ನಿಮ್ಮ UPI ಪಾವತಿ ಫೇಲ್ ಆಗಿದೆಯಾ? ಅದಕ್ಕೆ  ಬ್ಯಾಂಕ್ ನೀಡಲಿದೆ ಪ್ರತಿದಿನ ₹ 100 ಪರಿಹಾರ!

ಈ ದಿನ ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಕಾರ್ಯನಿರ್ವಹಿಸರಲಿಲ್ಲ. ಅಲ್ಲದೆ,  ಆ ದಿನ ಕೆಲವು ಬ್ಯಾಂಕುಗಳ ಯುಪಿಐ ಮತ್ತು ಐಎಂಪಿಎಸ್ ವ್ಯವಹಾರಗಳು ವಿಫಲವಾಗಿವೆ.

Last Updated : Apr 6, 2021, 03:36 PM IST
  • ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಿದೆ
  • ಈ ದಿನ ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಕಾರ್ಯನಿರ್ವಹಿಸರಲಿಲ್ಲ. ಅಲ್ಲದೆ, ಆ ದಿನ ಕೆಲವು ಬ್ಯಾಂಕುಗಳ ಯುಪಿಐ ಮತ್ತು ಐಎಂಪಿಎಸ್ ವ್ಯವಹಾರಗಳು ವಿಫಲವಾಗಿವೆ.
  • ಯುಪಿಐ ಬಳೆಕೆ ವಿಫಲವಾದರೆ ಮತ್ತು ಬ್ಯಾಂಕ್ ಅದನ್ನು ನಿಮ್ಮ ಖಾತೆಗೆ ಸಮಯಕ್ಕೆ ಸರಿಯಾಗಿ ಹಿಂದಿರುಗಿಸದಿದ್ದರೆ ಏನು ಮಾಡಬೇಕು
ನಿಮ್ಮ UPI ಪಾವತಿ ಫೇಲ್ ಆಗಿದೆಯಾ? ಅದಕ್ಕೆ  ಬ್ಯಾಂಕ್ ನೀಡಲಿದೆ ಪ್ರತಿದಿನ ₹ 100 ಪರಿಹಾರ! title=

ನವದೆಹಲಿ: ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಿದೆ, ಈ ದಿನ ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಕಾರ್ಯನಿರ್ವಹಿಸರಲಿಲ್ಲ. ಅಲ್ಲದೆ,  ಆ ದಿನ ಕೆಲವು ಬ್ಯಾಂಕುಗಳ ಯುಪಿಐ ಮತ್ತು ಐಎಂಪಿಎಸ್ ವ್ಯವಹಾರಗಳು ವಿಫಲವಾಗಿವೆ. ಈ ಕಾರಣದಿಂದ ಕೆಲವು ಬ್ಯಾಂಕ್ ಗ್ರಾಹಕರ ಹಣ ಸಿಲುಕಿಕೊಂಡಿದೆ. ಈ  ಯುಪಿಐ ಬಳೆಕೆ ವಿಫಲವಾದರೆ ಮತ್ತು ಬ್ಯಾಂಕ್ ಅದನ್ನು ನಿಮ್ಮ ಖಾತೆಗೆ ಸಮಯಕ್ಕೆ ಸರಿಯಾಗಿ ಹಿಂದಿರುಗಿಸದಿದ್ದರೆ ಏನು ಮಾಡಬೇಕು ಎಂಬುವುದನ್ನ ಈ ಕೆಳಗೆ ಓದಿ.

ಏಪ್ರಿಲ್ 1 ರಂದು ಯುಪಿಐ ಪಾವತಿ ವಿಫಲವಾಗಿವೆ: ಏಪ್ರಿಲ್ 1 ರಂದು ಬ್ಯಾಕ್ ಬಂದ್ ಇದ್ದ ಕಾರಣ ಗ್ರಾಹಕರು ಐಎಂಪಿಎಸ್ ಮತ್ತು ಯುಪಿಐ ಸೇವೆ(UPI Service)ಗಳ ಮೊರೆ ಹೋಗಬೇಕಾಗಿತ್ತು. ಆದ್ರೆ ಅಂದು ಇವುಗಳು ಕೂಡ ಕೈಕೊಟ್ಟವು ಹೀಗಾಗಿ ಕೆಲ ಗ್ರಾಹಕರ ವಹಿವಾಟು ವಿಫಲವಾಗಿವೆ. ಅಂದು ಸಂಜೆಗೆ ಐಎಂಪಿಎಸ್ ಮತ್ತು ಯುಪಿಐ ಸೇವೆಗಳು ಮತ್ತು ಬ್ಯಾಂಕುಗಳು ಸಹಜ ಸ್ಥಿತಿಗೆ ಮರಳಿದವು ಎಂದು ಎಂದು  ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಟ್ವೀಟ್ ಮಾಡಿದೆ. ಐಎಂಪಿಎಸ್ ಮತ್ತು ಯುಪಿಐ ಸೇವೆಗಲಿಂಡಾ ಸಿಲುಕಿರುವ ಹಣವನ್ನ ವಾಪಸ್ ಪಡೆಯುವುದು ಹೇಗೆ? ಅದಕ್ಕೆ ಉಟ್ಟ ಇಲ್ಲಿದೆ. 

