ಭಾರತೀಯ ಸೇನೆಯಲ್ಲಿ ಬಂಪರ್ ನೇಮಕಾತಿ, ತಿಂಗಳಿಗೆ 63,200 ವರೆಗೆ ವೇತನ

Indian Army Recruitment 2022: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 18000 ರಿಂದ 63200 ರೂ. ವೇತನ ನೀಡಲಾಗುವುದು. ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ದಿನಾಂಕ ಇತ್ಯಾದಿ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. 

Written by - Ranjitha R K | Last Updated : Sep 2, 2022, 02:49 PM IST
  • ಭರ್ತಿಯಾಗಲಿವೆ ಒಟ್ಟು 3068 ಹುದ್ದೆಗಳು
  • ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 18000 ರಿಂದ 63200 ರೂ ವೇತನ
  • ಯಾರಿಗೆ ಎಷ್ಟು ಹುದ್ದೆ ನೀಡಲಾಗುವುದು
ಭಾರತೀಯ ಸೇನೆಯಲ್ಲಿ ಬಂಪರ್ ನೇಮಕಾತಿ, ತಿಂಗಳಿಗೆ  63,200 ವರೆಗೆ ವೇತನ title=
Indian Army Recruitment 2022 (file photo)

Indian Army Recruitment 2022 : ಸೆಂಟ್ರಲ್  ರಿಕ್ರೂಟ್‌ಮೆಂಟ್ ಸೆಲ್, ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ಸೆಂಟರ್‌ನಲ್ಲಿ  ವಿವಿಧ ಹುದ್ದೆಗಳಲ್ಲಿ ಬಂಪರ್ ಉದ್ಯೋಗ ಅವಕಾಶಗಳಿವೆ. ಟ್ರೇಡ್ಸ್‌ಮನ್ ಮೇಟ್, ಫೈರ್‌ಮ್ಯಾನ್ ಮತ್ತು JOA  ಹುದ್ದೆಗಳು ಖಾಲಿಯಾಗಿವೆ. ಇಲ್ಲಿ ಒಟ್ಟು 3068 ಹುದ್ದೆಗಳು ಭರ್ತಿಯಾಗಲಿವೆ. ಈ  ಹುದ್ದೆಗಳ ಭರ್ತಿಗೆ ಜಾಹೀರಾತು ನೀಡಲಾಗುವುದು. ಟ್ರೇಡ್ಸ್‌ಮನ್ ಮೇಟ್‌ -  2313 ಹುದ್ದೆಗಳು, ಫೈರ್‌ಮ್ಯಾನ್  - 656 ಮತ್ತು ಜೂನಿಯರ್ ಆಫೀಸ್ ಅಸಿಸ್ಟೆಂಟ್  99 ಹುದ್ದೆಗಳನ್ನು ಭಾರ್ತಿ ಮಾಡಲಾಗುವುದು. 

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 18000 ರಿಂದ 63200 ರೂ. ವೇತನ ನೀಡಲಾಗುವುದು. ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ದಿನಾಂಕ ಇತ್ಯಾದಿ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. "ಇತ್ತೀಚಿನ ಸುದ್ದಿ" ವಿಭಾಗದ ಅಡಿಯಲ್ಲಿ  AOC ಯ ಅಧಿಕೃತ ವೆಬ್‌ಸೈಟ್ ಅಂದರೆ www.aocrecruitment.gov.in ನಲ್ಲಿ ಹೊಸ ಅಪ್ಡೇಟ್ ಗಳನ್ನು  ವೀಕ್ಷಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. 

