ಎರಡು ದಿನಗಳ ಇಳಿಕೆಯ ನಂತರ ಇಂದು ಎಷ್ಟಾಗಿದೆ ನೋಡಿ ಬಂಗಾರದ ಬೆಲೆ !

Gold-Silver Price Today, 18 October:ಸತತ 2 ದಿನಗಳ ಕುಸಿತದ ನಂತರ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ . 

Written by - Ranjitha R K | Last Updated : Oct 18, 2023, 02:02 PM IST
  • ಸತತ 2 ದಿನಗಳ ಕುಸಿತದ ನಂತರ ಚಿನ್ನದ ಬೆಲೆಯಲ್ಲಿ ಏರಿಕೆ
  • MCX ನಲ್ಲಿ ಚಿನ್ನ ಮತ್ತು ಬೆಳ್ಳಿ ದುಬಾರಿ
  • ಅಮೆರಿಕ ಮಾರುಕಟ್ಟೆಯಲ್ಲೂ ಚಿನ್ನದ ದರ ಏರಿಕೆ
ಎರಡು ದಿನಗಳ ಇಳಿಕೆಯ ನಂತರ ಇಂದು ಎಷ್ಟಾಗಿದೆ ನೋಡಿ ಬಂಗಾರದ ಬೆಲೆ ! title=

Gold-Silver Price Today, 18 October : ಸತತ 2 ದಿನಗಳ ಕುಸಿತದ ನಂತರ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ (Gold price hike today).ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನ ದುಬಾರಿಯಾಗಿದೆ. ಇದರೊಂದಿಗೆ ಬೆಳ್ಳಿ ಬೆಲೆಯಲ್ಲಿ (Silver price today) ಕೂಡಾ ಸುಮಾರು 700 ರೂ.ಯಷ್ಟು ಏರಿಕೆಯಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ (MCX ಚಿನ್ನದ ಬೆಲೆ) ಇಂದು 59,600  ರೂಪಾಯಿ ಮೀರಿ ವಹಿವಾಟು ನಡೆಸುತ್ತಿದೆ. 

MCX ನಲ್ಲಿ ಚಿನ್ನ ಮತ್ತು ಬೆಳ್ಳಿ ದುಬಾರಿ :
ಇಂದು, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಶೇಕಡಾ 0.65 ರಷ್ಟು ಏರಿಕೆಯಾಗಿ 59,608 ರೂಪಾಯಿಗಳ ಮಟ್ಟದಲ್ಲಿದೆ. ಇದಲ್ಲದೇ ಬೆಳ್ಳಿಯ ದರದಲ್ಲಿ ಶೇ.0.81ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 72150 ರೂ. ಆಗಿದೆ.

ಇದನ್ನೂ ಓದಿ : ಇ.ವಿ. ಕ್ಷೇತ್ರದಲ್ಲಿ 40 ಸಾವಿರ ಕೋಟಿ ರೂ. ಹೂಡಿಕೆ: ಸಚಿವ ಎಂ ಬಿ ಪಾಟೀಲ

ಅಮೆರಿಕ ಮಾರುಕಟ್ಟೆಯಲ್ಲೂ ಚಿನ್ನದ ದರ ಏರಿಕೆ : 
ಅಮೆರಿಕ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಇಂದು US ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 1,936.80 ಡಾಲರ್ ಆಗಿದ್ದು, ಶೇಕಡಾ 0.74 ರಷ್ಟು ಏರಿಕೆ ಕಂಡಂತಾಗಿದೆ. ಇದಲ್ಲದೆ, ಬೆಳ್ಳಿಯ ಬೆಲೆಯು ಶೇಕಡಾ 1.18 ರಷ್ಟು ಏರಿಕೆಯಾಗಿದ್ದು, ಪ್ರತಿ ಔನ್ಸ್ಗೆ 23.06 ಡಾಲರ್ ಆಗಿದೆ. 

22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು? : 
ದೆಹಲಿ - 55,100 ರೂ. , ಚೆನ
ಚೆನ್ನೈ  - 55,150 ರೂ.
ಅಹಮದಾಬಾದ್‌ - 55,000 ರೂ.
ಬೆಂಗಳೂರು-54,950 ರೂ. 
ಹೈದರಾಬಾದ್- 54,950 ರೂ. 
ಕೋಲ್ಕತ್ತಾ - 54,950 ರೂ.  
ಮುಂಬೈ - 54,950 ರೂ. 

ಇದನ್ನೂ ಓದಿ : Today Arecanut Rate: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ

ಇಂದಿನ ಬೆಲೆಯನ್ನು ಈ ರೀತಿ ಪರಿಶೀಲಿಸಿ : 
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ನಂಬರ್ ನಿಂದ ಮಿಸ್ಡ್ ಕಾಲ್ ಕೊಡುತ್ತಿರೋ ಅದೇ ನಂಬರ್ ಗೆ ಮೆಸೇಜ್ ಬರುತ್ತದೆ. 

( ಸೂಚನೆ : ಈ ಮೇಲಿನ ದರಗಳನ್ನು ಈ ಸುದ್ದಿ ಬರೆಯುವ ಹೊತ್ತಿನ ಆಧಾರದ ಮೇಲೆ ನೀಡಲಾಗಿದೆ. ಬೇರೆ ಬೇರೆ ನಗರಗಳಿಗೆ ಅನುಗುಣವಾಗಿ ಚಿನ್ನದ ದರದಲ್ಲಿ ವ್ಯತ್ಯಾಸ ಕಂಡು ಬರಬಹುದು. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News