ಪಿಂಚಣಿದಾರರಿಗೆ ಶಾಕಿಂಗ್ ನ್ಯೂಸ್! ಪೆನ್ಶನ್ ಮೊತ್ತ ಇಳಿಸಲು ಮುಂದಾದ ಸರ್ಕಾರ

ಇಪಿಎಫ್‌ಒದ ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಲಾದ ಸುತ್ತೋಲೆಯ ಪ್ರಕಾರ, ಸೆಪ್ಟೆಂಬರ್ 1, 2014 ರ ಮೊದಲು ನಿವೃತ್ತರಾದ ಮತ್ತು ಹೆಚ್ಚಿನ ವೇತನದ ಆಧಾರದ ಮೇಲೆ ನೀಡಲಾಗುತ್ತಿದ್ದ ಪಿಂಚಣಿ ಪಾವತಿ ಬಗ್ಗೆ  ಮರುಪರಿಶೀಲಿಸಲಾಗುತ್ತದೆ.

Written by - Ranjitha R K | Last Updated : Jan 27, 2023, 03:52 PM IST
  • ಪಿಂಚಣಿ ಪಡೆಯುವ ಜನರಿಗೊಂದು ಶಾಕಿಂಗ್ ನ್ಯೂಸ್.
  • ಪಿಂಚಣಿ ಕುರಿತು ಹೊಸ ಸುತ್ತೋಲೆಯನ್ನು ಹೊರಡಿಸಲಾಗಿದೆ.
  • ಪಿಂಚಣಿ ಪಾವತಿಯನ್ನು ನಿಲ್ಲಿಸಬಹುದು
ಪಿಂಚಣಿದಾರರಿಗೆ  ಶಾಕಿಂಗ್ ನ್ಯೂಸ್!  ಪೆನ್ಶನ್ ಮೊತ್ತ ಇಳಿಸಲು ಮುಂದಾದ ಸರ್ಕಾರ   title=

ನವದೆಹಲಿ : ಪಿಂಚಣಿ ಪಡೆಯುವ ಜನರಿಗೊಂದು ಶಾಕಿಂಗ್ ನ್ಯೂಸ್. ಸೆಪ್ಟೆಂಬರ್ 2014 ರ ಮೊದಲು ನಿವೃತ್ತಿ ಹೊಂದಿದ ವ್ಯಕ್ತಿಗಳ ಪಿಂಚಣಿ ಕುರಿತು ಹೊಸ ಸುತ್ತೋಲೆಯನ್ನು ಹೊರಡಿಸಲಾಗಿದೆ.  ಈ ಸುತ್ತೋಲೆ ಇದೀಗ ಪಿಂಚಣಿದಾರರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರವು ಅನೇಕ ನೌಕರರ ಪಿಂಚಣಿಯನ್ನು ರದ್ದುಗೊಳಿಸಬಹುದು ಎಂದು ಹೇಳಲಾಗಿದೆ. ಕಳೆದ 5 ವರ್ಷಗಳಿಂದ ನೌಕರರು ಈ ಪ್ರಯೋಜನವನ್ನು ಪಡೆಯುತ್ತಿದ್ದಾರೆ. . 

ಪಿಂಚಣಿ ಪಾವತಿಯನ್ನು ನಿಲ್ಲಿಸಬಹುದು :
ಇಪಿಎಫ್‌ಒದ ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಲಾದ ಸುತ್ತೋಲೆಯ ಪ್ರಕಾರ, ಸೆಪ್ಟೆಂಬರ್ 1, 2014 ರ ಮೊದಲು ನಿವೃತ್ತರಾದ ಮತ್ತು ಹೆಚ್ಚಿನ ವೇತನದ ಆಧಾರದ ಮೇಲೆ ನೀಡಲಾಗುತ್ತಿದ್ದ ಪಿಂಚಣಿ ಪಾವತಿ ಬಗ್ಗೆ  ಮರುಪರಿಶೀಲಿಸಲಾಗುತ್ತದೆ. ಈ ಪಿಂಚಣಿದಾರರ ಪಿಂಚಣಿಗೆ ಕತ್ತರಿ ಬೀಳುವ ಸಾಧ್ಯತೆಗಳಿವೆ ಎನ್ನಲಾಗಿದೆ. 

ಇದನ್ನೂ ಓದಿ : ಇನ್ನು ಇಲ್ಲೂ ಸಿಗುತ್ತದೆ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್

2023ರ ಜನವರಿಯಿಂದ ಹಿರಿಯ ನಾಗರಿಕರಿಗೆ ಹೆಚ್ಚಿನ ಪಿಂಚಣಿ ನೀಡದಂತೆ ನೋಡಿಕೊಳ್ಳುವುದು ಅಗತ್ಯ  ಎಂಬ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ ಪಿಂಚಣಿಯನ್ನು 5000 ಅಥವಾ 6000 ಸಂಬಳದ ಆಧಾರದ ಮೇಲೆ ಬದಲಾಯಿಸಲಾಗುತ್ತದೆ. ಈ ಕುರಿತು ಪ್ರಸ್ತಾವನೆಯನ್ನು ಇಪಿಎಫ್‌ಒ ನೀಡಿದೆ.

ಪಿಂಚಣಿದಾರರ ಹಕ್ಕುಗಳ ಬಗ್ಗೆ ಕಳವಳ : 
ಸರ್ಕಾರದ ಈ ನಿರ್ಧಾರದಿಂದ ಸಾವಿರಾರು ನಿವೃತ್ತ ಉದ್ಯೋಗಿಗಳು ನಷ್ಟವನ್ನು ಅನುಭವಿಸುತ್ತಾರೆ. 2003 ರಲ್ಲಿ OTIS ಎಲಿವೇಟರ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ EPS-95 ಅನ್ನು ಎತ್ತಿಹಿಡಿದಿದ್ದು, ಇದಾದ ನಂತರ 24,672 ಜನರ ಪಿಂಚಣಿಯನ್ನು ಪರಿಷ್ಕರಿಸಲಾಯಿತು.

ಇದನ್ನೂ ಓದಿ : ಮಾರುಕಟ್ಟೆಯ ಭಾರಿ ಕುಸಿತಕ್ಕೆ ಕಾರಣವಾದ ಅಡಾನಿ ಗ್ರೂಪ್, ಒಂದೇ ದಿನದಲ್ಲಿ ಹೂಡಿಕೆದಾರರ 8 ಲಕ್ಷ ಕೋಟಿ ರೂ. ಗುಳುಂ

ಸುತ್ತೋಲೆ ಹೊರಡಿಸಿದ EPFO : 
EPFO ಸುತ್ತೋಲೆಯ ಪ್ರಕಾರ, ಯಾವುದೇ ಪಿಂಚಣಿ ಅರ್ಹತೆಯನ್ನು ಪರಿಷ್ಕರಿಸುವ ಮೊದಲು, ಅದರ ಬಗ್ಗೆ ಪಿಂಚಣಿದಾರರಿಗೆ ತಿಳಿಸುವುದು ಅವಶ್ಯಕ. ಇದಕ್ಕಾಗಿ ಮುಂಚಿತವಾಗಿ ಅಧಿಸೂಚನೆಯನ್ನು ಕಳುಹಿಸುವುದು   ಅನಿವಾರ್ಯ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News