ನವದೆಹಲಿ: ಕೋಟ್ಯಾಧಿಪತಿಯಾಗಲು ಯಾರು ಬಯಸುವುದಿಲ್ಲ? ಆದರೆ ಇದು ನಿಜವಾಗಿಯೂ ಸುಲಭದ ಕೆಲಸವೇ. ಉತ್ತರ ಒಂದೇ... ಕೋಟ್ಯಾಧಿಪತಿಯಾಗಲು ಯಾವುದೇ ಶಾರ್ಟ್ಕಟ್ ಇಲ್ಲ. ಆದರೆ, ಸುವ್ಯವಸ್ಥಿತ ಹೂಡಿಕೆ ಮಾಡಿದರೆ ಇದು ಕಷ್ಟವು ಅಲ್ಲ. ಹೇಗೆ ಪ್ರಾರಂಭಿಸುವುದು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ವಾರೆನ್ ಬಫೆಟ್ (Warren Buffett) ತನ್ನ 11 ನೇ ವಯಸ್ಸಿನಲ್ಲಿ ಷೇರುಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ ಮತ್ತು ಇಂದು ಅವರು ವಿಶ್ವದ ಶ್ರೀಮಂತ ಜನರಲ್ಲಿ ಒಬ್ಬರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಪ್ರತಿದಿನ ಕೇವಲ 30 ರೂಪಾಯಿಗಳು ಎಂದರೆ ತಿಂಗಳಲ್ಲಿ ಕೇವಲ 900 ರೂಪಾಯಿಗಳನ್ನು ಠೇವಣಿ ಇಡುವುದರ ಮೂಲಕ, ನೀವು ಕೋಟ್ಯಾಧಿಪತಿಯಾಗಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೇಗೆ ತಿಳಿದುಕೊಳ್ಳೋಣ ಬನ್ನಿ.
ಇದನ್ನು ಓದಿ-Twitter ಇತಿಹಾಸದಲ್ಲೇ ಅತಿ ದೊಡ್ಡ Hacking, ಹಲವು ಖ್ಯಾತನಾಮರ ಖಾತೆ ಹ್ಯಾಕ್
ನಿಮ್ಮ ವಯಸ್ಸು 30 ಆಗಿದ್ದರೆ ನಿತ್ಯ ರೂ.30 ಹೂಡಿಕೆ ಮಾಡಿ
ಒಂದು ವೇಳೆ ನಿಮ್ಮ ವಯಸ್ಸು 20 ಆಗಿದ್ದರೆ, ನಿತ್ಯ ನೀವು ರೂ.30 ಹೂಡಿಕೆ ಮಾಡಿ 60ನೆ ವಯಸ್ಸಿನಲ್ಲಿ ಕೋಟ್ಯಾಧಿಪತಿಯಾಗಬಹುದು. ಅಂದರೆ ತಿಂಗಳಿಗೆ ರೂ.900 ಗಳನ್ನು systematic investment plan ನಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಕೋಟ್ಯಾಧಿಪತಿಯಾಗಬಹುದು.
ಇದನ್ನು ಓದಿ-ಶ್ರೀಮಂತಿಕೆಯಲ್ಲಿ Warren Buffett ಹಿಂದಿಕ್ಕಿದ Mukesh Ambaani ಆಸ್ತಿ ಒಟ್ಟು ಮೌಲ್ಯ ಎಷ್ಟು ಗೊತ್ತಾ?
- ಯಾವುದೇ ಓರ್ವ ವ್ಯಕ್ತಿಯ ವಯಸ್ಸು 20 ವರ್ಷ ಎಂದು ಭಾವಿಸೋಣ.
- ಅವರು 40 ವರ್ಷಗಳ ಕಾಲ ಪ್ರತಿದಿನ 30 ರೂಪಾಯಿಗಳನ್ನು ಉಳಿಸುತ್ತಾರೆ.
- ಪ್ರತಿ ತಿಂಗಳು 900 ರೂ. ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುತ್ತಾರೆ
- ಮ್ಯೂಚುಯಲ್ ಫಂಡ್ಗಳಲ್ಲಿ ಇದು ಸರಾಸರಿ ಶೇಕಡಾ 12.5 ರ ದರದಲ್ಲಿ ರಿಟರ್ನ ನೀಡುತ್ತದೆ
- 40 ವರ್ಷಗಳ ನಂತರ ಅವರು ಕೋಟ್ಯಾಧಿಪತಿಯಾಗಬಹುದು.
