Ambani Sister: 333 ಕೋಟಿ ಮೌಲ್ಯದ ಕಂಪನಿ ನಡೆಸುತ್ತಿರುವ ಮುಕೇಶ್ ಅಂಬಾನಿ ಸಹೋದರಿ ಇವರೇ ನೋಡಿ..!

Mukesh Ambani's sister Nina Kothari: ಭಾರತ ಮಾತ್ರವಲ್ಲದೇ ಏಷ್ಯಾದಲ್ಲೇ ಶ್ರೀಮಂತ ಉದ್ಯಮಿಯಾಗಿರುವ ಮುಖೇಶ್ ಅಂಬಾನಿ ಅವರ ಕುಟುಂಬದ ಕೆಲವು ಸದಸ್ಯರ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು. 

Written by - Chetana Devarmani | Last Updated : Mar 6, 2024, 01:11 PM IST
  • ಏಷ್ಯಾದಲ್ಲೇ ಶ್ರೀಮಂತ ಉದ್ಯಮಿಯಾಗಿರುವ ಮುಖೇಶ್ ಅಂಬಾನಿ
  • ಮುಖೇಶ್ ಅಂಬಾನಿ ಅವರ ಸಹೋದರಿ ಯಾರು ಗೊತ್ತಾ?
  • ಕಾರ್ಪೊರೇಟ್ ಜಗತ್ತಿನ ಸುಪ್ರಸಿದ್ಧ ವ್ಯಕ್ತಿ ಮುಖೇಶ್ ಅಂಬಾನಿ ಸಹೋದರಿ
Ambani Sister: 333 ಕೋಟಿ ಮೌಲ್ಯದ ಕಂಪನಿ ನಡೆಸುತ್ತಿರುವ ಮುಕೇಶ್ ಅಂಬಾನಿ ಸಹೋದರಿ ಇವರೇ ನೋಡಿ..! title=

Mukesh Ambani's sister Nina Kothari: ಭಾರತ ಮಾತ್ರವಲ್ಲದೇ ಏಷ್ಯಾದಲ್ಲೇ ಶ್ರೀಮಂತ ಉದ್ಯಮಿಯಾಗಿರುವ ಮುಖೇಶ್ ಅಂಬಾನಿ ಅವರ ಕುಟುಂಬದ ಕೆಲವು ಸದಸ್ಯರ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು. ಮುಖೇಶ್‌ ಅಂಬಾನಿ ಅವರ ಪ್ರೀತಿಯ ಸಹೋದರಿ ಬ್ಯುಸಿನೆಸ್‌ ನಡೆಸುತ್ತಾರೆ. ಅದ್ಯಾವುದು? ಅವರು ಯಾರು? ಇಲ್ಲಿದೆ ನೋಡಿ ಮಾಹಿತಿ.

ಮುಖೇಶ್ ಅಂಬಾನಿ ಸೋದರಿ ನೀನಾ ಕೊಠಾರಿ. ಕಾರ್ಪೊರೇಟ್ ಜಗತ್ತಿನ ಸುಪ್ರಸಿದ್ಧ ಹೆಸರು. ಭಾರತದಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ವ್ಯವಹಾರಗಳನ್ನು ಸಹ ನಡೆಸುತ್ತಾರೆ. ಕೊಠಾರಿ ಶುಗರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ ನ ಅಧ್ಯಕ್ಷೆ ನೀನಾ ಕೊಠಾರಿ. 

ನೀನಾ ಕೊಠಾರಿ ಅಂಬಾನಿ ಕುಟುಂಬದ ಕುಡಿಯಾದರೂ ಜನ ಸಾಮಾನ್ಯರಿಗೆ ಪರಿಚಿತವಲ್ಲದ ಹೆಸರು. ಇದಕ್ಕೆ ಕಾರಣ ಅವರು ಮಾಧ್ಯಮಗಳಿಂದ ದೂರವಿರುವುದು. ಧೀರೂ ಭಾಯಿ ಮತ್ತು ಕೋಕಿಲಾ ಬೆನ್ ಅಂಬಾನಿ ಅವರ ಪುತ್ರಿ ನೀನಾ ಕೊಠಾರಿ. 

ಇದನ್ನೂ ಓದಿ:  ಚಿನ್ನ ಮತ್ತು ಬೆಳ್ಳಿ ಬೆಲೆ ಭಾರಿ ಏರಿಕೆ: ಇಂದಿನ ದರವನ್ನು ಪರಿಶೀಲಿಸಿ!!

ನೀನಾ ಅಂಬಾನಿ ಅವರು 2003ರಲ್ಲಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಜಾವಗ್ರೀನ್ ಕಾಫಿ ಮತ್ತು ಫುಡ್ ಫ್ರ್ಯಾಂಚೈಸ್ ಸ್ಥಾಪಿಸುವ ಮೂಲಕ ಮುನ್ನುಡಿ ಬರೆದರು. ಉದ್ಯಮಿ ಭದ್ರಶ್ಯಾಮ್ ಕೊಠಾರಿ ಅವರ ಜೊತೆ ನೀನಾ ಕೊಠಾರಿ 1986ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನೀನಾ ಕೊಠಾರಿ ಮತ್ತು ಭದ್ರಶ್ಯಾಮ್ ಕೊಠಾರಿ ದಂಪತಿಗಳಿಗೆ ಅರ್ಜುನ್ ಕೊಠಾರಿ ಎಂಬ ಮಗ ಮತ್ತು ನಯನತಾರಾ ಕೊಠಾರಿ ಎಂಬ ಪುತ್ರಿ ಇದ್ದಾರೆ. 

ನೀನಾ ಕೊಠಾರಿ ಪತಿ ಭದ್ರಶ್ಯಾಮ್ ಕೊಠಾರಿ ಕ್ಯಾನ್ಸರ್ ರೋಗದಿಂದ 2015 ರಲ್ಲಿ ನಿಧನರಾದರು. ಬಳಿಕ ಕೊಠಾರಿ ಶುಗರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ ಅಧ್ಯಕ್ಷೆಯಾಗಿ 2015ರ ಏಪ್ರಿಲ್ 8ರಂದು ನೀನಾ ಕೊಠಾರಿ ನೇಮಕರಾದರು. ನೀನಾ ಅವರು ಹೆಚ್ ಸಿ ಕೊಠಾರಿ ಗ್ರೂಪ್ ನ್ನು ಇತರ ಕೈಗಾರಿಕೆಗಳತ್ತ ವಿಸ್ತರಿಸಿದರು. ಕೊಠಾರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಮತ್ತು ಕೊಠಾರಿ ಸೇಫ್ ಡೆಪಾಸಿಟ್ಸ್ ಲಿಮಿಟೆಡ್ ಕಂಪನಿಗಳನ್ನು ಕೊಠಾರಿ ಗ್ರೂಪ್‌ ಅಡಿ ಸ್ಥಾಪಿಸಿದರು. 

ನೀನಾ ಕೊಠಾರಿ ಒಟ್ಟು 52.4 ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಒಡತಿಯಾಗಿದ್ದಾರೆ ಎನ್ನಲಾಗಿದೆ. ಇವರ ಕಂಪನಿಯು 333 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಈ ಉದ್ಯಮ ಆರಂಭಿಸಿ, ತಿಂಗಳಿಗೆ ಕೈತುಂಬಾ ಹಣ ಕೊಡುತ್ತೇ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News