Indian Railways: ಇನ್ನು ಕಡಿಮೆ ಬೆಲೆಯಲ್ಲಿ AC ಕೋಚ್ ಪ್ರಯಾಣ, ರೈಲ್ವೆ ನೀಡುತ್ತಿದೆ ಹೊಸ ಇಕಾನಮಿ ಕ್ಲಾಸ್

ಇಲ್ಲಿಯವರೆಗೆ, ಭಾರತೀಯ ರೈಲ್ವೆ, ರೈಲ್ವೆಯ ವಿವಿಧ ವಲಯಗಳಲ್ಲಿ ಬಳಸಲು ಎಸಿ 'ಎಕಾನಮಿ' ವರ್ಗಕ್ಕಾಗಿ ವಿನ್ಯಾಸಗೊಳಿಸಲಾದ 27 ಬೋಗಿಗಳನ್ನು ವಿತರಿಸಿದೆ. ಈ ಹೊಸ ಎಸಿ-ಎಕಾನಮಿ ಬೋಗಿಗಳಲ್ಲಿ ಪಶ್ಚಿಮ ರೈಲ್ವೆ ವಲಯದ  ಡುರೊಂಟೊ ಎಕ್ಸ್‌ಪ್ರೆಸ್ ರೈಲುಗಳು ಮತ್ತು ದೇಶದ ವಿವಿಧ ಭಾಗಗಳಿಂದಹೊರಡುವ ರೈಲುಗಳು ಸೇರಿವೆ. 

Written by - Ranjitha R K | Last Updated : Jul 20, 2021, 05:55 PM IST
  • ಹೊಸ ಎಸಿ ಬೋಗಿಗಳ ತಯಾರಿಕೆ ಮತ್ತು ರೈಲಿನಲ್ಲಿ ಅಳವಡಿಕೆ ಕಾರ್ಯ ಪ್ರಾರಂಭ
  • 27 ಬೋಗಿಗಳನ್ನು ವಿವಿಧ ವಲಯಗಳಲ್ಲಿ ವಿತರಣೆ
  • ರೈಲ್ವೆ ಮಂಡಳಿ ಈ ವರ್ಗದ ಶುಲ್ಕವನ್ನು ನಿಗದಿಪಡಿಸುವ ಪ್ರಕ್ರಿಯೆಯಲ್ಲಿದೆ.
Indian Railways: ಇನ್ನು ಕಡಿಮೆ ಬೆಲೆಯಲ್ಲಿ AC ಕೋಚ್ ಪ್ರಯಾಣ, ರೈಲ್ವೆ ನೀಡುತ್ತಿದೆ ಹೊಸ ಇಕಾನಮಿ ಕ್ಲಾಸ್   title=
ರೈಲ್ವೆ ನೀಡುತ್ತಿದೆ ಹೊಸ ಇಕಾನಮಿ ಕ್ಲಾಸ್ (photo zee news)

ನವದೆಹಲಿ: AC-Economy Coach: ಈಗ ರೈಲು ಪ್ರಯಾಣಿಕರು ಎಸಿ ಕ್ಲಾಸ್ ನಲ್ಲಿ ಪ್ರಯಾಣಿಸಲು ಹೆಚ್ಚು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಭಾರತೀಯ ರೈಲ್ವೆ (Indian Railway) ಶೀಘ್ರದಲ್ಲೇ ಹೊಸ AC-Economy coach ಪರಿಚಯಿಸಲಿದೆ.

ಅಗ್ಗದ ಎಸಿ ಕೋಚ್ : 
ಇಲ್ಲಿಯವರೆಗೆ, ಭಾರತೀಯ ರೈಲ್ವೆ, ರೈಲ್ವೆಯ (Indian Railway) ವಿವಿಧ ವಲಯಗಳಲ್ಲಿ ಬಳಸಲು ಎಸಿ 'ಎಕಾನಮಿ' ವರ್ಗಕ್ಕಾಗಿ ವಿನ್ಯಾಸಗೊಳಿಸಲಾದ 27 ಬೋಗಿಗಳನ್ನು ವಿತರಿಸಿದೆ. ಈ ಹೊಸ ಎಸಿ-ಎಕಾನಮಿ (AC-Economy coach) ಬೋಗಿಗಳಲ್ಲಿ ಪಶ್ಚಿಮ ರೈಲ್ವೆ ವಲಯದ  ಡುರೊಂಟೊ ಎಕ್ಸ್‌ಪ್ರೆಸ್ ರೈಲುಗಳು ಮತ್ತು ದೇಶದ ವಿವಿಧ ಭಾಗಗಳಿಂದ ಹೊರಡುವ ರೈಲುಗಳು ಸೇರಿವೆ.  ಈ ಬೋಗಿಗಳು ಎಸಿ -3 ಶ್ರೇಣಿ ಬೋಗಿಗಳಂತೆ 72 ಬರ್ತ್‌ಗಳ ಬದಲಿಗೆ 83 ಬರ್ತ್‌ಗಳನ್ನು ಹೊಂದಿರುತ್ತದೆ.

ಇದನ್ನೂ ಓದಿ : New Wage Code: ಖಾಸಗಿ ಕಂಪನಿ ಉದ್ಯೋಗಿಗಳಿಗೆ ಇಲ್ಲಿದೆ ಸಿಹಿಸುದ್ದಿ!

