ನವದೆಹಲಿ: ದೀಪಾವಳಿ ಮತ್ತು ಧಂತೇರಸ್(Diwali and Dhanteras)ಗೂ ಮುನ್ನವೇ ದೇಶದ ಸಾಮಾನ್ಯ ಜನರಿಗೆ ಸಂತಸದ ಸುದ್ದಿ ತಂದಿರುವ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಇದೆ. ಇಂದು ಚಿನ್ನದ ದರವು 100 ಗ್ರಾಂಗೆ 800 ರೂ. ನಷ್ಟು ಇಳಿಕೆಯಾಗಿದೆ. ಶುಕ್ರವಾರದಂದು ಚಿನ್ನದ ಬೆಲೆಗಳು futures tradeನಲ್ಲಿ ಏರಿಕೆಯಾಗಿದ್ದರೂ ಸಹ, ಮಾರುಕಟ್ಟೆಯಲ್ಲಿ ಉಂಟಾದ ಊಹಾಪೋಹಗಳಿಂದಾಗಿ ದೃಢವಾದ ಬೇಡಿಕೆಯ ನಡುವೆ ಖರೀದಿದಾರರು ಹೊಸ ಸ್ಥಾನಗಳನ್ನು ಸೃಷ್ಟಿಸಿದರು.
ಮಲ್ಟಿ ಕಮೊಡಿಟಿ ಎಕ್ಸ್ ಚೇಂಜ್ನಲ್ಲಿ(MCX) 13,548 ಲಾಟ್ಗಳ ವ್ಯಾಪಾರ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 47,988 ರೂ. ಇದ್ದು, ಶೇ.0.05 ರಷ್ಟು ಹೆಚ್ಚಿನ ದರದಲ್ಲಿ ಚಿನ್ನದ ವಹಿವಾಟು ನಡೆಯುತ್ತಿದೆ. ಖರೀದಿದಾರರು ನಿರ್ಮಿಸಿದ ತಾಜಾ ಬೇಡಿಕೆಯಿಂದ ಚಿನ್ನದ ಬೆಲೆ(Gold Rate Today)ಯಲ್ಲಿ ಕೊಂಚ ಏರಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇದನ್ನೂ ಓದಿ: Electric Scooter: ಈ ಎಲೆಕ್ಟ್ರಿಕ್ ಸ್ಕೂಟರ್ಗಳು 50 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿವೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ(Gold Price)ಯು ದುರ್ಬಲ ಡಾಲರ್ ಎದುರು ವಾರದ ಲಾಭದತ್ತ ಸಾಗುತ್ತಿದೆ. ಸ್ಪಾಟ್ ಚಿನ್ನವು ಪ್ರತಿ ಔನ್ಸ್ ಗೆ 1,797.82 ಅಮೆರಿಕನ್ ಡಾಲರ್ ತಲುಪಿದ್ದು, ಈ ವಾರ ಇಲ್ಲಿಯವರೆಗೆ ಶೇ.0.3ರಷ್ಟು ಲಾಭ ಗಳಿಸಿದೆ. ಅಮೆರಿಕ ಸ್ಪಾಟ್ ಚಿನ್ನವು ಪ್ರತಿ ಔನ್ಸ್ ಗೆ 1,799.40 ತಲುಪಿದ್ದು, ಶೇ.0.2 ರಷ್ಟು ಕಡಿಮೆಯಾಗಿದೆ.
ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ
ದೆಹಲಿಯಲ್ಲಿ ಚಿನ್ನದ ದರ 10 ಗ್ರಾಂನ 22 ಕ್ಯಾರೆಟ್ಗೆ 47,100 ರೂ.
ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 44,950 ರೂ.
ಮುಂಬೈನಲ್ಲಿ ಇಂದಿನ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್ಗೆ 47,050 ರೂ.
ಚೆನ್ನೈನಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್ಗೆ 45,250 ರೂ.
ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್ಗೆ 47,350 ರೂ.
ಹೈದರಾಬಾದ್ನಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್ಗೆ 44,950 ರೂ.
ಕೇರಳದಲ್ಲಿ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್ಗೆ 44,950 ರೂ.
ಪುಣೆಯಲ್ಲಿ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್ಗೆ 46,320 ರೂ.
ಅಹಮದಾಬಾದ್ನಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್ಗೆ 46,170 ರೂ.
ಲಕ್ನೋದಲ್ಲಿ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್ಗೆ 45,700 ರೂ.
ಪಾಟ್ನಾದಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್ಗೆ 46,230 ರೂ.
ನಾಗ್ಪುರದಲ್ಲಿ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್ಗೆ 47,050 ರೂ.
ಇದನ್ನೂ ಓದಿ: Matchbox Price Increase: 14 ವರ್ಷಗಳ ಸುದೀರ್ಘ ಅವಧಿಯ ಬಳಿಕ ಪೊಟ್ಟಣದ ಬೆಲೆ ಹೆಚ್ಚಳ, ಡಿಸೆಂಬರ್ 1 ರಿಂದ ಈ ಹೊಸ ದರ ಜಾರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