Subsidy on Petrol-Diesel: ಹೆಚ್ಚುತ್ತಿರುವ ಪೆಟ್ರೋಲ್-ಡೀಸೆಲ್ ಮತ್ತು ಇಂಧನದ ಬೆಲೆಯ ನಡುವೆಯೇ ಹೊಸ ಸುದ್ದಿಯೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. ವಾಸ್ತವದಲ್ಲಿ ನೋಡಿದರೆ ತೈಲ ಬೆಲೆಗಳು ನಿರಂತರವಾಗಿ ಗಗನಮುಖಿಯಾಗುತ್ತಿವೆ, ಅದಕ್ಕೆ ಸಂಬಂಧಿಸಿದ ಹಲವಾರು ಸಂದೇಶಗಳು ಸಹ ಇದೀಗ ವೈರಲ್ ಆಗುತ್ತಿವೆ. ಅಂತಹುದೇ ಒಂದು ಪೋಸ್ಟ್ ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ 6000 ರೂ ಸಬ್ಸಿಡಿ ತೆಗೆದುಕೊಳ್ಳಲು ಅವಕಾಶ ನೀಡುತ್ತಿದೆ ಎನ್ನಲಾಗಿದೆ. ನೀವು ಕೂಡ ಇಂತಹುದೊಂದು ಪೋಸ್ಟ್ ನೋಡಿರುವಿರಾ? ಸಂಪೂರ್ಣ ವಿಷಯ ಏನು ಮತ್ತು ನೀವು ರೂ 6000 ಸಬ್ಸಿಡಿಯನ್ನು ಗೆಲ್ಲುವ ಅವಕಾಶವನ್ನು ಹೇಗೆ ಪಡೆಯುತ್ತೀರಿ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ತೈಲದ ಮೇಲೆ ಸಬ್ಸಿಡಿ
ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಿಮಗೆ ರೂ 6000 ಸಬ್ಸಿಡಿ ತೆಗೆದುಕೊಳ್ಳಲು ಅವಕಾಶವನ್ನು ನೀಡುತ್ತಿದೆ ಎಂದು ಹೇಳಲಾದ ಸಂದೇಶವು ಇದೀಗ ಭಾರಿ ವೈರಲ್ ಆಗುತ್ತಿದೆ. ಇದರ ನಂತರ, PIB ಈ ಸಂದೇಶದ ಫ್ಯಾಕ್ಟ್ ಚೆಕ್ ನಡೆಸಿದೆ. ಇಂಡಿಯನ್ ಆಯಿಲ್‌ನ ವೈರಲ್ ಪೋಸ್ಟ್‌ನಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಕೇಳಲಾಗುತ್ತಿದೆ ಎಂದು ಪಿಐಬಿ ಹೇಳಿದೆ, ಈ ಸಂದೇಶದ ಹಿಂದಿನ ಸತ್ಯವನ್ನು ಪಿಐಬಿ ಪರಿಶೀಲಿಸಿದೆ, ಆದರೆ ವಿಪರ್ಯಾಸ ಎಂದರೆ ಸಂದೇಶದ ಹಿಂದಿನ ಸತ್ಯ ಬೇರೆಯೇ ಆಗಿದೆ. ಈ ಬಗ್ಗೆ ಪಿಐಬಿ ತನ್ನ ಅಧಿಕೃತ ಟ್ವಿಟರ್ ನಲ್ಲಿ ಸಂಪೂರ್ಣ ಮಾಹಿತಿ ನೀಡಿದೆ.
