ನವದೆಹಲಿ: Aviation News: ಒಂದು ವೇಳೆ ನೀವೂ ಕೂಡ ಎಲ್ಲಿಗಾದರೂ ಪ್ರಯಾಣಕ್ಕೆ ಯೋಜನೆ ರೂಪಿಸುತ್ತಿದ್ದಾರೆ,  ನಿಮಗೊಂದು ಒಳ್ಳೆಯ ಸುದ್ದಿ ಇದೆ. ಕರೋನಾ ಸಾಂಕ್ರಾಮಿಕದ ನಂತರ, ಈಗ ಎಲ್ಲವೂ ಸಾಮಾನ್ಯವಾಗಿದೆ, ವಿಮಾನಯಾನ ಕಂಪನಿಗಳು ಮತ್ತೆ ಕೊಡುಗೆಗಳನ್ನು ನೀಡಲು ಪ್ರಾರಂಭಿಸಿವೆ. ಈ ಅನುಕ್ರಮದಲ್ಲಿ, GoFirst (GoFirst Offer) ಗ್ರಾಹಕರನ್ನು ಆಕರ್ಷಿಸಲು ಉಚಿತ ಪ್ರಯಾಣ ಮತ್ತು ಆಹಾರವನ್ನು ನೀಡುತ್ತಿದೆ. ಈ ಕೊಡುಗೆಯ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದನ್ನುತಿಳಿದುಕೊಳ್ಳೋಣ ಬನ್ನಿ.

ಗೋ ಫಸ್ಟ್ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ
ಖಾಸಗಿ ವಿಮಾನಯಾನ ಸಂಸ್ಥೆ GoFirst ಬೆಂಗಳೂರಿನಿಂದ ಆಯ್ದ ವಿಮಾನಗಳಲ್ಲಿ 'ಉಚಿತ ಸೀಟುಗಳು ಮತ್ತು ಊಟ'ದ  (Free Seats & Meals) ಕೊಡುಗೆ ನೀಡುತ್ತಿದೆ. ನೀವು ಸಹ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ ಅಥವಾ ಬೆಂಗಳೂರಿನಿಂದ ಎಲ್ಲೋ ಹೋಗಲು ಯೋಜಿಸುತ್ತಿದ್ದರೆ, ಇದು ನಿಮಗೆ ಉತ್ತಮ ಕೊಡುಗೆಯಾಗಿದೆ. GoFirst ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು 'ಉಚಿತ ಆಸನಗಳು ಮತ್ತು ಉಚಿತ ಊಟ' ಕೊಡುಗೆಯ ಕುರಿತು ವಿವರವಾದ ಮಾಹಿತಿಯನ್ನು ಪಡೆಯಬಹುದು.

ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ ಗೋ ಫಸ್ಟ್
ಟ್ವೀಟ್ ಮಾಡುವ ಮೂಲಕ GoFirst ಈ ಕೊಡುಗೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ  GoFirst, 'ಯಾವುದು ಉತ್ತಮ? ಐಷಾರಾಮಿ ಪ್ರವಾಸ ಅಥವಾ ಉಚಿತ ಆಸನಗಳು ಮತ್ತು ಊಟ? ಸರಿ, ಎರಡೂ! #ಬೆಂಗಳೂರಿನಿಂದ ಆಯ್ದ ವಿಮಾನಗಳಲ್ಲಿ ಆಕರ್ಷಕ ಕೊಡುಗೆಗಳು.' ಎಂದು ಹೇಳಿದೆ.

ಆಫರ್ ಏನಿದೆ ಗೊತ್ತಾ?
ತನ್ನ ಕೊಡುಗೆಯ ಕುರಿತು ವಿವರವಾಗಿ ತಿಳಿಸಿರುವ GoFirst Airline, 'ಬೆಂಗಳೂರಿನಿಂದ ದೇಶಾದ್ಯಂತ ವಿವಿಧ ಸ್ಥಳಗಳಿಗೆ ಹಾರುವ ಪ್ರಯಾಣಿಕರಿಗೆ ನಾವು ವಿಶೇಷ ಕೊಡುಗೆಗಳನ್ನು ಪರಿಚಯಿಸುತ್ತಿದ್ದೇವೆ! ಈಗ ಬೆಂಗಳೂರಿನಿಂದ ವಿಮಾನದಲ್ಲಿ ಐಷಾರಾಮಿ ಪ್ರಯಾಣವನ್ನು ಅನುಭವಿಸಿ. ಈ ವಿಶೇಷ ಕೊಡುಗೆಯ ಅಡಿಯಲ್ಲಿ, ಕಂಪನಿಯು ಬೆಂಗಳೂರಿನಿಂದ ಮುಂಬೈ, ದೆಹಲಿ, ರಾಂಚಿ, ವಾರಣಾಸಿ, ಕೋಲ್ಕತ್ತಾ, ಲಖನೌ ಮತ್ತು ಪುಣೆಗೆ ಹಾರುವ ಪ್ರಯಾಣಿಕರಿಗೆ ಉಚಿತ ಸೀಟುಗಳು ಮತ್ತು ಉಚಿತ ಆಹಾರವನ್ನು (Free Seat And Free Food Offer) ನೀಡಲಿದೆ. 

