ನವದೆಹಲಿ : Post Office Saving Schemes : ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ನಮ್ಮ ಹಣದ ಸುರಕ್ಷತೆಯ ಬಗ್ಗೆ ಯೋಚನೆ ಮಾಡಬೇಕಿಲ್ಲ. ಹೂಡಿಕೆ ಮಾಡುವುದಕ್ಕೆ ಅಂಚೆ ಕಚೇರಿ ಯೋಜನೆಗಳು ಅತ್ಯಂತ ಉತ್ತಮ ಆಯ್ಕೆಯಾಗಿರುತ್ತದೆ. ಪೋಸ್ಟ್ ಆಫೀಸ್ ಯೋಜನೆಗಳು (Post Office Schemes) ನಿಮ್ಮ ಹಣವನ್ನು ಸುರಕ್ಷಿತವಾಗಿರಿಸುತ್ತದೆ. ಈ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಶೀಘ್ರದಲ್ಲೇ ನಿಮ್ಮ ಹಣವು ದ್ವಿಗುಣಗೊಳ್ಳುತ್ತದೆ.
1. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ :
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (Post office time deposit) 1 ವರ್ಷದಿಂದ 3 ವರ್ಷಗಳವರೆಗೆ 5.5% ಬಡ್ಡಿಯನ್ನು ನೀಡುತ್ತದೆ. ಇದರಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣ ಸುಮಾರು 13 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ಅದೇ ರೀತಿ, 5 ವರ್ಷಗಳ ಟೈಮ್ ಡೆಪಾಸಿಟ್ ಮೇಲೆ 6.7% ಬಡ್ಡಿಯನ್ನು ಪಡೆಯಬಹುದು. ಈ ಬಡ್ಡಿದರದೊಂದಿಗೆ (Interest rate) ಹಣವನ್ನು ಹೂಡಿಕೆ ಮಾಡಿದರೆ, ಸುಮಾರು 10.75 ವರ್ಷಗಳಲ್ಲಿ ನಿಮ್ಮ ಹಣವು ದ್ವಿಗುಣಗೊಳ್ಳುತ್ತದೆ.
ಇದನ್ನೂ ಓದಿ : SBI Easy Ride Scheme: ದ್ವಿಚಕ್ರಕ್ಕಾಗಿ ಲೋನ್ ಪಡೆಯುವುದು ಇನ್ನು ಸುಲಭ, ಮನೆಯಲ್ಲಿ ಕುಳಿತೇ ಪಡೆಯಿರಿ 3 ಲಕ್ಷಗಳವರೆಗೆ ಲೋನ್
2. ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ ಖಾತೆ :
ನಿಮ್ಮ ಹಣವನ್ನು ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ (Post office saving scheme) ಇರಿಸಿದರೆ, ಹಣ ದ್ವಿಗುಣಗೊಳ್ಳಲು ಬಹಳ ಸಮಯ ಕಾಯಬೇಕಾಗಬಹುದು. ಏಕೆಂದರೆ ಇದು ವಾರ್ಷಿಕವಾಗಿ ಶೇಕಡಾ 4.0 ರಷ್ಟು ಬಡ್ಡಿಯನ್ನು ನೀಡುತ್ತದೆ, ಅಂದರೆ, ನಿಮ್ಮ ಹಣವು 18 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.
3. ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ :
ಪ್ರಸ್ತುತ, ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ (RD) ಮೇಲೆ 5.8% ಬಡ್ಡಿಯನ್ನು ನೀಡಲಾಗುತ್ತಿದೆ. ಆದ್ದರಿಂದ ಈ ಬಡ್ಡಿ ದರದಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಅದು ಸುಮಾರು 12.41 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.
4. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ :
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ (MIS) ಪ್ರಸ್ತುತ 6.6% ಬಡ್ಡಿಯನ್ನು ಪಡೆಯಬಹುದು. ಈ ಬಡ್ಡಿ ದರದಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಅದು ಸುಮಾರು 10.91 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.
ಇದನ್ನೂ ಓದಿ : Hero Maestro: ಕೇವಲ 29 ಸಾವಿರಕ್ಕೆ ಖರೀದಿಸಿ ಈ ಉತ್ತಮ ಹೀರೋ ಸ್ಕೂಟರ್, ಸಿಗಲಿದೆ ಅದ್ಭುತ ಕೊಡುಗೆ
5. ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ :
ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (SCSS) ಗೆ ಪ್ರಸ್ತುತ 7.4% ಬಡ್ಡಿಯನ್ನು ನೀಡಲಾಗುತ್ತಿದೆ. ಸುಮಾರು 9.73 ವರ್ಷಗಳಲ್ಲಿ ಈ ಯೋಜನೆಯಲ್ಲಿ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ.
6. ಪೋಸ್ಟ್ ಆಫೀಸ್ ಪಿಪಿಎಫ್ :
ಪೋಸ್ಟ್ ಆಫೀಸ್ನ 15 ವರ್ಷಗಳ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (PPF) ಪ್ರಸ್ತುತ 7.1% ಬಡ್ಡಿಯನ್ನು ಪಡೆಯಬಹುದು. ಅಂದರೆ, ಈ ದರದಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಸುಮಾರು 10.14 ವರ್ಷಗಳನ್ನು ತೆಗೆದುಕೊಳ್ಳುತ್ತದೆ.
7. ಅಂಚೆ ಕಛೇರಿ ಸುಕನ್ಯಾ ಸಮೃದ್ಧಿ ಖಾತೆ :
ಅಂಚೆ ಕಛೇರಿಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯು ಪ್ರಸ್ತುತ ಗರಿಷ್ಠ 7.6% ಬಡ್ಡಿದರವನ್ನು ಒದಗಿಸುತ್ತದೆ. ಹೆಣ್ಣು ಮಕ್ಕಳಿಗಾಗಿ ನಡೆಸುತ್ತಿರುವ ಈ ಯೋಜನೆಯಲ್ಲಿ ಹಣವನ್ನು ದ್ವಿಗುಣಗೊಳಿಸಲು ಸುಮಾರು 9.47 ವರ್ಷಗಳು ಬೇಕಾಗುತ್ತದೆ.
ಇದನ್ನೂ ಓದಿ : Paytm IPO: ಹೂಡಿಕೆಗಾಗಿ ತೆರೆದುಕೊಂಡ ಅತಿ ದೊಡ್ಡ IPO! ನಿಮ್ಮ ಹೂಡಿಕೆ ಹೇಗಿರಲಿದೆ?
8. ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ :
ಪ್ರಸ್ತುತ, ಪೋಸ್ಟ್ ಆಫೀಸ್ನ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಮೇಲೆ 6.8% ಬಡ್ಡಿಯನ್ನು ನೀಡಲಾಗುತ್ತಿದೆ. ಇದು 5 ವರ್ಷಗಳ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆಯನ್ನು ಸಹ ಉಳಿಸಬಹುದು. ಈ ಬಡ್ಡಿ ದರದಲ್ಲಿ ಹಣ ಹೂಡಿಕೆ ಮಾಡಿದರೆ ಸುಮಾರು 10.59 ವರ್ಷಗಳಲ್ಲಿ ದುಪ್ಪಟ್ಟಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.