How To Become Crorepati: ಕೋಟ್ಯಾಧಿಪತಿಯಾಗಬೇಕೆ? ನಿತ್ಯ ಕೇವಲ ರೂ.50 ಉಳಿಸಿ ಸಾಕು

How To Become Crorepati: ಹೂಡಿಕೆ ಮತ್ತು ಉಳಿತಾಯ ಆಯ್ಕೆಗಳಲ್ಲಿ ಹಲವು ವಿಧಗಳಿವೆ. ಮ್ಯೂಚುಯಲ್ ಫಂಡ್‌ಗಳು, ಸ್ಥಿರ ಠೇವಣಿ, ಷೇರು ಮಾರುಕಟ್ಟೆ ಇತ್ಯಾದಿ. ಆದರೆ ನಾವು ನಮ್ಮ ಗುರಿಯನ್ನು ತಲುಪಲು ಯಾವ ಆಯ್ಕೆಯನ್ನು ಆಯ್ದುಕೊಳ್ಳಬೇಕು ಎಂಬುದೇ ಒಂದು ದೊಡ್ಡ ಪ್ರಶ್ನೆ.  ಒಂದು ವೇಳೆ ಕೋಟ್ಯಾಧಿಪತಿಯಾಗುವ ಗುರಿಯನ್ನು ನೀವು ಹೊಂದಿದ್ದರೆ. SIP ಮೂಲಕ ನೀವು ಈ ಗುರಿಯನ್ನು ತಲುಪಬಹುದು.

Written by - Nitin Tabib | Last Updated : Jan 25, 2021, 05:35 PM IST
  • ಶ್ರೀಮಂತರಾಗಲು ಎಲ್ಲರು ಬಯಸುತ್ತಾರೆ.
  • ಆದರೆ, ಅದಕ್ಕಾಗಿ ಪ್ಲಾನಿಂಗ್ ಮಾಡಲು ಯಾರು ಸಿದ್ಧರಿರುವುದಿಲ್ಲ
  • ನಿಮಗೂ ಕೋಟ್ಯಾಧಿಪತಿಯಾಗುವ ಬಯಕೆಗೆ, ಈ ಫಾರ್ಮುಲಾ ತಿಳಿಯಲು ಮರೆಯಬೇಡಿ.
How To Become Crorepati: ಕೋಟ್ಯಾಧಿಪತಿಯಾಗಬೇಕೆ? ನಿತ್ಯ ಕೇವಲ ರೂ.50 ಉಳಿಸಿ ಸಾಕು title=
How To Become Crorepati (File Photo)

ನವದೆಹಲಿ:  How To Become Crorepati- ಶ್ರೀಮಂತನಾಗುವ ಬಯಕೆ ಯಾರಿಗಿರಲ್ಲ ಹೇಳಿ. ಆದರೆ, ಇದಕ್ಕಾಗಿ ಪ್ಲಾನಿಂಗ್ ಮಾಡಲು ಯಾರೂ ಬಯಸುವುದಿಲ್ಲ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಜೀವನವನ್ನು ನೀವು ಅವಲೋಕಿಸಿದರೆ, ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಅವರು ಉಳಿತಾಯದ ಮಂತ್ರ ಅರಿತಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ವಾರೆನ್ ಬಫೆಟ್ ಇದಕ್ಕೆ ಉತ್ತಮ ಉದಾಹರಣೆ. ಏಕೆಂದರೆ ಅವರು ತಮ್ಮ ವಯಸ್ಸಿನ 11ನೇ ವರ್ಷದಲ್ಲಿಯೇ ಉಳಿತಾಯ ಮಾಡಲು ಆರಂಭಿಸಿದರು. ಅವರ ಹೂಡಿಕೆಯ ಟಿಪ್ಸ್ ವಿಶ್ವಾದ್ಯಂತ ಪ್ರಚಲಿತದಲ್ಲಿವೆ.

