Gold price Today : 10 ಗ್ರಾಂ ಚಿನ್ನ ಕೇವಲ 33,000 ರೂ.ಗೆ ಲಭ್ಯ

Gold price Today : ನೀವು ಸಹ ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಒಳ್ಳೆಯ ಸುದ್ದಿ ಇದೆ. ಕೇವಲ 33, 000 ರೂ.ಗೆ ಚಿನ್ನಾಭರಣ ಖರೀದಿಸುವ ಅವಕಾಶವಿದೆ

Written by - Ranjitha R K | Last Updated : Mar 6, 2023, 02:29 PM IST
  • ಚಿನ್ನದ ಬೆಲೆಯಲ್ಲಿ ಏರಿಕೆ
  • ಇಂದಿನ ದರ ಎಷ್ಟು ತಿಳಿಯಿರಿ
  • 3 ಸಾವಿರ ರೂ. ಅಗ್ಗದ ಬೆಲೆಗೆ ಚಿನ್ನ
 Gold price Today : 10 ಗ್ರಾಂ ಚಿನ್ನ ಕೇವಲ 33,000 ರೂ.ಗೆ ಲಭ್ಯ title=

Gold price Today : ನೀವು ಸಹ ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಒಳ್ಳೆಯ ಸುದ್ದಿ ಇದೆ. ಕೇವಲ 33, 000 ರೂ.ಗೆ ಚಿನ್ನಾಭರಣ ಖರೀದಿಸುವ ಅವಕಾಶವಿದೆ. ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ. ಆದರೂ ಇಲ್ಲಿಯವರೆಗಿನ ಚಿನ್ನದ ದಾಖಲೆಯ ಗರಿಷ್ಠ ಬೆಲೆಗಿಂತ ಸುಮಾರು 3,000 ರೂ.ಗಳಷ್ಟು ಅಗ್ಗವಾಗುತ್ತಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ದರ ಎಷ್ಟು ನೋಡೋಣ. 

ಎಂಸಿಎಕ್ಸ್‌ನಲ್ಲಿ ಎಷ್ಟಿದೆ ಚಿನ್ನ ಮತ್ತು ಬೆಳ್ಳಿಯ ಬೆಲೆ  ? : 
ಇಂದು ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿವೆ. MCX ನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 0.30 ರಷ್ಟು ಏರಿಕೆಯೊಂದಿಗೆ 55,888 ರಷ್ಟಾಗಿದೆ. 

ಇದನ್ನೂ ಓದಿ : RBI: 500 ರೂಪಾಯಿ ನೋಟಿನ ಪ್ರಮುಖ ಮಾಹಿತಿ.. ನಿಮ್ಮ ಬಳಿಯೂ ಈ ನೋಟು ಇದೆಯೇ?

IBJA ಯ ವೆಬ್‌ಸೈಟ್ ಪ್ರಕಾರ, ಫೆಬ್ರವರಿ 2,2023 ರಂದು, ಚಿನ್ನದ ಬೆಲೆ 2994 ರೂ.ಗಳಷ್ಟು  ಏರಿಕೆಯಾಗಿತ್ತು. ಅಂದು ಚಿನ್ನದ ಬೆಲೆ 10 ಗ್ರಾಂಗೆ 58,882 ರೂ. ಆಗಿತ್ತು. ಆದರೆ ಇಂದು 10 ಗ್ರಾಂ ಚಿನ್ನದ ಬೆಲೆ 55,888 ರೂ. ಆಗಿದೆ. ಅಂದರೆ ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಚಿನ್ನದ ಬೆಲೆಯಲ್ಲಿ 2,994 ರೂ.ಗಳಷ್ಟು ಅಗ್ಗವಾಗಿದೆ. 

33,000 ರೂ.ಗೆ ಚಿನ್ನ ಲಭ್ಯ : 
ಇನ್ನು ಕ್ಯಾರೆಟ್ ರೂಪದಲ್ಲಿ ಚಿನ್ನದ ಬೆಲೆಯನ್ನು ನೋಡುವುದಾದರೆ ಚಿನ್ನವು 24 ಕ್ಯಾರೆಟ್, 23 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಮತ್ತು 14 ಕ್ಯಾರೆಟ್‌ಗಳಲ್ಲಿ ಲಭ್ಯವಿದೆ. ಪ್ರಸ್ತುತ, 14 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 32.820 ರೂ. ಮಟ್ಟದಲ್ಲಿದೆ. ಆದ್ದರಿಂದ 4 ಕ್ಯಾರೆಟ್ ನ 10 ಗ್ರಾಂಗೆ ಚಿನ್ನವನ್ನು ಸುಮಾರು 33,000 ರೂ.ಗೆ ಖರೀದಿಸಬಹುದು. 

ಇದನ್ನೂ ಓದಿ :  ಮಾರ್ಚ್ 31ರೊಳಗೆ ಈ ಕೆಲಸಗಳನ್ನು ಮಾಡಿ ಮುಗಿಸಿ, ಇಲ್ಲವಾದರೆ ತೆರಬೇಕಾಗುವುದು ದಂಡ

ಚಿನ್ನ ಖರೀದಿಸುವ ಮುನ್ನ ಈ ವಿಚಾರ ಗಮನದಲ್ಲಿರಲಿ : 
ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ಹಾಲ್‌ಮಾರ್ಕ್ ನೋಡಿದ ನಂತರವೇ ಚಿನ್ನವನ್ನು ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ನೀವು ಸರ್ಕಾರಿ ಅಪ್ಲಿಕೇಶನ್ ಅನ್ನು ಬಳಸಬಹುದು. 'ಬಿಐಎಸ್ ಕೇರ್ ಆ್ಯಪ್' ಮೂಲಕ ನೀವು ಚಿನ್ನದ ಶುದ್ಧತೆಯನ್ನು ಕೂಡಾ  ಪರಿಶೀಲಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News