Maruti Ignis Demand : ಮಾರುತಿ ಸುಜುಕಿ ದೇಶದಲ್ಲಿ ಅತಿ ಹೆಚ್ಚು ಕಾರು ಮಾರಾಟವಾಗುವ ಕಂಪನಿಯಾಗಿದೆ. ಪ್ರತಿ ತಿಂಗಳು ಹೆಚ್ಚು ಮಾರಾಟವಾಗುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮಾರುತಿ ಪ್ರಾಬಲ್ಯ ಪಡೆದಿವೆ.ಅಷ್ಟೇ ಅಲ್ಲ, ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಕಾರುಗಳು ಕೂಡ ಮಾರುತಿ ಸುಜುಕಿಯದ್ದಾಗಿವೆ. ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಆಲ್ಟೊ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಾರುತಿ ಸುಜುಕಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಇಗ್ನಿಸ್ ಮಾರಾಟದಲ್ಲಿ 1001 ಶೇಕಡಾ ಬೆಳವಣಿಗೆಯನ್ನು ಕಂಡಿದೆ. ಮಾರುತಿ ಸೆಪ್ಟೆಂಬರ್ 2021ರಲ್ಲಿ ಕೇವಲ 522 ಯೂನಿಟ್ ಇಗ್ನಿಸ್ ಅನ್ನು ಮಾರಾಟ ಮಾಡಿದ್ದರೆ, ಅದು ಸೆಪ್ಟೆಂಬರ್ 2022 ರಲ್ಲಿ 5,750 ಯುನಿಟ್‌ಗಳನ್ನು ಮಾರಾಟ ಮಾಡಿದೆ.
ಇದನ್ನೂ ಓದಿ : ಈ ಕಾರಿನ ಮೇಲೆ ಸಿಗುತ್ತಿದೆ 1.20 ಲಕ್ಷ ರೂಪಾಯಿ ರಿಯಾಯಿತಿ.! ಖರೀದಿಗೆ ಇದುವೇ ಶುಭ ಸಮಯ
ಮಾರುತಿ ಸುಜುಕಿ ಇಗ್ನಿಸ್‌ನ ವೈಶಿಷ್ಟ್ಯಗಳು :
ಇಗ್ನಿಸ್ 1.2 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 83 PS ಪವರ್ ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. ಇಗ್ನಿಸ್ DRL ಜೊತೆಗೆ LED ಹೆಡ್‌ಲ್ಯಾಂಪ್‌ಗಳು, ಪಡಲ್ ಲ್ಯಾಂಪ್‌ಗಳು, Android Auto ಮತ್ತು Apple CarPlay ಸಂಪರ್ಕದೊಂದಿಗೆ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ AC ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.
ಮಾರುತಿ ಸುಜುಕಿ ಇಗ್ನಿಸ್ ಬೆಲೆ :
ಮಾರುತಿ ಇಗ್ನಿಸ್ ಬೆಲೆ 5.35 ಲಕ್ಷದಿಂದ ಪ್ರಾರಂಭವಾಗಿ 7.72 ಲಕ್ಷದವರೆಗೆ ಹೋಗುತ್ತದೆ. ಇದು ಒಟ್ಟು 7 ರೂಪಾಂತರಗಳಲ್ಲಿ ಬರುತ್ತದೆ. ಇಗ್ನಿಸ್‌ನ ಮೂಲ ಮಾದರಿಯೆಂದರೆ ಸಿಗ್ಮಾ, ಇದರ ಬೆಲೆ 5.35 ಲಕ್ಷ ಟಾಪ್ ವೆರಿಯೇಂಟ್ ಆಲ್ಫಾ ಎಎಂಟಿ, ಇದರ ಬೆಲೆ 7.72 ಲಕ್ಷ ರೂಪಾಯಿ.
ಇದನ್ನೂ ಓದಿ : Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.