ರೈಲಿನಲ್ಲಿ MRPಗಿಂತ ಹೆಚ್ಚು ಕೊಟ್ಟು ಮೋಸ ಹೋಗಬೇಡಿ! ದೂರು ನೀಡುವುದು ಹೇಗೆಂದು ತಿಳಿಯಿರಿ

ಭಾರತೀಯ ರೈಲ್ವೆ ನಿಯಮ: ಭಾರತೀಯ ರೈಲ್ವೇಯನ್ನು ಅಗ್ಗದ, ಸುರಕ್ಷಿತ ಮತ್ತು ದೂರದ ಪ್ರಯಾಣಕ್ಕೆ ಆರಾಮದಾಯಕವೆಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ನೀವು ರೈಲ್ವೆಯಲ್ಲಿ ಮಾರಾಟಗಾರರಿಂದ ಯಾವುದೇ ಆಹಾರ ಖರೀದಿಸಿದಾಗ ಅವರು ಅದಕ್ಕೆ MRP ಮೇಲೆ ಹಚ್ಚಿನ ದರ ಪಡೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಗೊತ್ತಾ?

Written by - Puttaraj K Alur | Last Updated : May 8, 2023, 08:03 AM IST
  • ರೈಲ್ವೆಯಲ್ಲಿ MRPಗಿಂತ ಹೆಚ್ಚಿನ ಬೆಲೆಗೆ ಆಹಾರ ಮಾರಾಟ ಮಾಡುವುದು ಕಾನೂನು ಬಾಹಿರ
  • ರೈಲಿನಲ್ಲಿ ಮನಸೋ ಇಚ್ಛೆ ಹಣ ವಸೂಲಿ ಮಾಡುವವರ ವಿರುದ್ಧ ನೀವು ದೂರು ನೀಡಬಹುದು
  • ಇದಕ್ಕಾಗಿ ನೀವು 139 ರೈಲ್ವೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದು
ರೈಲಿನಲ್ಲಿ MRPಗಿಂತ ಹೆಚ್ಚು ಕೊಟ್ಟು ಮೋಸ ಹೋಗಬೇಡಿ! ದೂರು ನೀಡುವುದು ಹೇಗೆಂದು ತಿಳಿಯಿರಿ title=
ಭಾರತೀಯ ರೈಲ್ವೆ ನಿಯಮ:

ನವದೆಹಲಿ: ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೆಯು ಸುರಕ್ಷಿತ, ಅಗ್ಗದ ಮತ್ತು ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. ರೈಲ್ವೆ ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ. ದೂರ ಪ್ರಯಾಣ ಮಾಡುವಾಗ ನಮಗೂ ಹಸಿವಾಗುತ್ತದೆ. ಈ ಸಮಯದಲ್ಲಿ ನಾವು ರೈಲಿನಲ್ಲಿ ಆಹಾರವನ್ನು ಖರೀದಿಸಿ ಸೇವಿಸುತ್ತೇವೆ. ಈ ವೇಳೆ ಆಹಾರ ಮಾರಾಟಗಾರರು ಎಂಆರ್‌ಪಿಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆಂದು ಪ್ರಯಾಣಿಕರು ಆಗಾಗ ದೂರುತ್ತಾರೆ.

ರೈಲ್ವೆಯಲ್ಲಿ ನಿಮಗೆ MRPಗಿಂತ ಹೆಚ್ಚಿನ ಬೆಲೆಗೆ ಆಹಾರ ಮಾರಾಟ ಮಾಡುತ್ತಿದ್ದರೆ, ಅದು ಸಂಪೂರ್ಣ ಕಾನೂನುಬಾಹಿರ. ಹೀಗಾಗಿ ರೈಲಿನಲ್ಲಿ ಮನಸೋ ಇಚ್ಛೆ ಹಣ ವಸೂಲಿ ಮಾಡುವವರ ಬಗ್ಗೆ ಎಲ್ಲಿ ದೂರು ನೀಡಬೇಕೆಂದು ತಿಳಿಯುವುದು ಅತ್ಯಂತ ಮುಖ್ಯ. ಇದರಿಂದ ನಿಮ್ಮ ಹಣ ವ್ಯರ್ಥವಾಗುವುದಿಲ್ಲ ಮತ್ತು ನೀವು ಸ್ಮಾರ್ಟ್ ಗ್ರಾಹಕರಾಗಬಹುದು.

