Nitin Gadkari: ಭಾರತದ ಆರ್ಥಿಕತೆ ಕುರಿತು ನಿತೀನ್ ಗಡ್ಕರಿ ಮಹತ್ವದ ಹೇಳಿಕೆ, ಕೇಳಿ ನೀವೂ ಖುಷಿಪಡಿ

Nitin Gadkari: 2024-25ರ ವೇಳೆಗೆ ದೇಶವು 5,000 ಶತಕೋಟಿ ಡಾಲರ್‌ಗಳ ಒಟ್ಟು ಆಂತರಿಕ ಉತ್ಪನ್ನವನ್ನು (ಜಿಡಿಪಿ) ಸಾಧಿಸುವತ್ತ ಸ್ಥಿರವಾಗಿ ದಾಪುಗಾಲು ಇಡುತ್ತಿದೆ  ಎಂದು ಕೇಂದ್ರ ಸಚಿವ ಗಡ್ಕರಿ ಹೇಳಿದ್ದಾರೆ.  

Written by - Nitin Tabib | Last Updated : Dec 16, 2022, 02:45 PM IST
  • ಮುಂಬರುವ ದಿನಗಳಲ್ಲಿ ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
  • ನಾವು ಉಕ್ಕು ಮತ್ತು ಸಿಮೆಂಟ್ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
  • ಇದರ ಜೊತೆಗೆ , ನಿರಂತರವಾಗಿ ವಿದ್ಯುತ್ ಚಲನಶೀಲತೆಯನ್ನು ಉತ್ತೆಜಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
Nitin Gadkari: ಭಾರತದ ಆರ್ಥಿಕತೆ ಕುರಿತು ನಿತೀನ್ ಗಡ್ಕರಿ ಮಹತ್ವದ ಹೇಳಿಕೆ, ಕೇಳಿ ನೀವೂ ಖುಷಿಪಡಿ title=
Nitin Gadkari On Indian Economy

Indian Economy: ತಮ್ಮ ಕಾರ್ಯಶೈಲಿ ಹಾಗೂ ಮಾತನಾಡುವ ವಿಧಾನದಿಂದ ಯಾವಾಗಲೂ ಗಮನ ಸೆಳೆಯುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಈ ಬಾರಿ ಭಾರತೀಯ ಆರ್ಥಿಕತೆಯ ಬಗ್ಗೆ ಮಹತ್ವದ ಮತ್ತು ಎಲ್ಲರೂ ಕೇಳಿ ಎಲ್ಲರು ಖುಷಿಪಡುವ ಹೇಳಿಕೆಯೊಂದನ್ನು ನೀಡಿದ್ದಾರೆ. 2024-25ರ ವೇಳೆಗೆ ದೇಶವು 5,000 ಶತಕೋಟಿ ಡಾಲರ್‌ಗಳ ಒಟ್ಟು ಆಂತರಿಕ ಉತ್ಪನ್ನವನ್ನು (ಜಿಡಿಪಿ) ಸಾಧಿಸುವತ್ತ ಸ್ಥಿರವಾಗಿ ದಾಪುಗಾಲು ಇಡುತ್ತಿದೆ ಎಂದು ಕೇಂದ್ರ ಸಚಿವ ಗಡ್ಕರಿ ಹೇಳಿದ್ದಾರೆ. ಶುಕ್ರವಾರ ನಡೆದ FICCI ಯ ಕಾರ್ಯಕ್ರಮವೊಂದರಲ್ಲಿ ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಎಂದು ಹೇಳಿದ್ದಾರೆ.

ರಫ್ತು ಹೆಚ್ಚಿಸಿ ಆಮದು ಕಡಿಮೆ ಮಾಡಬೇಕು
2024-25ರ ವೇಳೆಗೆ ಭಾರತವು 5,000 ಶತಕೋಟಿ ಡಾಲರ್ ಆರ್ಥಿಕತೆಯಾಗಲಿದೆ ಎಂದು ಹೇಳಿದ ಅವರು, ಅಭಿವೃದ್ಧಿ ಸಾಧಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಬೆಳವಣಿಗೆ ಮತ್ತು ಉದ್ಯೋಗವನ್ನು ಉತ್ತೇಜಿಸುತ್ತಿದೆ. 2030 ರ ವೇಳೆಗೆ ಜಾಗತಿಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ) ಸಾಧಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ ಎಂದು ಗಡ್ಕರಿ ಹೇಳಿದ್ದಾರೆ. ಇದಕ್ಕಾಗಿ ರಫ್ತು ಹೆಚ್ಚಿಸುವ ಮತ್ತು ಆಮದು ಕಡಿಮೆ ಮಾಡುವ ಅಗತ್ಯವನ್ನು ಗಡ್ಕರಿ ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ-LIC ಈ ಯೋಜನೆಯಲ್ಲಿ ನಿತ್ಯ ಕೇವಲ ರೂ.110 ಹೂಡಿಕೆ ಮಾಡಿ, ಮೂರು ಪಟ್ಟು ರಿಟರ್ನ್ ಪಡೆಯಿರಿ

7.5 ಲಕ್ಷ ಕೋಟಿ ಮೌಲ್ಯ ತಲುಪಿದೆ ದೇಶದ ವಾಹನ ಉದ್ಯಮ
'ಬಯೋ-ಎಥೆನಾಲ್, ಬಯೋ-ಸಿಎನ್‌ಜಿ, ಬಯೋ-ಎಲ್‌ಎನ್‌ಜಿ ಮತ್ತು ಹಸಿರು ಹೈಡ್ರೋಜನ್‌ನಂತಹ ಪರ್ಯಾಯ, ಶುದ್ಧ ಮತ್ತು ಹಸಿರು ಇಂಧನಗಳ ಅಭಿವೃದ್ಧಿಗೆ ನಾವು ನಾವು ನಿದ್ರನ್ತರವಾಗಿ ಕೆಲಸ ಮಾಡುತ್ತಿದ್ದೇವೆ' ಎಂದು ಅವರು ಹೇಳಿದ್ದಾರೆ. ಪ್ರಸ್ತುತ ದೇಶದ ವಾಹನ ಉದ್ಯಮವು 7.5 ಲಕ್ಷ ಕೋಟಿ ರೂ.ಗೆ ತಲುಪಿದ್ದು, ನಾವು ಅದನ್ನು 15 ಲಕ್ಷ ಕೋಟಿಗೆ ಕೊಂಡೊಯ್ಯಲು ಬಯಸುತ್ತೇವೆ. ಇದು ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ-Income Tax ಪಾವತಿದಾರರಿಗೊಂದು ಬಂಬಾಟ್ ಸುದ್ದಿ, ಶೀಘ್ರದಲ್ಲಿಯೇ ವಿತ್ತ ಸಚಿವರಿಂದ ಘೋಷಣೆ!

ಇದಲ್ಲದೆ ಮುಂಬರುವ ದಿನಗಳಲ್ಲಿ ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ನಾವು ಉಕ್ಕು ಮತ್ತು ಸಿಮೆಂಟ್ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ , ನಿರಂತರವಾಗಿ ವಿದ್ಯುತ್ ಚಲನಶೀಲತೆಯನ್ನು ಉತ್ತೆಜಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News