Platform Ticket Rules: ಟಿಕೆಟ್ ಇಲ್ಲದಿದ್ದರೂ ಮಾಡಬಹುದು ರೈಲು ಯಾತ್ರೆ, ತಿಳಿದಿರಲಿ ಹೊಸ ನಿಯಮ

Indian Railways Rules: ರೈಲ್ವೇ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸದಿದ್ದರೂ ಸಹ, ರೈಲು ಪ್ರಯಾಣ ಮಾಡಬಹುದು. ಪ್ಲಾಟ್‌ಫಾರ್ಮ್ ಟಿಕೆಟ್ ತೆಗೆದುಕೊಳ್ಳುವ ಮೂಲಕ ರೈಲಿನಲ್ಲಿ ಪ್ರಯಾಣ ಮಾಡಬಹುದು.  

Written by - Ranjitha R K | Last Updated : Apr 16, 2022, 01:00 PM IST
  • ಬದಲಾಗಿದೆ ರೈಲು ಟಿಕೆಟ್ ನಿಯಮ'
  • ಟಿಕೆಟ್ ಇಲ್ಲದೆ ಪ್ರಯಾಣ ಮಾಡಬೇಕಾದರೆ ಏನು ಮಾಡಬೇಕು
  • ಪ್ಲಾಟ್ ಫಾರಂ ಟಿಕೆಟ್ ಮೂಲಕ ಪ್ರಯಾಣ ಮಾಡಬಹುದು
Platform Ticket Rules: ಟಿಕೆಟ್ ಇಲ್ಲದಿದ್ದರೂ ಮಾಡಬಹುದು ರೈಲು ಯಾತ್ರೆ, ತಿಳಿದಿರಲಿ ಹೊಸ ನಿಯಮ title=
indian railway ticket rules (file photo)

ನವದೆಹಲಿ : Indian Railways Rules: ಅನೇಕ ಬಾರಿ ಹಠಾತ್ ಪ್ರಯಾಣ ಮಾಡಬೇಕಾದಾಗ ಪರಿಸ್ಥಿತಿ ಎದುರಾಗುತ್ತದೆ. ಆ ಸಂದರ್ಭದಲ್ಲಿ ಟಿಕೆಟ್ ಇಲ್ಲದೆ ಹೋದರೆ ಪ್ರಯಾಣ ಬೆಳೆಸುವುದು ಸಾಧ್ಯವಿರುವುದಿಲ್ಲ.  ಈ ಹಿಂದೆ,  ವಿಪರೀತ ಸಂದರ್ಭಗಳಲ್ಲಿ ಕೇವಲ ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳ ಆಯ್ಕೆ ಇತ್ತು. ಆದರೆ  ತತ್ಕಾಲ್ ಟಿಕೆಟ್ ಪಡೆಯುವುದು ಸುಲಭವಲ್ಲ. ಇದೀಗ ಟಿಕೆಟ್ ಕಾಯ್ದಿರಿಸುವಿಕೆ ನಿಯಮಗಳಲ್ಲಿ ಬದಲಾಗಿದೆ. ಹೊಸ ಟಿಕೆಟ್ ನಿಯಮಗಳ ಪ್ರಕಾರ, ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸುವುದು ಸಾಧ್ಯ.  . 

ಪ್ಲಾಟ್‌ಫಾರ್ಮ್ ಟಿಕೆಟ್‌ನಲ್ಲಿ ಪ್ರಯಾಣ :
ರೈಲು ಟಿಕೆಟ್ ಕಾಯ್ದಿರಿಸದಿದ್ದರೆ, ಕೇವಲ ಪ್ಲಾಟ್‌ಫಾರ್ಮ್ ಟಿಕೆಟ್ ತೆಗೆದುಕೊಂಡು ರೈಲು ಪ್ರಯಾಣ ಬೆಳೆಸಬಹುದು. ಪ್ಲಾಟ್ ಫಾರಂ ಟಿಕೆಟ್ ಮೂಲಕ ರೈಲು ಹತ್ತಿ, ನಂತರ ಟಿಕೆಟ್ ಪರೀಕ್ಷಕರ ಬಳಿ  ಹೋಗಿ ಟಿಕೆಟ್ ಮಾಡಿಸಿಕೊಳ್ಳಬಹುದು. ಈ ನಿಯಮವನ್ನು ರೈಲ್ವೆ ಮಾಡಿದೆ. ಈ ನಿಯಮದ ಪ್ರಕಾರ, ಪ್ಲಾಟ್‌ಫಾರ್ಮ್ ಟಿಕೆಟ್ ತೆಗೆದುಕೊಳ್ಳುವ ಮೂಲಕ ತಕ್ಷಣ ಟಿಟಿಇಯನ್ನು ಸಂಪರ್ಕಿಸಬೇಕಾಗುತ್ತದೆ. ನಂತರ ಟಿಟಿಇ ನೀವು ತಲುಪಬೇಕಾದ ಸ್ಟೇಷನ್ ಗೆ ಟಿಕೆಟ್ ನೀಡುತ್ತಾರೆ. 

ಇದನ್ನೂ ಓದಿ : 7th Pay Commission : ಕೇಂದ್ರ ಪಿಂಚಣಿ, ನೌಕರರಿಗೆ ಸಿಹಿ ಸುದ್ದಿ : DA ಬಗ್ಗೆ ಮಹತ್ವದ ಮಾಹಿತಿ

ಸೀಟು ಖಾಲಿ  ಇಲ್ಲದಿದ್ದರೂ ಇದೆ ಆಯ್ಕೆ  : 
ರೈಲಿನಲ್ಲಿ ಸೀಟು ಖಾಲಿ ಇಲ್ಲದ ಸಂದರ್ಭಗಳೂ ಎದುರಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಟಿಟಿಇ  ರಿಸರ್ವ್ದ್ ಸೀಟ್ ನೀಡಲು ನಿರಾಕರಿಸಬಹುದು. ಆದರೆ, ನಿಮ್ಮ ಪ್ರಯಾಣವನ್ನು ನಿಲ್ಲಿಸುವಂತಿಲ್ಲ. ಒಂದು ವೇಳೆ ನೀವು ರೈಲಿನ ಟಿಕೆಟ್ ಕಾಯ್ದಿರಿಸದಿದ್ದರೆ,  250 ರೂ. ದಂಡದ ಶುಲ್ಕದೊಂದಿಗೆ, ಪ್ರಯಾಣದ ಒಟ್ಟು ಶುಲ್ಕವನ್ನು ಪಾವತಿಸಿ ಟಿಕೆಟ್ ಪಡೆಯಬೇಕು. ಸಾಮಾನ್ಯ ಜನರ ಅನುಕೂಲಕ್ಕಾಗಿ, ರೈಲ್ವೆಯು ಇಂತಹ ಅನೇಕ ನಿಯಮಗಳನ್ನು ಮಾಡಿದೆ. ಹೀಗಾಗಿ ರೈಲು ಹತ್ತುವ ಮುನ್ನ ರೈಲಿನ ನಿಯಮಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. 

ಇದನ್ನೂ ಓದಿ : WhatsApp : ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ʼವಾಟ್ಸ್‌ಆ್ಯಪ್ʼ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News