MF ಹಾಗೂ SIP ಮೂಲಕ ನೀವು ಕೋಟ್ಯಾಧಿಪತಿಯಾಗಬಹುದು
ಕೋಟ್ಯಾಧಿಪತಿಯಾಗುವ ಅತ್ಯಂತ ಮೊದಲ ಫಾರ್ಮುಲಾ (Crorepati Formula) ಎಂದರೆ ಸಣ್ಣ ವಯಸ್ಸಿನಲ್ಲಿಯೇ ಉಳಿತಾಯ ಮತ್ತು ಹೂಡಿಕೆ ಆರಂಭಿಸಬೇಕು. ಎಷ್ಟು ಬೇಗ ನೀವು ಹೂಡಿಕೆ ಮಾಡುವಿರೋ ಅಷ್ಟೇ ಬೇಗ ನಿಮಗೆ ಲಾಭ ಕೂಡ ಸಿಗಲಿದೆ. ಇಲ್ಲಿ ನಾವು MF ಹಾಗೂ SIP ಕುರಿತು ಹೇಳುತ್ತಿದ್ದೇವೆ. ಹಾಗಾದರೆ ಬನ್ನಿ ಈ ಕುರಿತು ವಿಸ್ತೃತ ಮಾಹಿತಿ ಪಡೆದುಕೊಳ್ಳೋಣ.

25ನೇ ವಯಸ್ಸಿನಿಂದ ಹೂಡಿಕೆ ಮಾಡಿ ಕೋಟ್ಯಾಧಿಪತಿಯಾಗಿ
ನಿಮ್ಮ ವಯಸ್ಸು 25 ಎಂದುಕೊಳ್ಳಿ ಹಾಗೂ ನಿತ್ಯ ನೀವು 50 ರೂ. ಉಳಿತಾಯ ಮಾಡಿ ಅದನ್ನು ಮ್ಯೂಚವಲ್ ಫಂಡ್ (Mutual Fund) ಗಳಲ್ಲಿ SIP ರೂಪದಲ್ಲಿ ಹೂಡಿಕೆ ಮಾಡಲು ಆರಂಭಿಸಿರುವಿರ ಅಂದುಕೊಳ್ಳಿ. ನಿಮ್ಮ 60 ನೇ ವಯಸ್ಸಿನಲ್ಲಿ ನೀವು ಕೋಟ್ಯಾಧಿಪತಿಯಾಗಬಹುದು. ಅಂದರೆ, ಸಂಪೂರ್ಣ 35 ವರ್ಷಗಳ ಕಾಲ ಸತತವಾಗಿ ನಿತ್ಯ 50ರೂ. ಉಳಿತಾಯ ಮಾಡಿ ನೀವು ಒಂದು ದೊಡ್ಡ ಮೊತ್ತವನ್ನು ಪಡೆಯಬಹುದು.

ನಿತ್ಯ 50 ರೂ. ಹೂಡಿಕೆಯಂತೆ ತಿಂಗಳಿಗೆ ನೀವು 1500 ಹೂಡಿಕೆ ಮಾಡುವಿರಿ.
ಮ್ಯೂಚವಲ್ ಫಂಡ್ ಸರಾಸರಿ ಶೇ.12-ಶೇ.15ರಷ್ಟು ರಿಟರ್ನ್ ನೀಡುತ್ತದೆ.
35 ವರ್ಷಗಳ ಸುದೀರ್ಘ ಅವಧಿಯಲ್ಲಿ ನಿಮಗೆ ಶೇ.12.5 ರಸ್ತು ರಿಟರ್ನ್ ಬಂದಿದೆ ಅಂದುಕೊಳ್ಳಿ.
- ಪ್ರತಿ ತಿಂಗಳು SIP ಹೂಡಿಕೆ 1500 ರೂ.
- ಸರಾಸರಿ ರಿಟರ್ನ್ ಶೇ.12.5ರಷ್ಟು
- ಹೂಡಿಕೆಯ ಅವಧಿ 35 ವರ್ಷ
- ನಿಮ್ಮ ಒಟ್ಟು ಹೂಡಿಕೆ 6.3 ಲಕ್ಷ ರೂ.
- 35 ವರ್ಷಗಳ ಒಟ್ಟು ಮೌಲ್ಯ 1.26 ಕೋಟಿಗಳಷ್ಟಾಗಲಿದೆ.

