Indian Railways: ಭಾರತೀಯ ರೈಲ್ವೆಯ ಈ ಉಚಿತ ಸೇವೆಗಳ ಬಗ್ಗೆ ನಿಮಗೆ ತಿಳಿದಿದೆಯೇ?

ಭಾರತೀಯ ರೈಲ್ವೆಯನ್ನು ದೇಶದ ಜೀವನಾಡಿ ಎಂದು ಕರೆಯಲಾಗುತ್ತದೆ. ಭಾರತೀಯ ರೈಲ್ವೆ ವಿಶ್ವದ 4ನೇ ಅತಿದೊಡ್ಡ ಜಾಲವಾಗಿದ್ದು, ಇದು ದೇಶದಾದ್ಯಂತ 1.2 ಲಕ್ಷ ಕಿ.ಮೀ ವ್ಯಾಪ್ತಿ ಹೊಂದಿದೆ. ಅದು ಕಾಶ್ಮೀರ ಇರಲಿ ಅಥವಾ ಕನ್ಯಾಕುಮಾರಿಯಾಗಿರಲಿ ದೇಶದ ಬಹುತೇಕ ಜನರು ಹೆಚ್ಚಾಗಿ ರೈಲ್ವೆ ಪ್ರಯಾಣವನ್ನೇ ಆಶ‍್ರಯಿಸಿದ್ದಾರೆ. ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಉಚಿತ ಸೇವೆಗಳನ್ನು ನೀಡುತ್ತಿದೆ. ಈ ಸೇವೆಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿರುತ್ತದೆ. ಆ ಸೇವೆಗಳು ಯಾವುವು? ಎಂಬುದರ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

Written by - Puttaraj K Alur | Last Updated : Jul 27, 2022, 05:00 PM IST
  • ಟಿಕೆಟ್‌ ಬುಕಿಂಗ್ ಸಮಯದಲ್ಲಿ ಪ್ರಯಾಣಿಕರಿಗೆ Class Upgradation ಸೌಲಭ್ಯವಿರುತ್ತದೆ
  • Waiting List ಪ್ರಯಾಣಿಕರಿಗೆ ಮತ್ತೊಂದು ರೈಲಿನಲ್ಲಿ ಆಸನ ಲಭ್ಯತೆ ಆಧಾರದ ಮೇಲೆ ಪ್ರಯಾಣಿಸಲು ಅವಕಾಶ
  • ಭಾರತೀಯ ರೈಲ್ವೆಯು ಟಿಕೆಟ್‌ಗಳನ್ನು ವರ್ಗಾಯಿಸುವ ಆಯ್ಕೆಯನ್ನು ಸಹ ನೀಡುತ್ತದೆ
Indian Railways: ಭಾರತೀಯ ರೈಲ್ವೆಯ ಈ ಉಚಿತ ಸೇವೆಗಳ ಬಗ್ಗೆ ನಿಮಗೆ ತಿಳಿದಿದೆಯೇ?   title=
Indian Railway Free Service

ನವದೆಹಲಿ: ಭಾರತೀಯ ರೈಲ್ವೆಯನ್ನು ದೇಶದ ಜೀವನಾಡಿ ಎಂದು ಕರೆಯಲಾಗುತ್ತದೆ. ಭಾರತೀಯ ರೈಲ್ವೆ ವಿಶ್ವದ 4ನೇ ಅತಿದೊಡ್ಡ ಜಾಲವಾಗಿದ್ದು, ಇದು ದೇಶದಾದ್ಯಂತ 1.2 ಲಕ್ಷ ಕಿ.ಮೀ ವ್ಯಾಪ್ತಿ ಹೊಂದಿದೆ. ಅದು ಕಾಶ್ಮೀರ ಇರಲಿ ಅಥವಾ ಕನ್ಯಾಕುಮಾರಿಯಾಗಿರಲಿ ದೇಶದ ಬಹುತೇಕ ಜನರು ಹೆಚ್ಚಾಗಿ ರೈಲ್ವೆ ಪ್ರಯಾಣವನ್ನೇ ಆಶ‍್ರಯಿಸಿದ್ದಾರೆ. ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಉಚಿತ ಸೇವೆಗಳನ್ನು ನೀಡುತ್ತಿದೆ. ಈ ಸೇವೆಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿರುತ್ತದೆ. ಆ ಸೇವೆಗಳು ಯಾವುವು? ಎಂಬುದರ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಪ್ರಯಾಣಿಕರಿಗೆ ಸಿಗುವ ಉಚಿತ ಸೌಲಭ್ಯ   

