Indian Railways: ಸ್ಪೆಷಲ್ ಟ್ರೈನ್ ಸ್ಥಗಿತಗೊಳಿಸಲಿರುವ ರೈಲ್ವೆ , ಕಡಿತಗೊಳ್ಳಲಿದೆ ಟಿಕೆಟ್ ದರ

ಕೋವಿಡ್ ಮಾರ್ಗ ಸೂಚಿಯಂತೆ, ರೈಲ್ವೆ ವಿಶೇಷ ವಿಭಾಗಗಳಲ್ಲಿ ರೈಲುಗಳನ್ನು ಓಡಿಸಲು ಪ್ರಾರಂಭಿಸಿದೆ. ರೈಲುಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿತ್ತು.

Written by - Ranjitha R K | Last Updated : Nov 12, 2021, 02:12 PM IST
  • ಭಾರತೀಯ ರೈಲ್ವೆ ಮಾಡಿದೆ ಬಹು ದೊಡ್ಡ ಪ್ರಕಟಣೆ
  • ಸ್ಪೆಷಲ್ ಟ್ರೈನ್ ಸೇವೆ ಸ್ಥಗಿತಗೊಳ್ಳಲಿದೆ
  • ಹಳಿಗೆ ಮರಳಿವೆ 95 ಪ್ರತಿಶತ ರೈಲುಗಳು
Indian Railways: ಸ್ಪೆಷಲ್ ಟ್ರೈನ್ ಸ್ಥಗಿತಗೊಳಿಸಲಿರುವ ರೈಲ್ವೆ , ಕಡಿತಗೊಳ್ಳಲಿದೆ  ಟಿಕೆಟ್ ದರ  title=
ಸ್ಪೆಷಲ್ ಟ್ರೈನ್ ಸೇವೆ ಸ್ಥಗಿತಗೊಳ್ಳಲಿದೆ (file photo)

ನವದೆಹಲಿ : ಕರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ (Indian Railways) ಕೆಲವು ವಿಶೇಷ ರೈಲುಗಳನ್ನು ಆರಂಭಿಸಿತ್ತು. ಬಹುತೇಕ ಎಕ್ಸ್‌ಪ್ರೆಸ್ ಮತ್ತು ಮೇಲ್ ರೈಲುಗಳು ಈಗ ಹಳಿಗೆ ಮರಳಿವೆ. ಈ ಮಧ್ಯೆ, ಇದೀಗ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ರೈಲ್ವೆ ಇಲಾಖೆ ಸ್ಥಗಿತಗೊಳಿಸಲಿದೆ ಎಂಬ ಬಗ್ಗೆ ವರದಿಯಾಗಿದೆ.  ಶೀಘ್ರದಲ್ಲೇ ಈ ವಿಶೇಷ ರೈಲು ಸೇವೆಯನ್ನು ನಿಲ್ಲಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಸೂಚಿಸಿದ್ದಾರೆ. ವಿಶೇಷ ರೈಲುಗಳಲ್ಲಿ, ಪ್ರಯಾಣಿಕರು ಸಾಮಾನ್ಯ ರೈಲುಗಳಿಗಿಂತ ಶೇಕಡಾ 30 ರಷ್ಟು ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತದೆ. 

ಹಳಿಗೆ ಮರಳಿವೆ 95 ಪ್ರತಿಶತ ರೈಲುಗಳು :
ಕೋವಿಡ್ ಮಾರ್ಗ ಸೂಚಿಯಂತೆ (COVID guidelines), ರೈಲ್ವೆ ವಿಶೇಷ ವಿಭಾಗಗಳಲ್ಲಿ ರೈಲುಗಳನ್ನು ಓಡಿಸಲು ಪ್ರಾರಂಭಿಸಿದೆ. ರೈಲುಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿತ್ತು ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದಾರೆ.  ರೈಲ್ವೆ ಸಚಿವರ ಪ್ರಕಾರ, ಪ್ರಸ್ತುತ ಶೇಕಡ 95 ರಷ್ಟು ಮೇಲ್ ಎಕ್ಸ್‌ಪ್ರೆಸ್ ರೈಲುಗಳು (Express trains) ಟ್ರ್ಯಾಕ್‌ಗೆ ಮರಳಿವೆ. ಇವುಗಳಲ್ಲಿ ಸುಮಾರು 25 ಪ್ರತಿಶತ ರೈಲುಗಳು ವಿಶೇಷ ವರ್ಗದಲ್ಲಿ ಓಡುತ್ತಿವೆ.  

