Today Petrol-Diesel Price : ವಾಹನ ಸವಾರರ ಗಮನಕ್ಕೆ : ಡೀಸೆಲ್ ಬೆಲೆಯಲ್ಲಿ ಏರಿಕೆ, ಪೆಟ್ರೋಲ್ ದರ ಸ್ಥಿರ!

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 104.70 ರೂ. ಇದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 94.27 ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್ ಅನ್ನು ಪ್ರತಿ ಲೀಟರ್‌ಗೆ 107.26 ರೂ. ಮತ್ತು ಡೀಸೆಲ್ ಬೆಲೆ 96.41 ರೂ.ಗೆ 22 ಪೈಸೆ ಹೆಚ್ಚಳವಾಗಿದೆ.

Written by - Channabasava A Kashinakunti | Last Updated : Sep 24, 2021, 08:37 AM IST
  • ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ
  • ಡೀಸೆಲ್ ಬೆಲೆ ದೇಶಾದ್ಯಂತ ಶುಕ್ರವಾರ ಹೆಚ್ಚಿಸಲಾಗಿದೆ
  • ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 104.70 ರೂ.
Today Petrol-Diesel Price : ವಾಹನ ಸವಾರರ ಗಮನಕ್ಕೆ : ಡೀಸೆಲ್ ಬೆಲೆಯಲ್ಲಿ ಏರಿಕೆ, ಪೆಟ್ರೋಲ್ ದರ ಸ್ಥಿರ! title=

ನವದೆಹಲಿ : ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಆದರೆ ಡೀಸೆಲ್ ಬೆಲೆ ದೇಶಾದ್ಯಂತ ಶುಕ್ರವಾರ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 101.19 ರೂ. ಆಗಿದ್ದು, ಡೀಸೆಲ್ ದರ ರೂ 88.82 ರೂ . ನಷ್ಟಿದ್ದು ಅದು 20 ಪೈಸೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ(Petrol price) ಪ್ರತಿ ಲೀಟರ್‌ಗೆ 104.70 ರೂ. ಇದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 94.27 ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್ ಅನ್ನು ಪ್ರತಿ ಲೀಟರ್‌ಗೆ 107.26 ರೂ. ಮತ್ತು ಡೀಸೆಲ್ ಬೆಲೆ 96.41 ರೂ.ಗೆ 22 ಪೈಸೆ ಹೆಚ್ಚಳವಾಗಿದೆ.

ಇದನ್ನೂ ಓದಿ : ಈ ಬ್ಯಾಂಕುಗಳ ಚೆಕ್ ಬುಕ್ ಗಳು ಅಕ್ಟೋಬರ್ ನಿಂದ ಅಮಾನ್ಯ- Check details

ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 98.96 ರೂ. ಶುಕ್ರವಾರ, ಪ್ರತಿ ಲೀಟರ್ ಡೀಸೆಲ್ ಬೆಲೆ(Diesel price)  93.46 ರೂ. ನಷ್ಟಿದ್ದು ಇದು 08 ಪೈಸೆ ಹೆಚ್ಚಳವಾಗಿದೆ.

ಕೋಲ್ಕತ್ತಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 101.62 ರೂ. ಡೀಸೆಲ್ ಬೆಲೆ 91.92 ರೂ., 21 ಪೈಸೆ ಹೆಚ್ಚಳ.ಭೋಪಾಲ್ ನಲ್ಲಿ 109.63 ರೂ.ಗೆ ಪೆಟ್ರೋಲ್ ಖರೀದಿಸಬಹುದಾಗಿದ್ದು, ಡೀಸೆಲ್ ಬೆಲೆ 97.65 ರೂ., 22 ಪೈಸೆ ಹೆಚ್ಚಳವಾಗಿದೆ.

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ(Indian Oil and Hindustan Petroleum) ಸೇರಿದಂತೆ ತೈಲ ಮಾರುಕಟ್ಟೆ ಕಂಪನಿಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಿಸಲಾಗಿದೆ. ಹೊಸ ಬೆಲೆಯನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಜಾರಿಗೆ ತರಲಾಗುತ್ತದೆ. ರಾಜ್ಯಗಳು ಮತ್ತು ನಗರಗಳು ವಿಭಿನ್ನ ಇಂಧನ ಬೆಲೆಗಳನ್ನು ಹೊಂದಿವೆ ಏಕೆಂದರೆ ಮೌಲ್ಯವರ್ಧಿತ ತೆರಿಗೆಗಳು, ಸ್ಥಳೀಯ ಮತ್ತು ಸರಕು ಶುಲ್ಕಗಳು ಸ್ಥಳವನ್ನು ಅವಲಂಬಿಸಿ ಬದಲಾಗುತ್ತವೆ.

ಇದನ್ನೂ ಓದಿ : Unbelievable! ಈ ಅಪರೂಪದ ನಾಣ್ಯ ನಿಮ್ಮ ಬಳಿ ಇದ್ದರೆ ನೀವು ಗಳಿಸಬಹುದು ₹ 50 ಲಕ್ಷ! ಹೇಗೆ? ಇಲ್ಲಿದೆ

ದೇಶದ ಕೆಲವು ನಗರಗಳಲ್ಲಿ ಡೀಸೆಲ್-ಪೆಟ್ರೋಲ್ ಬೆಲೆಗಳು ಹೀಗಿವೆ:

1. ಮುಂಬೈ

ಪೆಟ್ರೋಲ್ - ಪ್ರತಿ ಲೀಟರ್‌ಗೆ 107.26 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 96.41 ರೂ.

2. ದೆಹಲಿ

ಪೆಟ್ರೋಲ್ - ಪ್ರತಿ ಲೀಟರ್‌ಗೆ 101.19 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 88.82 ರೂ.

3. ಚೆನ್ನೈ

ಪೆಟ್ರೋಲ್ - ಪ್ರತಿ ಲೀಟರ್‌ಗೆ 98.96 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 93.46 ರೂ.

4. ಕೋಲ್ಕತಾ

ಪೆಟ್ರೋಲ್ - ಪ್ರತಿ ಲೀಟರ್‌ಗೆ 101.62 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 91.92 ರೂ.

5. ಭೋಪಾಲ್

ಪೆಟ್ರೋಲ್ - ಪ್ರತಿ ಲೀಟರ್‌ಗೆ 109.63 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 97.65 ರೂ.

6. ಹೈದರಾಬಾದ್

ಪೆಟ್ರೋಲ್ - ಪ್ರತಿ ಲೀಟರ್‌ಗೆ 105.26 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 96.92 ರೂ.

7. ಬೆಂಗಳೂರು

ಪೆಟ್ರೋಲ್ - ಪ್ರತಿ ಲೀಟರ್‌ಗೆ 104.70 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 94.27 ರೂ.

8. ಗುವಾಹಟಿ

ಪೆಟ್ರೋಲ್ - ಪ್ರತಿ ಲೀಟರ್‌ಗೆ 97.05 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 88.23 ರೂ.

9. ಲಕ್ನೋ

ಪೆಟ್ರೋಲ್ - ಪ್ರತಿ ಲೀಟರ್‌ಗೆ 98.30 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 89.23 ರೂ.

10. ಗಾಂಧಿನಗರ

ಪೆಟ್ರೋಲ್ - ಪ್ರತಿ ಲೀಟರ್‌ಗೆ 98.26 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 95.93 ರೂ.

11. ತಿರುವನಂತಪುರಂ

ಪೆಟ್ರೋಲ್ - ಪ್ರತಿ ಲೀಟರ್‌ಗೆ 103.42 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 95.61 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News