ಇದನ್ನು ಓದಿ-ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಕೂಡ ಉತ್ತಮ ಆದಾಯ ಗಳಿಸಬೇಕೆ? ಈ ಸ್ಕೀಮ್ ಒಂದು ಉತ್ತಮ ವಿಕಲ್ಪ
30 ವರ್ಷ ವಯಸ್ಸಾಗಿದ್ದರೆ ಎಷ್ಟು ಹಣ ಉಳಿತಾಯ ಮಾಡಬಹುದು
20 ವರ್ಷ ವಯಸ್ಸು ದಾಟಿದೆ ಎಂದರೆ ನೀವು ಉಳಿತಾಯ ಮಾಡಬಾರದು ಎಂದಲ್ಲ. ಒಂದು ವೇಳೆ ವ್ಯಕ್ತಿಯ ವಯಸ್ಸು 30 ಆಗಿದ್ದರೂ ಕೂಡ ನಿತ್ಯ ಅವರು ರೂ.95 ಹೂಡಿಕೆ ಮಾಡಿ 1 ಕೋಟಿ ರೂ.ಹಣ ಸಂಪಾದಿಸಬಹುದು.
ಇದನ್ನು ಓದಿ- ಪ್ರತಿ ದಿನ 300 ರೂಪಾಯಿ ಹೂಡಿಕೆ ಮಾಡಿ ಕೋಟ್ಯಾಧಿಪತಿಯಾಗಿ...!
35 ವರ್ಷಗಳ ಹೂಡಿಕೆ ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿಸಬಹುದು
40 ವರ್ಷಗಳ ಅವಧಿ ಒಂದು ವೇಳೆ ನಿಮಗೆ ಹೆಚ್ಚು ಅನಿಸುತ್ತಿದ್ದರೆ. ಇದಕ್ಕಿಂತ ಕಡಿಮೆ ಅವಧಿಗಾಗಿ ಹೂಡಿಕೆ ಮಾಡಿ ಕೂಡ ನೀವು ಕೋಟ್ಯಾಧಿಪತಿಯಾಗಬಹುದು. ಒಂದು ವೇಳೆ 35 ವರ್ಷಗಳ ಕಾಲ ನೀವು ಮ್ಯೂಚವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ, ಶೇ.12 ರಷ್ಟು ರಿಟರ್ನ್ ಮೂಲಕ ಕೋಟ್ಯಾಧಿಪತಿಯಾಗಬಹುದು. ಒಂದು ವೇಳೆ ಮ್ಯೂಚವಲ್ ಫಂಡ್ ನಲ್ಲಿ ನೀವು ಡಿವಿಡೆಂಡ್ ರೀಇನ್ವೆಸ್ಟ್ಮೆಂಟ್ ಪ್ಲಾನ್ ಆಯ್ದುಕೊಂಡರೆ ನಿಮಗೆ ಶೇ.15ರಷ್ಟು ರಿಟರ್ನ್ ಸಿಗುತ್ತದೆ.
ಇದನ್ನು ಓದಿ- ಪ್ರತಿ ತಿಂಗಳು 4500 ರೂ. ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗಲು ಇದು ಮ್ಯೂಚುಯಲ್ ಫಂಡ್ಗಳ SIP ಫಾರ್ಮುಲಾ
ಡಿವಿಡೆಂಡ್ ರೀಇನ್ವೆಸ್ಟ್ಮೆಂಟ್ ಪ್ಲಾನ್ (Dividend Reinvestment Plan)
ಡಿವಿಡೆಂಡ್ ರೀಇನ್ವೆಸ್ಟ್ಮೆಂಟ್ ಪ್ಲಾನ್ ನಲ್ಲಿ ನೀವು ಬಂದ ಲಾಭಾಂಶವನ್ನು ಮರುಹೂಡಿಕೆ ಮಾಡಬಹುದು. ಇಂತಹುದರಲ್ಲಿ ನಿಮ್ಮ ಹೂಡಿಕೆಯ ಮೊತ್ತದಲ್ಲಿ ಸತತ ಏರಿಕೆಯಾಗಲಿದೆ. ಆದರೆ, ವಾರ್ಷಿಕವಾಗಿ ಶೇ.2 ರಿಂದ ಶೇ.6 ರಷ್ಟು ಡಿವಿಡೆಂಡ್ ಸಿಗುತ್ತದೆ. ಇದು ಸಂಪೂರ್ಣ ಮ್ಯೂಚವಲ್ ಫಂಡ್ ಟೈಮ್ ಹಾಗೂ ಸ್ಟಾಕ್ ಮೇಲೆ ಅವಲಂಭಿತವಾಗಿರುತ್ತದೆ.