ಇದನ್ನೂ ಓದಿ : Central Vista : ಸೆಂಟ್ರಲ್ ವಿಸ್ತಾ ಯೋಜನೆಯ ಬಗ್ಗೆ ಬಿಗ್ ನ್ಯೂಸ್ ನೀಡಿದ PMO ಕಚೇರಿ

ಯಾರಿಗೆ ಎಷ್ಟು ಹುದ್ದೆ ? :
ಇದುವರೆಗಿನ ಮಾಹಿತಿಯ ಪ್ರಕಾರ, ಈ ನೇಮಕಾತಿ ಪ್ರಕ್ರಿಯೆಯಿಂದ ವಿವಿಧ ವರ್ಗಗಳಲ್ಲಿ ಟ್ರೇಡ್ಸ್‌ಮೆನ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರಲ್ಲಿ ಸಾಮಾನ್ಯ ವರ್ಗದ 938 ಹುದ್ದೆಗಳು, ಇಡಬ್ಲ್ಯೂಎಸ್ ವರ್ಗದ 231 ಹುದ್ದೆಗಳು, ಒಬಿಸಿ ವರ್ಗಕ್ಕೆ 624, ಎಸ್‌ಸಿ ವರ್ಗಕ್ಕೆ 347 ಹುದ್ದೆಗಳು ಎಸ್ಟಿ ವರ್ಗಕ್ಕೆ 173 ಹುದ್ದೆಗಳಿವೆ. ಈ ಮೂಲಕ ಒಟ್ಟು 2313 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಅಗ್ನಿಶಾಮಕ ಸಿಬ್ಬಂದಿ ಹುದ್ದೆಗಳ ಕುರಿತು ಹೇಳುವುದಾದರೆ, ಸಾಮಾನ್ಯ ವರ್ಗಕ್ಕೆ 236, ಇಡಬ್ಲ್ಯೂಎಸ್ ವರ್ಗಕ್ಕೆ 66, ಒಬಿಸಿ ವರ್ಗಕ್ಕೆ 177, ಎಸ್‌ಸಿ ವರ್ಗಕ್ಕೆ 98, ಎಸ್‌ಟಿ ವರ್ಗಕ್ಕೆ 49 ಹುದ್ದೆಗಳಿವೆ. ಈ ಮೂಲಕ ಒಟ್ಟು 656 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. 

ಜೂನಿಯರ್ ಆಫೀಸ್ ಅಸಿಸ್ಟೆಂಟ್ ಹುದ್ದೆಗಳ ಕುರಿತು ಮಾತನಾಡುವುದಾದರೆ, ಸಾಮಾನ್ಯ ವರ್ಗಕ್ಕೆ 40, ಇಡಬ್ಲ್ಯೂಎಸ್ ವರ್ಗಕ್ಕೆ 10, ಒಬಿಸಿ ವರ್ಗಕ್ಕೆ 27, ಎಸ್‌ಸಿ ವರ್ಗಕ್ಕೆ 15, ಎಸ್‌ಟಿ ವರ್ಗಕ್ಕೆ 7 ಹುದ್ದೆಗಳಿವೆ. ಈ ಮೂಲಕ ಒಟ್ಟು 99 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. 

ಇದನ್ನೂ ಓದಿ : Maharashtra : ಶಿಂಧೆ ಸರ್ಕಾರದ 2ನೇ ಸಂಪುಟ ವಿಸ್ತರಣೆ : ಕಾಂಗ್ರೆಸ್ ನಾಯಕನಿಗೆ ಚಾನ್ಸ್? 

ವೇತನ ಹೇಗಿರಲಿದೆ : 
ಟ್ರೇಡ್ಸ್‌ಮನ್ ಹುದ್ದೆಗೆ ತಿಂಗಳಿಗೆ 18000 ರೂ.ನಿಂದ 56900 ರೂ., ಫೈರ್‌ಮ್ಯಾನ್ ಹುದ್ದೆಗೆ ತಿಂಗಳಿಗೆ 19900 ರಿಂದ 63200 ರೂ. ಮತ್ತು ಜೂನಿಯರ್ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾದವರಿಗೆ 19900 ರಿಂದ 63200 ರೂ. ವೇತನ ನೀಡಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News