Petrol, diesel Price: ನಾಳೆಯಿಂದ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಇಳಿಕೆ..!

Petrol, Diesel Price: ನಾಳೆಯಿಂದ(ನ.1) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 40 ಪೈಸೆ ಇಳಿಕೆಯಾಗಲಿದೆ. ಹೊಸ ಬೆಲೆಗಳು ಮಂಗಳವಾರ ಬೆಳಗ್ಗೆ 6 ಗಂಟೆಯಿಂದಲೇ ಜಾರಿಗೆ ಬರಲಿದೆ.

Written by - Puttaraj K Alur | Last Updated : Nov 1, 2022, 11:06 AM IST
  • ನಾಳೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ 40 ಪೈಸೆ ಇಳಿಕೆ
  • ನವೆಂಬರ್ 1ರ ಬೆಳಗ್ಗೆ 6 ಗಂಟೆಯಿಂದಲೇ ಹೊಸ ದರಗಳು ಜಾರಿಗೆ ಬರಲಿವೆ
  • ಬೆಂಗಳೂರಲ್ಲಿ ಪೆಟ್ರೋಲ್ ಲೀಟರ್​ಗೆ 101.94 ರೂ. ಮತ್ತು ಡೀಸೆಲ್​ ಲೀಟರ್​ಗೆ 87.89 ರೂ. ಇದೆ.
Petrol, diesel Price: ನಾಳೆಯಿಂದ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಇಳಿಕೆ..!    title=
ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ!

ನವದೆಹಲಿ: ನಾಳೆಯಿಂದ(ನವೆಂಬರ್ 1) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 40 ಪೈಸೆ ಇಳಿಕೆಯಾಗಲಿದೆ. ಹೊಸ ಬೆಲೆಗಳು ಮಂಗಳವಾರ ಬೆಳಗ್ಗೆ 6 ಗಂಟೆಯಿಂದಲೇ ಜಾರಿಗೆ ಬರಲಿದೆ ಎಂದು ವರದಿಯಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ಬೆಲೆ 96.72 ರೂ. ಮತ್ತು ಡೀಸೆಲ್ ದರ ಲೀಟರ್‌ಗೆ 89.62 ರೂ. ಇತ್ತು. ವಾಣಿಜ್ಯ ನಗರಿ ಮುಂಬೈನಲ್ಲಿ 106.31 ರೂ. ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 89.62 ರೂ. ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್  ಪ್ರತಿ ಲೀಟರ್​ಗೆ 101.94 ರೂ. ಮತ್ತು ಡೀಸೆಲ್​ ಪ್ರತಿ ಲೀಟರ್‍ಗೆ 87.89 ರೂ. ಇದೆ.

ಇದನ್ನೂ ಓದಿ: ಶೀಘ್ರದಲ್ಲೇ ಬದಲಾಗಲಿದೆ ಆನ್‌ಲೈನ್ ಪೇಮೆಂಟ್ ನಿಯಮಗಳು.! ತಿಳಿದುಕೊಳ್ಳದಿದ್ದಲ್ಲಿ ಆಗುವುದು ನಷ್ಟ

ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 106.03 ರೂ. ಇದ್ದರೆ, ಡೀಸೆಲ್ ಲೀಟರ್‌ಗೆ 92.76 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ 102.63 ರೂ. ಇದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 94.24 ರೂ.ನಂತೆ ಮಾರಾಟವಾಗುತ್ತಿದೆ. ಹೈದರಾಬಾದ್​​ನಲ್ಲಿ ಪೆಟ್ರೋಲ್ ಪ್ರತಿ ಲೀಟರ್​ಗೆ 109.66 ರೂ. ಇದ್ದರೆ, ಡೀಸೆಲ್ ಲೀಟರ್​ಗೆ 97.82 ರೂ. ಇದೆ. ತಿರುವನಂತಪುರಂನಲ್ಲಿ ಪೆಟ್ರೋಲ್ ಪ್ರತಿ ಲೀಟರ್‍ಗೆ 107.71 ರೂ. ಇದ್ದರೆ ಡೀಸೆಲ್ 96.52 ರೂ.ನಂತೆ ಮಾರಾಟವಾಗುತ್ತಿದೆ.

ಪ್ರತಿದಿನವೂ ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ & ಡೀಸೆಲ್ ಬೆಲೆಗಳನ್ನು ಪರಿಶೀಲಿಸಿದ ನಂತರ ದರ ನಿಗದಿಪಡಿಸುತ್ತವೆ. ನೀವೂ ಸಹ ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿದಿನ SMS ಮೂಲಕ ಪರಿಶೀಲಿಸಬಹುದು. ನೀವು ಇಂಡಿಯನ್ ಆಯಿಲ್‌ನ ಗ್ರಾಹಕರಾಗಿದ್ದರೆ RSP ಡೀಲರ್ ಕೋಡ್ ಟೈಪ್ ಮಾಡುವ ಮೂಲಕ 9224992249 ಸಂಖ್ಯೆಗೆ SMS ಕಳುಹಿಸಬಹುದು ಮತ್ತು ನೀವು HPCL ಗ್ರಾಹಕರಾಗಿದ್ದರೆ HPPRICE ಡೀಲರ್ ಕೋಡ್ ಟೈಪ್ ಮಾಡಿ 9222201122 ಸಂಖ್ಯೆಗೆ SMS ಕಳುಹಿಸಬಹುದು. BPCL ಗ್ರಾಹಕರು ಡೀಲರ್ ಕೋಡ್ ನಮೂದಿಸುವ ಮೂಲಕ 9223112222ಗೆ ಕಳುಹಿಸಬಹುದು.

ಇದನ್ನೂ ಓದಿ: ಈ ಟ್ರಿಕ್ ಬಳಸಿದರೆ ಎಟಿಎಂನಿಂದ ಹಣ ಡ್ರಾ ಮಾಡುವಾಗ ಕಡಿತವಾಗುವ 24 ರೂಪಾಯಿ ಉಳಿಸಬಹುದು.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News