ಟಿಕೆಟ್‌ಗಳ ಬುಕಿಂಗ್ ಸಮಯದಲ್ಲಿ ರೈಲ್ವೆಯು ಪ್ರಯಾಣಿಕರಿಗೆ ವರ್ಗ ಉನ್ನತೀಕರಣ(Class Upgradation)ದ ಸೌಲಭ್ಯವನ್ನು ಒದಗಿಸುತ್ತದೆ. ಅಂದರೆ ಸ್ಲೀಪರ್‌ ಕೋಚ್ ಬುಕ್ ಮಾಡಿದ ಪ್ರಯಾಣಿಕರು 3ನೇ ಎಸಿ ಕ್ಲಾಸ್‍(AC 3 Tier) ಪಡೆಯಬಹುದು ಮತ್ತು 3ನೇ ಎಸಿ ಕ್ಲಾಸ್ ಪ್ರಯಾಣಿಕರು 2ನೇ ಎಸಿ ಕ್ಲಾಸ್(AC 2 Tier) ಪಡೆಯಬಹುದು. 2ನೇ ಎಸಿ ಕ್ಲಾಸ್ ಪ್ರಯಾಣಿಕರು ಅದೇ ದರದಲ್ಲಿ ಫಸ್ಟ್ ಎಸಿ ಕ್ಲಾಸ್ ಸೌಲಭ್ಯ(First AC Facility)ವನ್ನು ಪಡೆಯಬಹುದು. ಈ ಸೌಲಭ್ಯವನ್ನು ಪಡೆಯಲು ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಆಟೋ ಅಪ್‌ಗ್ರೇಡ್ ಆಯ್ಕೆ ಕ್ಲಿಕ್ ಮಾಡಬೇಕು. ಇದರ ನಂತರ ರೈಲ್ವೆ ಲಭ್ಯತೆಯ ಆಧಾರದ ಮೇಲೆ ಟಿಕೆಟ್ ನವೀಕರಿಸುತ್ತದೆ. ಆದರೆ, ಪ್ರತಿ ಬಾರಿಯೂ ಟಿಕೆಟ್ ನವೀಕರಿಸುವ ಅಗತ್ಯವಿಲ್ಲ.

ಇದನ್ನೂ ಓದಿ: Bank Holiday : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಆಗಸ್ಟ್‌ನಲ್ಲಿ 13 ದಿನ ಬಂದ್..!

ಅದೇ ರೀತಿ waiting list ಪ್ರಯಾಣಿಕರಿಗೆ ಮತ್ತೊಂದು ರೈಲಿನಲ್ಲಿ ಆಸನ ಲಭ್ಯತೆಯ ಆಧಾರದ ಮೇಲೆ ಪ್ರಯಾಣಿಸಲು ಅವಕಾಶ ನೀಡುತ್ತದೆ. ಇದಕ್ಕಾಗಿ ರೈಲ್ವೆ ‘ವಿಕಲ್ಪ್ ಸೇವೆ’ ಆರಂಭಿಸಿದೆ. ದೃಢೀಕೃತ ಟಿಕೆಟ್ ಪಡೆಯಲು ಸಾಧ್ಯವಾಗದ ಪ್ರಯಾಣಿಕರು ಮತ್ತೊಂದು ರೈಲಿನಲ್ಲಿ ಸೀಟು ಪಡೆಯಲು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ‘Option’ ಆಯ್ಕೆ ಮಾಡಿಕೊಳ್ಳಬೇಕು. ಇದರ ನಂತರ ರೈಲ್ವೆ ಈ ಸೌಲಭ್ಯವನ್ನು ಒದಗಿಸುತ್ತದೆ.