ಇದನ್ನು ಓದಿ- ಕೋಟ್ಯಾಧಿಪತಿಯಾಗಬೇಕೆ? ನಿತ್ಯ ಕೇವಲ ರೂ.30 ಉಳಿತಾಯ ಮಾಡಿ ಸಾಕು

30ನೇ ವರ್ಷದಿಂದ ಹೂಡಿಕೆ ಆರಂಭ
- ತಿಂಗಳ ಹೂಡಿಕೆ 1500ರೂ.
- ಸರಾಸರಿ ರಿಟರ್ನ್ ಶೇ. 12.5   ರಷ್ಟು 
- ಹೂಡಿಕೆಯ ಅವಧಿ 30 ವರ್ಷಕ್ಕೆ ಇಳಿಯುತ್ತದೆ.
- ಒಟ್ಟು ಹೂಡಿಕೆ 5.4 ಲಕ್ಷ ರೂ.
- 30 ವರ್ಷಗಳ ಬಳಿಕ ನಿಮ್ಮ ಹೂಡಿಕೆಯ ನಿವ್ವಳ ಮೌಲ್ಯ 59.2 ಲಕ್ಷ ರೂ.

ಇದನ್ನು ಓದಿ-ಪ್ರತಿ ದಿನ 300 ರೂಪಾಯಿ ಹೂಡಿಕೆ ಮಾಡಿ ಕೋಟ್ಯಾಧಿಪತಿಯಾಗಿ...!

5 ವರ್ಷಗಳ ತಡ ಹೂಡಿಕೆ ದುಬಾರಿಯಾಗಲಿದೆ
ಅಂದರೆ 5 ವರ್ಷಗಳು ತಡವಾಗಿ ಹೂಡಿಕೆ ಆರಂಭಿಸಿದರೆ, ನಿಮಗೆ ಒಟ್ಟು 40 ಲಕ್ಷ ರೂ.ಗಳ ಹಾನಿಯಾಗಲಿದೆ. ಏಕೆಂದರೆ ನೀವು ನಿಮ್ಮ 30ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿರುವಿರಿ. ಹೀಗಾಗಿ ಒಂದು ವೇಳೆ ನಿಮಗೆ 30 ವರ್ಷಗಳಲ್ಲಿ ಹೂಡಿಕೆ ಆರಂಭಿಸಿ ಕೋಟ್ಯಾಧಿಪತಿಯಾಗಬೇಕು ಎಂದೆನಿಸುತ್ತಿದ್ದರೆ ನೀವು ನಿತ್ಯ 106 ರೂ. ಹೂಡಿಕೆ ಮಾಡಬೇಕು. ಅಂದರೆ, ನೀವು ತಿಂಗಳಿಗೆ ರೂ.3200 ಹೂಡಿಕೆ ಮಾಡಬೇಕು. ಆಗ ಮಾತ್ರ 60ನೇ ವಯಸ್ಸಿನಲ್ಲಿ ನೀವು 1.2 ಕೋಟಿ ರೂ.ಗಳಿಗೆ ಮಾಲೀಕರಾಗಬಹುದು. 

ಇದನ್ನು ಓದಿ-ಕೇವಲ SIP ಕುರಿತು ಮಾಹಿತಿ ಸಾಲದು, ಹೂಡಿಕೆಯ ಮೊದಲು SWF, STP ಬಗ್ಗೆ ತಿಳಿಯುವುದು ಆವಶ್ಯಕ

Trending News