ನವದೆಹಲಿ: ಭಾರತವೂ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳು ಚಿನ್ನವನ್ನು ಸಂಗ್ರಹಿಸಲು(Gold Reserves) ಬಯಸುತ್ತವೆ. ಏಕೆಂದರೆ ಹೀಗೆ ಸಂಗ್ರಹಿಸುವ ಚಿನ್ನವು ಆರ್ಥಿಕ ಬಿಕ್ಕಿಟ್ಟಿನ ಸಂದರ್ಭದಲ್ಲಿ ಕೈಹಿಡಿಯುತ್ತದೆ ಎಂಬ ನಂಬಿಕೆ ಇದೆ. ದೇಶದ ಕೇಂದ್ರ ಬ್ಯಾಂಕ್(Central Bank)ನಲ್ಲಿ ಚಿನ್ನವು ಠೇವಣಿ ರೂಪದಲ್ಲಿ ಭದ್ರವಾಗಿರುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಕೂಡ ಚಿನ್ನವನ್ನು ತಮ್ಮ ಆಸ್ತಿಯಾಗಿ ರಿಸರ್ವ್ ಬ್ಯಾಂಕ್‌ನಲ್ಲಿ ಠೇವಣಿ(Gold Reserves Country)ಇಡುತ್ತವೆ. ವಾಸ್ತವವಾಗಿ ರಾಜಕೀಯ ಬದಲಾವಣೆಗಳು ಈ ಚಿನ್ನದ ಠೇವಣಿಯ ಮೇಲೆ ಯಾವುದೇ ಮಹತ್ವದ ಪರಿಣಾಮವನ್ನು ಬೀರುವುದಿಲ್ಲ, ಹೀಗಾಗಿಯೇ ಯಾವುದೇ ಇತರ ಆಸ್ತಿಗೆ ಹೋಲಿಸಿದರೆ ಚಿನ್ನವು ಸ್ಥಿರತೆಯನ್ನು ನೀಡುತ್ತದೆ.
ಅತಿಹೆಚ್ಚು ಚಿನ್ನ ಹೊಂದಿರುವ ವಿಶ್ವದ 10 ಅಗ್ರ ದೇಶಗಳು
ಪ್ರಪಂಚದ ಬಗ್ಗೆ ಮಾತನಾಡುವುದಾದರೆ ಯಾವ ದೇಶದ ಬಳಿ ಹೆಚ್ಚಿನ ಚಿನ್ನ ಸಂಗ್ರಹವಾಗಿರುತ್ತದೋ ಅದು ಆರ್ಥಿಕವಾಗಿ ಹೆಚ್ಚು ಸದೃಢವಾಗಿರುತ್ತದೆ. ಜಗತ್ತಿನಲ್ಲಿ ಅಪಾರ ಪ್ರಮಾಣದ ಚಿನ್ನವಿರುವ ಹಲವು ದೇಶಗಳಿವೆ(World Gold Reserves). ಗೋಲ್ಡ್‌ಹಬ್ ವರದಿಯ ಪ್ರಕಾರ ಅಮೆರಿಕವು ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಹೊಂದಿದೆ. ಪ್ರಪಂಚದಲ್ಲಿ ಅತಿಹೆಚ್ಚು ಚಿನ್ನದ ನಿಕ್ಷೇಪ ಹೊಂದಿರುವ ಟಾಪ್-10 ದೇಶಗಳು(Top 10 Gold Reserves Country) ಯಾವುವು? ಮತ್ತು ವಿಶ್ವದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬುದರ ಬಗ್ಗೆ ತಿಳಿಯಿರಿ.
ಇದನ್ನೂ ಓದಿ: ಮಾರುಕಟ್ಟೆಗೆ ಬರುತ್ತಿದೆ ಅಗ್ಗದ ಬೆಲೆಯ ಎರಡು ಮಾರುತಿ ಕಾರುಗಳು..!
ನಂ. 10
ದೇಶ: ನೆದರ್ಲ್ಯಾಂಡ್ಸ್
ಚಿನ್ನದ ಸಂಗ್ರಹ: 612.45 ಟನ್
ನಂ. 9
ದೇಶ: ಭಾರತ
ಚಿನ್ನದ ಸಂಗ್ರಹ: 743.83 ಟನ್
ನಂ. 8
ದೇಶ: ಜಪಾನ್
ಚಿನ್ನದ ಸಂಗ್ರಹ: 845.97 ಟನ್
ನಂ. 7
ದೇಶ: ಸ್ವಿಟ್ಜರ್ಲೆಂಡ್
ಚಿನ್ನದ ಸಂಗ್ರಹ: 1,040 ಟನ್‌ಗಳು
ನಂ. 6
ದೇಶ: ಚೀನಾ
ಚಿನ್ನದ ಸಂಗ್ರಹ: 1,948.31 ಟನ್‌ಗಳು
ನಂ. 5
ದೇಶ: ರಷ್ಯಾ
ಚಿನ್ನದ ಸಂಗ್ರಹ: 2,298.53 ಟನ್
ನಂ. 4
ದೇಶ: ಫ್ರಾನ್ಸ್
ಚಿನ್ನದ ಸಂಗ್ರಹ: 2,436.35 ಟನ್‌ಗಳು
ನಂ. 3
ದೇಶ: ಇಟಲಿ
ಚಿನ್ನದ ಸಂಗ್ರಹ: 2,451.84 ಟನ್‌ಗಳು
ನಂ. 2
ದೇಶ: ಜರ್ಮನಿ
ಚಿನ್ನದ ಸಂಗ್ರಹ: 3,359.09 ಟನ್
ನಂ. 1
ದೇಶ: ಅಮೆರಿಕ
ಚಿನ್ನದ ಸಂಗ್ರಹ: 8,133.47 ಟನ್‌ಗಳು
(ಗೋಲ್ಡ್‌ಹಬ್ ವರದಿ ಮಾಡಿದಂತೆ)
ಇದನ್ನೂ ಓದಿ: ಐಷಾರಾಮಿ ಹೆಲಿಕಾಪ್ಟರ್ ಖರೀದಿಸಿದ RP Group ಅಧ್ಯಕ್ಷ; ಇದು ಭಾರತದಲ್ಲಿಯೇ ಮೊದಲು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.