ಕೇವಲ 1 ರೂಪಾಯಿಯಲ್ಲಿ ಸ್ಕೂಟಿ ಮನೆಗೆ ತನ್ನಿ, ಈ ಕಂಪನಿಯಿಂದ 3 ದಿನಗಳ ವಿಶೇಷ ಕೊಡುಗೆ

Special Offer On Scooty: ನೀವು ಸ್ಕೂಟಿ ಖರೀದಿಸುವ ಆಲೋಚನೆಯಲ್ಲಿದ್ದರೆ, ನೀವು ಹೊಸ ಶೈನಿಂಗ್ ಸ್ಕೂಟಿಯನ್ನು ಖರೀದಿಸಬಹುದು ಮತ್ತು ಅದನ್ನು ಕೇವಲ 1 ರೂಪಾಯಿಯ ಡೌನ್ ಪೇಮೆಂಟ್‌ನಲ್ಲಿ ಮನೆಗೆ ತರಬಹುದು. ದೇಶದ ದೈತ್ಯ ಕಂಪನಿಯೊಂದು ಮಹಿಳಾ ದಿನದಂದು 3 ದಿನಗಳ ಆಫರ್ ಘೋಷಿಸಿದೆ.

Written by - Yashaswini V | Last Updated : Mar 9, 2022, 07:40 AM IST
  • ಆಫರ್ ಮಾರ್ಚ್ 11 ರವರೆಗೆ ಮುಂದುವರಿಯುತ್ತದೆ
  • 6 ಸಾವಿರದವರೆಗೆ ಬೋನಸ್ ಸಿಗುತ್ತಿದೆ
  • ಮಹಿಳೆಯ ಹೆಸರಿನಲ್ಲಿ ಬುಕ್ಕಿಂಗ್ ಮಾಡಬಹುದು
ಕೇವಲ 1 ರೂಪಾಯಿಯಲ್ಲಿ ಸ್ಕೂಟಿ ಮನೆಗೆ ತನ್ನಿ, ಈ ಕಂಪನಿಯಿಂದ 3 ದಿನಗಳ ವಿಶೇಷ ಕೊಡುಗೆ  title=
Hero MotoCorp offers

Special Offer On Scooty: ನೀವು ಸ್ಕೂಟಿ ಖರೀದಿಸಲು ಯೋಚಿಸುತ್ತಿದ್ದರೆ, ನೀವು ಹೊಸ ಶೈನಿಂಗ್ ಸ್ಕೂಟಿಯನ್ನು ಕೇವಲ 1 ರೂಪಾಯಿಯ ಡೌನ್ ಪೇಮೆಂಟ್‌ನೊಂದಿಗೆ ಮನೆಗೆ ತರಬಹುದು. ದೇಶದ ಹೆಸರಾಂತ ದ್ವಿಚಕ್ರ ವಾಹನ ಕಂಪನಿ ಹೀರೋ ಮೋಟೋಕಾರ್ಪ್ (Hero Motocorp) ಮಂಗಳವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಈ ನಿಟ್ಟಿನಲ್ಲಿ ಮಹತ್ವದ ಘೋಷಣೆ ಮಾಡಿದೆ. 

ಆಫರ್ ಮಾರ್ಚ್ 11 ರವರೆಗೆ ಮುಂದುವರಿಯುತ್ತದೆ:
ಹೀರೋ ಮೋಟೋಕಾರ್ಪ್ (Hero MotoCorp) ಕಂಪನಿಯಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಈ ಕೊಡುಗೆಯನ್ನು ಆಯ್ದ ನಗರಗಳಲ್ಲಿ ಮಾತ್ರ ಪ್ರಾರಂಭಿಸಲಾಗಿದೆ ಮತ್ತು ಮಾರ್ಚ್ 11 ರವರೆಗೆ ಈ ಕೊಡುಗೆ ಮುಂದುವರೆಯಲಿದೆ. ಈ ಸಮಯದಲ್ಲಿ ನೀವು ಹತ್ತಿರದ ಯಾವುದೇ ಹೀರೋ ಶೋರೂಮ್‌ಗೆ ಭೇಟಿ ನೀಡುವ ಮೂಲಕ ಯಾವುದೇ ಸ್ಕೂಟಿ ಅಥವಾ ಸ್ಕೂಟರ್ ಅನ್ನು ಖರೀದಿಸಬಹುದು. 1 ರೂಪಾಯಿಯ ಡೌನ್ ಪೇಮೆಂಟ್ ಸೌಲಭ್ಯದ ಜೊತೆಗೆ ಕ್ಯಾಶ್ ಬೋನಸ್ ಆಫರ್ ಕೂಡ ಆರಂಭಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. 

ಇದನ್ನೂ ಓದಿ- ಹೋಳಿ ಹಬ್ಬಕ್ಕೆ Hyundai ಗಿಫ್ಟ್ : ಸ್ಯಾಂಟ್ರೊದಿಂದ i20ವರೆಗೆ ಕಾರುಗಳ ಮೇಲೆ 50,000 ರೂ. ವರೆಗೆ ರಿಯಾಯಿತಿ

6 ಸಾವಿರದವರೆಗೆ ಬೋನಸ್ ಕೂಡ ಲಭ್ಯ:
ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಮೆಸ್ಟ್ರೋ ಎಡ್ಜ್ 125, ಡೆಸ್ಟಿನಿ 125 ಮತ್ತು ಪ್ಲೆಷರ್ ಪ್ಲಸ್ (Pleasure Plus) ಖರೀದಿಯಲ್ಲಿ ಮಹಿಳೆಯರಿಗೆ 4,000 ರೂಪಾಯಿಗಳವರೆಗೆ ನಗದು ಬೋನಸ್ ನೀಡಲಾಗುತ್ತಿದೆ. ಇದರೊಂದಿಗೆ ಡೆಸ್ಟಿನಿ 125 ಬೈಕು ಖರೀದಿಯ ಮೇಲೆ 2,000 ರೂ. ಲಾಯಲ್ಟಿ ಬೋನಸ್ ಸಹ ಲಭ್ಯವಿದೆ. 

ಇದನ್ನೂ ಓದಿ- CNG Price Hike: ಪೆಟ್ರೋಲ್‌ಗಿಂತ ಮೊದಲು ಸಿಎನ್‌ಜಿ ದರ ಏರಿಕೆ, ನಾಳೆಯಿಂದ ಮತ್ತಷ್ಟು ದುಬಾರಿ!

ಮಹಿಳೆಯ ಹೆಸರಿನಲ್ಲಿ ಬುಕ್ಕಿಂಗ್ ಮಾಡಬಹುದು:
ಗಮನಿಸಬೇಕಾದ ಅಂಶವೆಂದರೆ ಯಾವುದೇ, ಒಂದು ಕುಟುಂಬವು ತಮ್ಮ ಕುಟುಂಬದ ಮಹಿಳೆಯ ಹೆಸರಿನಲ್ಲಿ ಬುಕ್ಕಿಂಗ್ ಮಾಡಿದರೆ, ಈ ಕೊಡುಗೆಗಳನ್ನು ನೀಡಲಾಗುವುದು ಎಂದು ಕಂಪನಿ ಹೇಳಿದೆ. ಮಾರುಕಟ್ಟೆಯಲ್ಲಿ ಡೆಸ್ಟಿನಿ 125 ಬೆಲೆ 70,400 ರೂ., Maestro Edge 125 ಬೆಲೆ 73,450 ರೂ., Maestro Edge 110 ಬೆಲೆ 66,820 ರೂ. ಆಗಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News