ಇದನ್ನೂ ಓದಿ : RBI Schemes: RBIನ ಎರಡು ಯೋಜನೆಗಳನ್ನು ಬಿಡುಗಡೆಗೊಳಿಸಿದ PM ಮೋದಿ, ದೇಶದಲ್ಲಿ ಹೂಡಿಕೆಯ ವ್ಯಾಪ್ತಿ ವಿಸ್ತಾರ ಎಂದ ಪ್ರಧಾನಿ

ವಿಶೇಷ ರೈಲುಗಳ ದರವು (Train fare) ಸಾಮಾನ್ಯ ರೈಲಿಗಿಂತ ಹೆಚ್ಚಾಗಿರುತ್ತವೆ. ರೈಲ್ವೆಯು ಪ್ರಯಾಣಿಕ ರೈಲುಗಳಲ್ಲಿ ಸುಮಾರು 70 ಪ್ರತಿಶತ ರೈಲುಗಳಿಗೆ ಮೇಲ್ ಎಕ್ಸ್‌ಪ್ರೆಸ್ ಸ್ಥಾನಮಾನವನ್ನು ನೀಡಿದೆ. ಇವುಗಳಲ್ಲಿ ಪ್ರಯಾಣಿಸಬೇಕಾದರೆ ಪ್ರಯಾಣಿಕರು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ರೈಲ್ವೆ ಪ್ರಯಾಣಿಕರ ಮೇಲೆ ಯಾವ ಪರಿಣಾಮ ಬೀರಲಿದೆ?
ಕರೋನವೈರಸ್ (Coronavirus) ಸಾಂಕ್ರಾಮಿಕದ ಮೊದಲು, ಭಾರತೀಯ ರೈಲ್ವೇ ಸುಮಾರು 1,700 ಮೇಲ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುತ್ತಿತ್ತು. ಈ ಪೈಕಿ ಬಹುತೇಕ ರೈಲುಗಳು ಪುನರಾರಂಭಗೊಂಡಿವೆ. ಕರೋನಾ ಬಿಕ್ಕಟ್ಟಿನ ಮೊದಲು ಸುಮಾರು 3500 ಪ್ಯಾಸೆಂಜರ್ ರೈಲುಗಳು ಓಡಾಡುತ್ತಿದ್ದವು. ಇದರಲ್ಲಿ ಕೇವಲ 1000 ಪ್ಯಾಸೆಂಜರ್ ರೈಲುಗಳನ್ನು ಓಡಿಸಲಾಗುತ್ತಿದೆ. 

ಇದನ್ನೂ ಓದಿ : Corbett EV: ಒಂದೇ ಒಂದು ಚಾರ್ಜ್‌ನಲ್ಲಿ 200 ಕಿಮೀ ಚಲಿಸುತ್ತಂತೆ ಈ ಎಲೆಕ್ಟ್ರಿಕ್ ಸ್ಕೂಟರ್, ಇಲ್ಲಿದೆ ಇದರ ಬೆಲೆ, ವೈಶಿಷ್ಟ್ಯ

ಇದೀಗ ಕೋವಿಡ್ (COVID_19) ನಂತರ ರೈಲ್ವೆಯಲ್ಲಿ ಕೈಗೊಂಡಿರುವ ಕ್ರಮಗಳನ್ನು ಹಿಂಪಡೆಯಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಂದರೆ,  ಸಾಮಾನ್ಯ ರೈಲುಗಳಲ್ಲಿ ಪ್ರಯಾಣಿಸಲು ಕಡಿಮೆ ದರವನ್ನು ಪಾವತಿಸಬೇಕಾಗುತ್ತದೆ. ಆದರೆ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ಇನ್ನೂ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News