ಇದನ್ನೂ ಓದಿ: ಸುಂದರ್ ಪಿಚೈ, ಮಸ್ಕ್ ಸೇರಿ ಟಾಪ್‌ ಕಂಪನಿಗಳ ಸಿಇಒ ಸಂಬಳ ತಿಳಿದರೆ ಶಾಕ್ ಆಗುತ್ತೀರಿ..!

ಈ ಸಂಖ್ಯೆಗೆ ಕರೆ ಮಾಡಿ

ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಮಳಿಗೆಗಳನ್ನು ಹೊಂದಿರುವ ಜನರು ಹೆಚ್ಚಿನ ದರಗಳನ್ನು ವಿಧಿಸುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ, ಗ್ರಾಹಕರು ಆಹಾರ ಖರೀದಿಸುವಾಗ ಬೆಲೆಯ ಬಗ್ಗೆ ಏನು ಕೇಳುವುದಿಲ್ಲ. ರೈಲು ಹಿಡಿಯುವ ಆತುರದಲ್ಲಿ ಅವರು ಹೆಚ್ಚಿನ ದರವನ್ನು ನೀಡುತ್ತಾರೆ, ಇದು ಸಂಪೂರ್ಣವಾಗಿ ಕಾನೂನುಬಾಹಿರ. ನಿಮ್ಮ ಬಳಿ ಹೆಚ್ಚಿನ ದರ ಕೇಳಿದ್ರೆ ಆಹಾರ ಮಳಿಗೆಗಳು ಅಥವಾ ಆಹಾರ ಮಾರಾಟ ಮಾಡುವವರ ವಿರುದ್ಧ ನೀವು ದೂರು ಸಲ್ಲಿಸಬಹುದು. ಇದಕ್ಕಾಗಿ ನೀವು 139 ರೈಲ್ವೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಇದಲ್ಲದೇ ನಿಲ್ದಾಣದಲ್ಲಿರುವ ರೈಲ್ವೇ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಬಹುದು ಹಾಗೂ ರೈಲ್ವೇ ಆಪ್ ನಲ್ಲಿಯೂ ದೂರು ದಾಖಲಿಸಬಹುದು.

ಈ ವಿಷಯಗಳನ್ನು ನೆನಪಿನಲ್ಲಿಡಿ

ಅಂಗಡಿಯವನು ಅಥವಾ ಆಹಾರದ ಮಾರಾಟಗಾರರ ಬಗ್ಗೆ ದೂರು ನೀಡುವ ಮೊದಲು, ನೀವು ಕೆಲವು ಮೂಲಭೂತ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಸ್ಟಾಲ್ ಸಂಖ್ಯೆ, ನಿರ್ವಾಹಕರ ಹೆಸರು, ನಿಲ್ದಾಣದ ಹೆಸರು, ಪ್ಲಾಟ್‌ಫಾರ್ಮ್ ಸಂಖ್ಯೆ ಮುಂತಾದ ಹೆಚ್ಚಿನ ದರದಲ್ಲಿ ಆಹಾರ ಮಾರಾಟ ಮಾಡುವ ಆಹಾರ ಮಳಿಗೆಯ ಮಾಲೀಕರ ಎಲ್ಲಾ ವಿವರಗಳನ್ನು ನೀವು ನೀಡಬೇಕು. ಮುಖ್ಯವಾಗಿ ನೀವು ಯಾವ ಸಮಯದಲ್ಲಿ ಆಹಾರ ಖರೀದಿಸಿದ್ದೀರಿ ಎಂಬುದನ್ನು ಗಮನಿಸಲು ಮರೆಯಬೇಡಿ. ದೂರು ಸಲ್ಲಿಸುವಾಗ ಈ ಮಾಹಿತಿಯು ನಿಮಗೆ ಉಪಯುಕ್ತವಾಗಿರುತ್ತದೆ.

ಇದನ್ನೂ ಓದಿ: ಕೇರಳದ ಮಲಪ್ಪುರಂನಲ್ಲಿ ಹೌಸ್‌ಬೋಟ್ ಮುಳುಗಿ 16 ಜನರು ಸಾವು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News