ಇದನ್ನೂ ಓದಿ : WhatsApp LPG Cylinder Booking: ವಾಟ್ಸಾಪ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬುಕ್ ಮಾಡಲು ಇಲ್ಲಿದೆ ಸುಲಭ ವಿಧಾನ

ಇದಕ್ಕೆ ಸಂಬಂಧಪಟ್ಟ RBI ಮಾರ್ಗಸೂಚಿಗಳು: ಅಕ್ಟೋಬರ್ 2019 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಯ ಮಾರ್ಗಸೂಚಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು, ಈ ಸುತ್ತೋಲೆಯಲ್ಲಿ, ಹಣವನ್ನು ಸ್ವಯಂಚಾಲಿತವಾಗಿ ಹಿಂತಿರುಗಿಸಲು ಗಡುವನ್ನು ನಿಗದಿಪಡಿಸಲಾಗಿದೆ. ಈ ಸಮಯದೊಳಗೆ ವಹಿವಾಟಿನ ಇತ್ಯರ್ಥ ಅಥವಾ ರೀಫಂಡ್  ಮಾಡದಿದ್ದರೆ ಗ್ರಾಹಕರಿಗೆ ಬ್ಯಾಂಕ್ ಪರಿಹಾರವನ್ನು ಪಾವತಿಸಬೇಕಾಗುತ್ತದೆ. ಸುತ್ತೋಲೆಯ ಪ್ರಕಾರ, ಗಡುವು ಮುಗಿದ ನಂತರ, ದಿನಕ್ಕೆ 100 ರೂ ದರದಲ್ಲಿ ಪರಿಹಾರವನ್ನು ನೀಡಬೇಕಾಗುತ್ತದೆ.

ಇದನ್ನೂ ಓದಿ : Debit-Credit ಕಾರ್ಡ್ ಇಲ್ಲದೆ ಎಟಿಎಂನಿಂದ ಹಣ ಹಿಂಪಡೆಯುವುದು ಹೇಗೆ?

ಸುತ್ತೋಲೆಯ ಪ್ರಕಾರ, ಯುಪಿಐ ವಹಿವಾಟು ವಿಫಲವಾದರೆ ಮತ್ತು ಹಣವನ್ನು ಗ್ರಾಹಕರ ಖಾತೆಯಿಂದ ಕಟ್ ಆದರೆ, ಹಣ(Money)ವು ಫಲಾನುಭವಿಗಳ ಖಾತೆಯನ್ನು ತಲುಪದಿದ್ದರೆ. ಆ ಹಣ  T+1 ದಿನದೊಳಗೆ ಗ್ರಾಹಕನಿಗೆ ತಲುಪಬೇಕು. ಇಲ್ಲಿ T ವಹಿವಾಟಿನ ದಿನ ಮತ್ತು +1 ಎಂದರೆ ಒಂದು ದಿನ ಅಥವಾ 24 ಗಂಟೆ ಎಂದರ್ಥ. 

ಇದನ್ನೂ ಓದಿ : Gold -Silver Rate : ಇಂದಿನ ಚಿನ್ನದ ಬೆಲೆಯಲ್ಲಿ 1 ಸಾವಿರ ರೂ. ಏರಿಕೆ!

ಇಲ್ಲಿ ದೂರು ನೀಡಬಹುದು: ಮೊದಲನೆಯದಾಗಿ, ನೀವು ಸೇವಾ ಪೂರೈಕೆದಾರರಿಗೆ ದೂರು ನೀಡಬೇಕು. ನಿಮ್ಮ ದೂರನ್ನು ಸರಿಯಾಗಿ ಬರೆದು ಅದಕ್ಕೆ ಬೇಕಾದ ದಾಖಲೆಗಳನ್ನು ಲಗತ್ತಿಸಿ ನಿಮ್ಮ ಖಾತೆ(Bank Account) ಹೊಂದಿರುವ ಬ್ಯಾಂಕ್ ಗೆ ದೂರು ಸಲ್ಲಿಸಬೇಕು. ದೂರು ತೆಗೆದುಕೊಂಡವರೇ ನಿಮ್ಮ ಹಣ ನೀಡುತ್ತಾರೆ.  ದೂರು ನೀಡಿದ್ದರೂ ಬ್ಯಾಂಕಿನಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ನೀವು ರಿಸರ್ವ್ ಬ್ಯಾಂಕಿನ 2019 ರ ಡಿಜಿಟಲ್ ವಹಿವಾಟಿನ ಒಂಬುಡ್ಸ್ಮನ್ ಯೋಜನೆಯಡಿ ದೂರು ನೀಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

Trending News