Gold Price Today:ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ .! ಬಂಗಾರ ಖರೀದಿಗೆ ಇದು ಶುಭ ಸಮಯ

Gold Price Today: ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತ ಇಂದು ಕೂಡಾ ಮುಂದುವರೆದಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯಲ್ಲಿ ಕುಸಿತ ದಾಖಲಾಗಿದೆ. ಚಿನ್ನದ ಬೆಲೆಯಲ್ಲಿ 230 ರೂ. ಇಳಿಕೆ ಕಂಡು ಬಂದಿದೆ. 

Written by - Ranjitha R K | Last Updated : May 5, 2022, 08:51 AM IST
  • ಅಕ್ಷಯ ತೃತೀಯ ನಂತರವೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕುಸಿತ
  • 24-ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 230 ರೂ ಕುಸಿತ
  • ಇಂದಿನ ಬೆಲೆ ಎಷ್ಟು ಇಲ್ಲಿ ತಿಳಿಯಿರಿ
Gold Price Today:ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ .! ಬಂಗಾರ ಖರೀದಿಗೆ ಇದು ಶುಭ ಸಮಯ  title=
Gold Price Today (file photo)

ಬೆಂಗಳೂರು  :  Gold Price Today : ಅಕ್ಷಯ ತೃತೀಯ ನಂತರವೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಸತತ ಐದನೇ ದಿನವೂ ಚಿನ್ನದ ದರದಲ್ಲಿ ಕುಸಿತ ದಾಖಲಾಗಿದೆ. ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದ್ದು, ಪ್ರತಿ 10 ಗ್ರಾಂಗೆ 51, 280 ಆಗಿದೆ. ಇನ್ನು ಬೆಳ್ಳಿಯ ಬೆಲೆಯಲ್ಲಿ  ಶೇ.0.26ರಷ್ಟು ಕುಸಿತ ಕಂಡಿದ್ದು, ಪ್ರತಿ ಕೆಜಿಗೆ 62,882 ರೂ. ಆಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ :
IBJA ಯ ವೆಬ್‌ಸೈಟ್ ಪ್ರಕಾರ, 24-ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 230 ರೂ ಕುಸಿತ ಕಂಡಿದ್ದು,  10 ಗ್ರಾಂಗೆ 51, 280  ರೂ. ಆಗಿದೆ ಇದಲ್ಲದೇ 22ಕ್ಯಾರೆಟ್ ಚಿನ್ನದ ಬೆಲೆ 47,000  ರೂ. ಆಗಿದೆ. 

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ : 

ನಗರ 22 ಕ್ಯಾರೆಟ್ ಚಿನ್ನದ ಬೆಲೆ                                 24 ಕ್ಯಾರೆಟ್ ಚಿನ್ನದ ಬೆಲೆ  
ಚೆನ್ನೈ   48,100 ರೂ.

 

52,320 ರೂ .
ಮುಂಬಯಿ 47,000 ರೂ  51,280 ರೂ
ದೆಹಲಿ 47,000 ರೂ  51,280 ರೂ
ಕೋಲ್ಕತ್ತಾ  47,000 ರೂ  51,280 ರೂ
ಬೆಂಗಳೂರು  47,000 ರೂ  51,280 ರೂ
ಹೈದರಾಬಾದ್  47,000 ರೂ  51,280 ರೂ
ಕೇರಳ  47,000 ರೂ  51,280 ರೂ

ಚಿನ್ನ ಮತ್ತು ಬೆಳ್ಳಿ ದರ ಕುಸಿತಕ್ಕೆ ಕಾರಣ :
ಏರುತ್ತಿರುವ ಹಣದುಬ್ಬರವನ್ನು ತಡೆಯಲು, ಫೆಡರಲ್ ರಿಸರ್ವ್ ನಿಂದ  ಬಡ್ಡಿದರದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ತಜ್ಞರ ಪ್ರಕಾರ  50 ಬೇಸಿಸ್ ಪಾಯಿಂಟ್‌ಗಳಷ್ಟು ಬಡ್ಡಿದರವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ, ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ರೆಪೊ ದರವನ್ನು 40 ಪೈಸೆ ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ IBJA ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News