ಇದನ್ನೂ ಓದಿ-Indian Railways ಜೊತೆ ಸೇರಿ ಕೇವಲ 4000 ರೂ.ಗಳಲ್ಲಿ ಈ ಬಿಸ್ನೆಸ್ ಆರಂಭಿಸಿ ತಿಂಗಳಿಗೆ 80ಸಾವಿರ ಸಂಪಾದಿಸಿ

ಕಂಪನಿಯ ಪ್ರಚಾರಕ್ಕಾಗಿ ವಿಶೇಷ ಕೊಡುಗೆ
ದೇಶದಲ್ಲಿ ದೇಶೀಯ ವಿಮಾನಗಳಲ್ಲಿ ಹಾರಾಟ (Air Travel) ನಡೆಸುವ ಪ್ರಯಾಣಿಕರಿಗೆ ಅಗ್ಗದ ವಿಮಾನಗಳನ್ನು ಒದಗಿಸುವ ಏರ್‌ಲೈನ್ ಕಂಪನಿಯಾದ GoFirst, 'ಉಚಿತ ಆಸನ ಮತ್ತು ಉಚಿತ ಆಹಾರ' ಕೊಡುಗೆಯ ವಿವರಗಳನ್ನು ತನ್ನ ವೆಬ್‌ಸೈಟ್ www.flygofirst.com ನಲ್ಲಿ ಹಂಚಿಕೊಂಡಿದೆ. ಈ ಕೊಡುಗೆಯು ಡಿಸೆಂಬರ್ 16 ರಿಂದ ಜನವರಿ 10, 2022 ರವರೆಗೆ ಮಾತ್ರ ಲಭ್ಯವಿದೆ . ವಾಸ್ತವದಲ್ಲಿ GoFirst ಏರ್‌ಲೈನ್ ಬೆಂಗಳೂರು ವಿಮಾನಗಳ ಪ್ರಚಾರಕ್ಕಾಗಿ ಮತ್ತು ಗ್ರಾಹಕರನ್ನು ಆಕರ್ಷಿಸಲು ಈ ವಿಶೇಷ ಕೊಡುಗೆಯನ್ನು ನೀಡುತ್ತಿದೆ.

ಇದನ್ನೂ ಓದಿ-Atal Pension Yojana: ಕೇವಲ 7 ರೂ. ಹೂಡಿಕೆ ಮಾಡಿ 60,000 ರೂ. ಪಿಂಚಣಿ ಪಡೆಯಿರಿ, ಸರ್ಕಾರದ ಈ ಸೂಪರ್‌ಹಿಟ್ ಯೋಜನೆ ತಿಳಿಯಿರಿ

ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ
ಈ ಕೊಡುಗೆಯನ್ನು ವರ್ಗಾಯಿಸಲಾಗುವುದಿಲ್ಲ ಎಂದು GoFirst ಏರ್‌ಲೈನ್ ಹೇಳಿದೆ. ಅಂದರೆ, ಒಮ್ಮೆ ನೀವು ಈ ಕೊಡುಗೆಯ ಅಡಿಯಲ್ಲಿ ಬುಕ್ ಮಾಡಿದ ನಂತರ, ಅದನ್ನು ಬೇರೆಯವರಿಗೆ ವರ್ಗಾಯಿಸುವ ಹಾಗಿಲ್ಲ. ಈ ಟಿಕೆಟ್ ಅನ್ನು ವರ್ಗಾಯಿಸಲಾಗುವುದಿಲ್ಲ ಅಥವಾ ಟಿಕೆಟ್ ರದ್ದುಗೊಳಿಸಿದಾಗ ಮರುಪಾವತಿ ನೀಡಲಾಗುವುದಿಲ್ಲ. ಯಾವುದೇ ರೀತಿಯ ಮಾಹಿತಿಗಾಗಿ ನೀವು ವೆಬ್‌ಸೈಟ್ ಗೆ ಭೇಟಿ ನೀಡಬಹುದು.

ಇದನ್ನೂ ಓದಿ-SBI 3-in-1 Account: ಒಂದು ಖಾತೆ, ಮೂರು ಸೌಲಭ್ಯಗಳು; ಈ ಖಾತೆಯ ವೈಶಿಷ್ಟ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News