ಇದನ್ನು ಓದಿ- Cancelled Cheque ನಲ್ಲಿ ಅಡಗಿರುತ್ತವೆ ನಿಮ್ಮ ಈ 5 ರಹಸ್ಯಗಳು, ಅಪ್ಪಿತಪ್ಪಿಯೂ ಈ ಕೆಲಸ ಮಾಡ್ಬೇಡಿ
ರಿಸ್ಕ್ ಹೆಚ್ಚಾದರೆ ಲಾಭ ಕೂಡ ಹೆಚ್ಚಾಗಿರುತ್ತದೆ
ಡೈವರ್ಸಿಫೈಡ್ ಮ್ಯೂಚವಲ್ ಫಂಡ್ ಗಳನ್ನು ಹೊರತುಪಡಿಸಿ ನೀವು ಸಣ್ಣ ಅಥವಾ ಮಿಡಕ್ಯಾಪ್ ಫಂಡ್ಸ್ ಗಳಲ್ಲಿಯೂ ಕೂಡ ಹೂಡಿಕೆ ಮಾಡಬಹುದು. ಇವು 25-30 ವರ್ಷಗಳಿಗೂ ಇರುತ್ತವೆ. ಆದರೆ ಇವುಗಳಲ್ಲಿ ರಿಸ್ಕ್ ಕೂಡ ಸ್ವಲ್ಪ ಹೆಚ್ಚಾಗಿರುತ್ತದೆ.
ಇದನ್ನು ಓದಿ- ನಿತ್ಯ ಕೇವಲ ರೂ.100 ಉಳಿತಾಯ ಮಾಡಿ 4.5 ಕೋಟಿ ರೂ. ಸಂಪಾದಿಸಲು ಇಲ್ಲಿದೆ ಟ್ರಿಕ್
ರಿಕರಿಂಗ್ ಡಿಪಾಸಿಟ್ ಕೂಡ ಉತ್ತಮ ಆಯ್ಕೆಯಾಗಿದೆ
ತಿಂಗಳಿಗೆ ರೂ.5,500 ಗಳನ್ನು ರಿಕರಿಂಗ್ ಡಿಪಾಸಿಟ್ ನಲ್ಲಿ ಹೂಡಿಕೆ ಮಾಡುವ ಮೂಲಕ ಕೂಡ ನೀವು ಕೋಟ್ಯಾಧಿಪತಿಯಾಗಬಹುದು. ಇದಕ್ಕಾಗಿ ನೀವು ಮೊದಲು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ RD ಖಾತೆಯನ್ನು ತೆರೆಯಬೇಕು. ಒಂದು ವೇಳೆ ನಿಮಗೆ ವಾರ್ಷಿಕವಾಗಿ ಶೇ.9 ರಷ್ಟು ಬಡ್ಡಿ ದೊರೆತರೂ ಕೂಡ 30 ವರ್ಷಗಳಲ್ಲಿ ನೀವು ಕೋಟ್ಯಾಧಿಪತಿಯಾಗಬಹುದು. ಇದಕ್ಕೂ ಕಡಿಮೆ ಅವಧಿಯಲ್ಲಿ ನೀವು ಕೋಟ್ಯಾಧಿಪತಿ ಆಗಲು ಬಯಸುತ್ತಿದ್ದರೆ,
ಇದನ್ನು ಓದಿ- Mutual Fund ಹೂಡಿಕೆದಾರರಿಗೆ ಭಾರಿ ನೆಮ್ಮದಿಯ ಸುದ್ದಿ ನೀಡಿದ RBI
- 25 ವರ್ಷಗಳವರೆಗೆ 9000 ರೂ
- 20 ವರ್ಷಕ್ಕೆ 15000 ರೂ
- 15 ವರ್ಷಕ್ಕೆ 26400 ರೂ
- 51500 ರೂಪಾಯಿಗಳನ್ನು 10 ವರ್ಷಗಳವರೆಗೆ ಠೇವಣಿ ಇಡಬೇಕು.