ಟಿಕೆಟ್‍ಗಳನ್ನು ವರ್ಗಾಯಿಸುವ ಆಯ್ಕೆ

ಭಾರತೀಯ ರೈಲ್ವೆಯು ಟಿಕೆಟ್‌ಗಳನ್ನು ವರ್ಗಾಯಿಸುವ ಆಯ್ಕೆಯನ್ನು ಸಹ ನೀಡುತ್ತದೆ. ಒಬ್ಬ ವ್ಯಕ್ತಿಯು ಯಾವುದೇ ಕಾರಣದಿಂದ ಪ್ರಯಾಣಿಸಲು ಸಾಧ್ಯವಾಗದಿದ್ದರೆ, ಅವರು ತನ್ನ ಕುಟುಂಬದ ಯಾವುದೇ ಸದಸ್ಯರ ಹೆಸರಿಗೆ ಟಿಕೆಟ್ ವರ್ಗಾಯಿಸಬಹುದು. ಆದರೆ ಪ್ರಯಾಣ ದಿನದ 24 ಗಂಟೆಗಳ ಮೊದಲು ಟಿಕೆಟ್ ವರ್ಗಾವಣೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಆಗಸ್ಟ್ ಒಂದರಿಂದ ಬದಲಾಗಲಿವೆ ಈ ನಿಯಮಗಳು.! ಜೇಬಿನ ಮೇಲೆ ಬೀಳಲಿದೆ ನೇರ ಪರಿಣಾಮ

ಈ ಸೌಲಭ್ಯದಡಿ ಟಿಕೆಟ್‌ಗಳನ್ನು ತಾಯಿ, ತಂದೆ, ಸಹೋದರಿ, ಮಗ, ಮಗಳು, ಪತಿ ಮತ್ತು ಹೆಂಡತಿಯ ಹೆಸರಿಗೆ ಮಾತ್ರ ವರ್ಗಾಯಿಸಬಹುದು. ಇದಕ್ಕಾಗಿ, ಟಿಕೆಟ್‌ನ ಪ್ರಿಂಟ್ ತೆಗೆದುಕೊಂಡು, ನೀವು ಹತ್ತಿರದ ರೈಲ್ವೆ ನಿಲ್ದಾಣಕ್ಕೆ ಹೋಗಬೇಕಾಗುತ್ತದೆ. ಟಿಕೆಟ್ ಹೊಂದಿರುವವರ ID ಪುರಾವೆಯ ಮೂಲಕ ಟಿಕೆಟ್ ವರ್ಗಾಯಿಸಿಕೊಳ್ಳಬಹುದು. ಆದರೆ, ಟಿಕೆಟ್‌ಗಳನ್ನು ಒಮ್ಮೆ ಮಾತ್ರ ವರ್ಗಾಯಿಸುವ ಅವಕಾಶವಿರುತ್ತದೆ.

ಟಿಕೆಟ್ ವರ್ಗಾವಣೆಯಂತೆ ಬೋರ್ಡಿಂಗ್ ನಿಲ್ದಾಣ ಬದಲಾಯಿಸುವ ಸೌಲಭ್ಯವು 24 ಗಂಟೆಗಳ ಮುಂಚಿತವಾಗಿ ಪ್ರಯಾಣಿಕರಿಗೆ ಲಭ್ಯವಿರುತ್ತದೆ. ಅಂದರೆ ಒಬ್ಬ ಪ್ರಯಾಣಿಕನು ದೆಹಲಿಯಿಂದ ಟಿಕೆಟ್ ಕಾಯ್ದಿರಿಸಿದ್ದರೆ ಮತ್ತು ಆ ರೈಲು ಮಾರ್ಗದಲ್ಲಿ ಬೇರೆ ಯಾವುದೇ ನಿಲ್ದಾಣದಿಂದ ಹತ್ತಲು ಬಯಸಿದರೆ, ಆಗ ಅವರು ತನ್ನ ನಿಲ್ದಾಣ ಬದಲಾಯಿಸಬಹುದು.

ಬೋರ್ಡಿಂಗ್ ನಿಲ್ದಾಣದ ಬದಲಾವಣೆಯನ್ನು ಆನ್‌ಲೈನ್‌ನಲ್ಲಿ ಮಾಡಬಹುದು. IRCTC ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿದ ನಂತರ ಬುಕ್ ಮಾಡಿದ ಟಿಕೆಟ್ ಹಿಸ್ಟರಿಗೆ ಹೋಗುವ ಮೂಲಕ ನೀವು ಬೋರ್ಡಿಂಗ್ ಸ್ಟೇಷನ್ ಬದಲಾಯಿಸಬಹುದು. ಆದರೆ ಈ ಬದಲಾವಣೆಯ ಸೌಲಭ್ಯವು ಒಮ್ಮೆ ಮಾತ್ರ ಲಭ್ಯವಿರುತ್ತದೆ ಮತ್ತು ಒಮ್ಮೆ ನಿಲ್ದಾಣವನ್ನು ಬದಲಾಯಿಸಿದರೆ ಹಿಂದೆ ಕಾಯ್ದಿರಿಸಿದ ನಿಲ್ದಾಣ(Previously Booked)ದ ಹಕ್ಕುಗಳು ಕೊನೆಗೊಳ್ಳುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News