ಪಿಐಬಿ ಈ ಮಾಹಿತಿಯನ್ನು ಟ್ವೀಟ್ ಮಾಡಿದೆ
ಈ ಬಗ್ಗೆ ತನ್ನ ಅಧಿಕೃತ ಟ್ವೀಟ್‌ನಲ್ಲಿ ವಿವರವಾದ ಮಾಹಿತಿಯನ್ನು ನೀಡಿರುವ ಪಿಐಬಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೆಸರಿನಲ್ಲಿ ಲಕ್ಕಿ ಡ್ರಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವೈಯಕ್ತಿಕ ವಿವರಗಳನ್ನು ಕೇಳಿದ ನಂತರ ₹ 6,000 ಇಂಧನ ಸಬ್ಸಿಡಿ ಉಡುಗೊರೆಯನ್ನು ಗೆಲ್ಲುವ ಅವಕಾಶವನ್ನು ನೀಡುತ್ತಿದೆ ಎಂದು ಹೇಳಲಾಗಿದೆ. ಈ ಲಕ್ಕಿ ಡ್ರಾ ಸಂಪೂರ್ಣ ನಕಲಿ ಎಂದು ಎಂದು ಪಿಐಬಿ ತಿಳಿಸಿದೆ. ಇದೊಂದು ರೀತಿಯ ಹಗರಣ, ಇದಕ್ಕೂ ಇಂಡಿಯನ್ ಆಯಿಲ್ ಗೂ ಯಾವುದೇ ಸಂಬಂಧವಿಲ್ಲ ಎಂದು ಅದು ಹೇಳಿದೆ.
ಇದನ್ನೂ ಓದಿ-Jobs Without Degree: ಈ ನೌಕರಿಗಳನ್ನು ಮಾಡಲು ನಿಮಗೆ ಯಾವುದೇ ಡಿಗ್ರೀ ಅವಶ್ಯಕತೆ ಇಲ್ಲ, ಗಳಿಕೆಯೂ ಜಬರ್ದಸ್ತ್
ಈ ನಕಲಿ ಸಂದೇಶಕ್ಕೆ ಮರುಳಾಗಬೇಡಿ
ಈ ತನಿಖೆಯ ನಂತರ, ಇಂತಹ ನಕಲಿ ಸಂದೇಶಗಳಿಗೆ ಬಲಿಯಾಗಬೇಡಿ ಎಂದು ಪಿಐಬಿ ಎಚ್ಚರಿಸಿದೆ. ಪಿಐಬಿ ಪ್ರಕಾರ, ಇಂಡಿಯನ್ ಆಯಿಲ್, ಬ್ಯಾಂಕ್ ಅಥವಾ ಯಾವುದೇ ಸರ್ಕಾರಿ ಯೋಜನೆಗಾಗಿ ನಿಮ್ಮ ವೈಯಕ್ತಿಕ ವಿವರಗಳನ್ನು ಈ ರೀತಿ ಪಡೆದುಕೊಳ್ಳುವುದಿಲ್ಲ. ಇದರೊಂದಿಗೆ, ಯಾವುದೇ ಆಫರ್ ಅಥವಾ ಸ್ಕೀಮ್ ಅನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಿದ ನಂತರವೇ ದೃಢೀಕರಿಸಲಾಗಿದೆ ಎಂದು ಪರಿಗಣಿಸಬೇಕು ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.
ಇದನ್ನೂ ಓದಿ-Free Ration ಲಾಭಾರ್ಥಿಗಳಿಗೊಂದು ಸಂತಸದ ಸುದ್ದಿ, ಸರ್ಕಾರದ ಹೊಸ ಆದೇಶದಿಂದ ಲಾಭವೋ ಲಾಭ
PIB ನೀಡಿದ ಎಚ್ಚರಿಕೆ ಏನು?
ಈ ಕುರಿತು ನಾಗರಿಕರಿಗೆ ಎಚ್ಚರಿಕೆ ನೀಡಿರುವ ಪಿಐಬಿ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಇಂತಹ ಸಂದೇಶಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರದಿಂದಿರಬೇಕು ಎಂದು ಹೇಳಿದೆ. ಜನರು ಇಂತಹ ಸಂದೇಶಗಳನ್ನು ಫಾರ್ವರ್ಡ್ ಮಾಡುವುದನ್ನು ಸಹ ತಪ್ಪಿಸಬೇಕು ಎಂದು ಪಿಐಬಿ ಹೇಳಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.