Gold Price Today : ಅಗ್ಗವಾಯಿತು ಚಿನ್ನ, ದುಬಾರಿಯಾಯಿತು ಬೆಳ್ಳಿ

Gold Price Today : ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಇಂದು ಕೂಡಾ ಏರಿಕೆ ಕಂಡು ಬಂದಿದೆ. ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.  

Written by - Ranjitha R K | Last Updated : Dec 20, 2022, 08:58 AM IST
  • ಸಂಶೋಧಕರು ಸಮುದ್ರದ ನೀರಿನಿಂದ ಬ್ಯಾಟರಿಗಳನ್ನು ತಯಾರಿಸಿದ್ದಾರೆ
  • ಲಿಥಿಯಂ ಬ್ಯಾಟರಿಗಳಿಗೆ ಹೋಲಿಸಿದರೆ ಈ ಬ್ಯಾಟರಿ ಅಗ್ಗ
  • ಇದರಲ್ಲಿ ಸೋಡಿಯಂ-ಸಲ್ಫರ್ ಅನ್ನು ಬಳಸಲಾಗಿದೆ.
Gold Price Today : ಅಗ್ಗವಾಯಿತು ಚಿನ್ನ, ದುಬಾರಿಯಾಯಿತು ಬೆಳ್ಳಿ  title=
gold silver price today

ಬೆಂಗಳೂರು : Gold Price Today : ನಿನ್ನೆ ಬಂಗಾರದ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿರಲಿಲ್ಲ. ಆದರೆ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಹಳದಿ ಲೋಹದ ಬೆಲೆಯಲ್ಲಿ 380 ರೂಪಾಯಿಯಷ್ಟು ಇಳಿಕೆಯಾಗಿದೆ. ಈ ಇಳಿಕೆಯೊಂದಿಗೆ 24 ಕ್ಯಾರೆಟ್ ಚಿನ್ನದ ಬೆಲೆ 54,110 ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ  49,600 ರೂ. ಆಗಿದೆ.

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್  ಚಿನ್ನದ ಬೆಲೆ ಹೀಗಿದೆ.

ಚೆನ್ನೈಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 55,190 ರೂಪಾಯಿ ಆಗಿದ್ದು, ಮುಂಬಯಿಯಲ್ಲಿ 54,110  ದೆಹಲಿಯಲ್ಲಿ 54,260 ರೂ. ಬೆಂಗಳೂರಿನಲ್ಲಿ 54,160 ರೂಪಾಯಿ ಆಗಿದ್ದರೆ, ಹೈದರಾಬಾದ್ ನಲ್ಲಿ54,110 ರೂಪಾಯಿ ಆಗಿದೆ. ಕೇರಳದಲ್ಲಿಯೂ 10 ಗ್ರಾಂ ಚಿನ್ನದ ಬೆಲೆ  54,110 ರೂಪಾಯಿ ಆಗಿದೆ. 

ಇದನ್ನೂ ಓದಿ : SUV ಖರೀದಿಸಲು ಬಯಸುವವರಿಗೊಂದು ಬಂಬಾಟ್ ಸುದ್ದಿ... ಈ ಅವಕಾಶ ಮಿಸ್ ಮಾಡ್ಕೋಬೇಡಿ

ಇನ್ನು ಬೆಳ್ಳಿ ಬೆಲೆಯಲ್ಲಿ ಇಂದು ಕೂಡಾ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ನಿನ್ನೆ 300 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಇಂದು ಮತ್ತೆ 200 ರೂಪಾಯಿ ಹೆಚ್ಚಳವಾಗಿದೆ. ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.

ಚೆನ್ನೈಯಲ್ಲಿ 73,100 ರೂಪಾಯಿ ಆಗಿದ್ದರೆ, ಮುಂಬಯಿಯಲ್ಲಿ 69,500 ರೂಪಾಯಿ ಆಗಿದೆ. ಇನ್ನು ದೆಹಲಿಯಲ್ಲಿ  69,500 ರೂಪಾಯಿ, ಕೋಲ್ಕತ್ತಾದಲ್ಲಿಯೂ  69,500 ರೂಪಾಯಿ ಆಗಿದೆ. ಬೆಂಗಳೂರಿನ ಬೆಲೆ ನೋಡುವುದಾದರೆ 73,100 ರೂಪಾಯಿ, ಹೈದರಾಬಾದ್ ನಲ್ಲಿ 73,100 ರೂಪಾಯಿ, ಕೇರಳದಲ್ಲಿಯೂ 73,100  ರೂಪಾಯಿ ಆಗಿದೆ. 

ಇದನ್ನೂ ಓದಿ : PPF ಖಾತೆಯಲ್ಲಿ ತಕ್ಷಣವೇ ಈ ಕೆಲಸವನ್ನು ಮಾಡಿ.! ಇಲ್ಲವಾದರೆ ಎದುರಾಗುವುದು ನಷ್ಟ

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ? :
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ, ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News