ದರಗಳ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ :
ಪ್ರಸ್ತುತ ರೈಲ್ವೆ ಮಂಡಳಿಯು ಈ ವರ್ಗದ ಶುಲ್ಕವನ್ನು ನಿಗದಿಪಡಿಸುವ ಪ್ರಕ್ರಿಯೆಯಲ್ಲಿದೆ. ಸ್ಲೀಪರ್' ಕ್ಲಾಸ್ ಟಿಕೆಟ್‌ಗಳನ್ನು (Sleeper class ticket)  ಖರೀದಿಸುವ ಪ್ರಯಾಣಿಕ ಕೈಗೆ ಕೈಗೆಟಕುವ ರೀತಿಯಲ್ಲಿ ಶುಲ್ಕವನ್ನು ನಿಗದಿಪಡಿಸಬೇಕು ಎನ್ನುವುದು ಭಾರತೀಯ ರೈಲ್ವೆಯ ಅಭಿಪ್ರಾಯ. ಎಸಿ-ಎಕಾನಮಿ ವರ್ಗದ ಶುಲ್ಕವು ಎಸಿ -3 ಶ್ರೇಣಿ ವರ್ಗದ ಶುಲ್ಕದ ಅಸುಪಾಸಿನಲ್ಲಿರಲಿದೆ. 

ಶೀಘ್ರದಲ್ಲೇ ಶುಲ್ಕ ನಿಗಡಿ ಪಡಿಸಲಿರುವ ಸರ್ಕಾರ : 
ಎಸಿ-ಎಕಾನಮಿ ವರ್ಗದ ಶುಲ್ಕದ ಬಗ್ಗೆ ರೈಲ್ವೆ ಸಚಿವಾಲಯ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬಹುದು. ಇದು ಬಹುತೇಕ ಭಾರತೀಯ ರೈಲ್ವೆ ಎಸಿ -3 ಶ್ರೇಣಿ ವರ್ಗಕ್ಕೆ ಸಮನಾಗಿರುತ್ತದೆ. ಹೊಸ ಎಸಿ ಎಕಾನಮಿ ವರ್ಗವನ್ನು ರಿಸರ್ವೇಶನ್ ಪೇಪರ್ ನಲ್ಲಿ  '3 ಇ' ವರ್ಗ ಎಂದು ಹೆಸರಿಸಲು ಆಂತರಿಕವಾಗಿ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ರೈಲುಗಳಲ್ಲಿ ಬೋಗಿಗಳನ್ನು ಹಾಕುವ ಕಾರ್ಯ ಆರಂಭ : 
ಯೋಜನೆಯಡಿ, ಕೆಲವು ಬೋಗಿಗಳನ್ನು ಸಿದ್ಧಪಡಿಸಲಾಗಿದೆ ಮತ್ತು ರೈಲಿನಲ್ಲಿ (Railway) ಅಳವಡಿಸುವ ಕಾರ್ಯ ಪ್ರಾರಂಭಿಸಲಾಗಿದೆ. ಈಗ 2021-22ರ ಆರ್ಥಿಕ ವರ್ಷಕ್ಕೆ 806 ಬೋಗಿಗಳನ್ನು ಸಿದ್ಧಪಡಿಸುವ ಗುರಿ ನಿಗದಿಪಡಿಸಲಾಗಿದೆ. ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ 344, ರೈಲ್ ಕೋಚ್ ಫ್ಯಾಕ್ಟರಿಯಲ್ಲಿ 177 ಮತ್ತು ಮಾಡರ್ನ್ ಕೋಚ್ ಫ್ಯಾಕ್ಟರಿಯಲ್ಲಿ 285 ಬೋಗಿಗಳನ್ನು ತಯಾರಿಸಲಾಗುತ್ತಿದೆ. ಮಾರ್ಚ್ 2022 ರೊಳಗೆ ಎಲ್ಲಾ ಬೋಗಿಗಳನ್ನು ರೈಲುಗಳಲ್ಲಿ ಅಳವಡಿಸಲಾಗುವುದು. 

ಇದನ್ನೂ ಓದಿ : ಈ ಬ್ಯಾಂಕ್ ನಲ್ಲಿ ಖಾತೆ ತೆರೆದರೆ ಉಚಿತವಾಗಿ ಸಿಗಲಿದೆ ಒಂದು ಕೋಟಿಯ ವಿಮೆ

ಸಿಗಲಿದೆ ಈ ಸೌಲಭ್ಯಗಳು :
ಎಸಿ-ಎಕಾನಮಿ ಕ್ಲಾಸ್ನಲ್ಲಿ ರೀಡಿಂಗ್ ಗಾಗಿ ಪರ್ಸನಲ್ಫ್ ಲೈಟ್, ಯುಎಸ್‌ಬಿ ಪಾಯಿಂಟ್‌ (USB points), ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು (Mobile charging points) ಸಹ ಲಭ್ಯವಿರುತ್ತವೆ. ಮೇಲಿನ ಬೆರ್ತ್‌ಗೆ ಏರಲು ಉತ್ತಮ ಏಣಿಯನ್ನು ಒದಗಿಸಲಾಗುವುದು. ಅಲ್ಲದೆ, ಕೋಚ್‌ ನಲ್ಲಿ ವಿಶೇಷ ಉಪಹಾರ ಟೇಬಲ್ ಇರುತ್ತದೆ. ಶೌಚಾಲಯದಲ್ಲಿ ಫುಟ್ ಆಪರೇಟಿಂಗ್ ಟ್ಯಾಬ್‌ಗಳನ್ನು ಅಳವಡಿಸಲಾಗಿದೆ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News