Side Effects of Bathing in Hot Water : ಕೆಲವರಿಗೆ ಮಳೆಯಿರಲಿ ಬಿಸಿಲಿರಲಿ, ಚಳಿ ಇರಲಿ ವರ್ಷದ ಮೂರು ಋತುವಿನಲ್ಲಿಯೂ ಬಿಸಿ ನೀರ ಸ್ನಾನವೇ ಬೇಕು. ತಲೆಗೂ ಬಿಸಿ ನೀರಿನಲ್ಲಿಯೇ ಸ್ನಾನ ಮಾಡುತ್ತಾರೆ. ಹೀಗೆ ಸದಾ ಬಿಸಿ ನೀರಿನಿಂದಲೇ ತಲೆ ಸ್ನಾನ ಮಾಡುವುದು ಅಥವಾ ಕೂದಲು ತೊಳೆಯುವುದು ಆರೋಗ್ಯಕರವೇ ಎನ್ನುವ ಪ್ರಶ್ನೆಯೂ ಉದ್ಬವಿಸುತ್ತದೆ.
ಬಿಸಿ ನೀರು ಕೂದಲಿಗೆ ಹಾನಿ ಉಂಟು ಮಾಡುತ್ತದೆ. ಆದರೆ, ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯುವುದರಿಂದ ಕೂದಲಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ.
ಕೂದಲು ನಿರ್ಜೀವವಾಗುತ್ತದೆ :
ನಮ್ಮ ನೆತ್ತಿಯು ನೈಸರ್ಗಿಕ ಎಣ್ಣೆಯನ್ನು ಹೊಂದಿದ್ದು, ಅದು ಕೂದಲನ್ನು ಪೋಷಿಸುವುದರೊಂದಿಗೆ ಕೂದಲು ಹೊಳೆಯುವಂತೆ ಮಾಡುತ್ತದೆ. ಬಿಸಿ ನೀರಿನಿಂದ ಕೂದಲನ್ನು ತೊಳೆದಾಗ, ನೆತ್ತಿಯ ನೈಸರ್ಗಿಕ ಎಣ್ಣೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕೂದಲು ನಿರ್ಜೀವವಾಗಿ ಒಣಗಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ : White Hair Remedy: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ತುಂಬಾ ಲಾಭದಾಯಕ ಈ 4 ಪದಾರ್ಥ
ಬಣ್ಣ ಮಾಸಿ ಹೋಗುತ್ತದೆ :
ಸಾಮಾನ್ಯ ಕೂದಲಿಗಿಂತ ಹೇರ್ ಕಲರ್ ಮಾಡಿರುವ ಕೂದಲ ಮೇಲೆ ಬಿಸಿ ನೀರು ಹೆಚ್ಚಿನ ಪರಿಣಾಮ ಬೀರುತ್ತದೆ. ಇದು ಕೂದಲಿನ ಹೊರಪೊರೆಗಳನ್ನು ತೆರೆಯುತ್ತದೆ. ಇದರಿಂದಾಗಿ ಬಣ್ಣ ಕೂಡಾ ಹೊರಬರುತ್ತದೆ. ಹೀಗಾಗಿ ಬಹಳ ಬೇಗನೆ ಕೂದಲ ಬಣ್ಣ ಮಾಸಿ ಹೋಗುತ್ತದೆ.
ತಲೆಹೊಟ್ಟು ಸಮಸ್ಯೆ :
ಚಳಿಗಾಲದಲ್ಲಿ ಕೂದಲಿನಲ್ಲಿ ತಲೆಹೊಟ್ಟು ಹೆಚ್ಚಾಗುವುದಕ್ಕೆ ಬಿಸಿ ನೀರಿನಿಂದ ಸ್ನಾನ ಮಾಡುವುದೇ ಮುಖ್ಯ ಕಾರಣ. ಬಿಸಿನೀರಿನಿಂದ ಕೂದಲು ತೊಳೆಯುವುದರಿಂದ ತಲೆಹೊಟ್ಟು ಹೆಚ್ಚಾಗುತ್ತದೆ. ಇದು ತಲೆಹೊಟ್ಟು, ತುರಿಕೆ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಇದನ್ನೂ ಓದಿ : Weight Loss Drinks: ತೂಕ ನಷ್ಟಕ್ಕಾಗಿ ಬೆಸ್ಟ್ 5 ಡಿಟಾಕ್ಸ್ ಪಾನೀಯಗಳು
ಕೂದಲು ದುರ್ಬಲವಾಗುತ್ತದೆ :
ಬಿಸಿ ನೀರು ನೆತ್ತಿಯ ರಕ್ತ ಪರಿಚಲನೆಯನ್ನು ಕಡಿಮೆ ಮಾಡುತ್ತದೆ.ಇದರಿಂದಾಗಿ ಕೂದಲಿನ ಬೇರುಗಳು ದುರ್ಬಲಗೊಳ್ಳುತ್ತದೆ ಮತ್ತು ಕೂದಲು ಉದುರುವ ಅಪಾಯವನ್ನು ಹೆಚ್ಚಿಸುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.