Aadhaar Update: ಆಧಾರ್ ಅಪ್‌ಡೇಟ್‌ ಮಾಡಲು ಬಂದಿದೆ ಹೊಸ ವಿಧಾನ, ಇನ್ನು ಸುಲಭವಾಗಿ ಆಗಲಿದೆ ನಿಮ್ಮ ಕೆಲಸ

 Aadhaar Update: ಯಾವುದೇ ಕೆಲಸಗಳಿಗೂ ಭಾರತದಲ್ಲಿ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಆಧಾರ್ ಕಾರ್ಡ್ ಕೇವಲ ಗುರುತಿನ ಪುರಾವೆ ಮಾತ್ರವಲ್ಲ, ಯಾವುದೇ  ಸರ್ಕಾರಿ ಮತ್ತು ಸರ್ಕಾರೇತರ ಪ್ರಯೋಜನಗಳನ್ನು ಪಡೆಯಬೇಕಾದರೂ ಇದು ಅಗತ್ಯ ಮತ್ತು ಕಡ್ಡಾಯ ದಾಖಲೆಯಾಗಿದೆ. 

Written by - Ranjitha R K | Last Updated : Jan 25, 2022, 01:12 PM IST
  • ಆಧಾರ್ ನವೀಕರಿಸಲು ಆರಂಭವಾಗಿದೆ ಹೊಸ ಸೇವೆ
  • ಹೊಸ ಆಧಾರ್ ಪಡೆಯಲು ಆನ್‌ಲೈನ್ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಿ
  • ಉದ್ದನೆಯ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಬಹುದು
Aadhaar Update: ಆಧಾರ್ ಅಪ್‌ಡೇಟ್‌ ಮಾಡಲು ಬಂದಿದೆ ಹೊಸ ವಿಧಾನ, ಇನ್ನು ಸುಲಭವಾಗಿ ಆಗಲಿದೆ ನಿಮ್ಮ ಕೆಲಸ title=
ಆಧಾರ್ ನವೀಕರಿಸಲು ಆರಂಭವಾಗಿದೆ ಹೊಸ ಸೇವೆ (file photo)

ನವದೆಹಲಿ : Aadhaar Update : ಯಾವುದೇ ಕೆಲಸಗಳಿಗೂ ಭಾರತದಲ್ಲಿ ಆಧಾರ್ ಕಾರ್ಡ್ (Aadhaar Card) ಅತ್ಯಗತ್ಯ ದಾಖಲೆಯಾಗಿದೆ. ಆಧಾರ್ ಕಾರ್ಡ್ ಕೇವಲ ಗುರುತಿನ ಪುರಾವೆ ಮಾತ್ರವಲ್ಲ, ಯಾವುದೇ  ಸರ್ಕಾರಿ ಮತ್ತು ಸರ್ಕಾರೇತರ ಪ್ರಯೋಜನಗಳನ್ನು ಪಡೆಯಬೇಕಾದರೂ ಇದು ಅಗತ್ಯ ಮತ್ತು ಕಡ್ಡಾಯ ದಾಖಲೆಯಾಗಿದೆ. ನಮ್ಮ ಆಧಾರ್ ಕಾರ್ಡ್ (Benefits of Aadhaar Card) ಅನೇಕ ಅಗತ್ಯ ಮಾಹಿತಿಯನ್ನು ಒಳಗೊಂಡಿದೆ. ಮಕ್ಕಳ ಶಾಲಾ ದಾಖಲಾತಿಯಿಂದ ಹಿಡಿದು, ಸರ್ಕಾರಿ ಫಾರ್ಮ್ ಭಾರ್ತಿ ಮಾಡುವವರೆಗೂ, ಆಧಾರ್ ಕಾರ್ಡ್ ಅನ್ನು ಬಳಸಲಾಗುತ್ತದೆ.

ಈ ರೀತಿ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ಅಪ್ ಡೇಟ್ ಮಾಡಬಹುದು : 
ಅನೇಕ ಬಾರಿ ಆಧಾರ್‌ನಲ್ಲಿ (Aadhaar) ಹೆಸರು, ವಿಳಾಸ, ಜನ್ಮ ದಿನಾಂಕವನ್ನು ಬದಲಾಯಿಸಬೇಕಾಗುತ್ತದೆ.  ಅಥವಾ ಹೊಸ ಆಧಾರ್ ಕಾರ್ಡ್ ಅನ್ನು ಮಾಡಿಸಬೇಕಾಗಬಹುದು. ಆದರೆ ಈ ಕೆಲಸಕ್ಕಾಗಿ ಆಧಾರ್ ಕೇಂದ್ರಕ್ಕೆ (Aadhaar Seva Kendra) ಭೇಟಿ ನೀಡಬೇಕಾಗಿಲ್ಲ.  ಮನೆಯಲ್ಲೇ ಕುಳಿತು ಅಪಾಯಿಂಟ್‌ಮೆಂಟ್ ಬುಕ್ ಮಾಡಬಹುದು ಮತ್ತು ಆಧಾರ್ ಸೇವಾ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ  ಕೂಡಾ ಇರುವುದಿಲ್ಲ. ಆಧಾರ್ ಅಪ್ ಡೇಟ್ ಗಾಗಿ (Aadhaar Update) ಅಪಾಯಿಂಟ್‌ಮೆಂಟ್ ಹೇಗೆ ತೆಗೆದುಕೊಳ್ಳುವುದು ನೋಡೋಣ. 

 

ಇದನ್ನೂ ಓದಿ :  Indian Railways : ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಬಹುದು : ರೈಲ್ವೆ ಇಲಾಖೆಯ ಈ ವಿಶೇಷ ನಿಯಮ ತಿಳಿಯಿರಿ!

ಅಪಾಯಿಂಟ್‌ಮೆಂಟ್ ಮೂಲಕ ಮಾಡಿಬಿಡಬಹುದು ಈ ಕೆಲಸ : 
- ಹೊಸ ಆಧಾರ್ ದಾಖಲಾತಿ
- ಹೆಸರು ಅಪ್‌ಡೇಟ್
- ವಿಳಾಸ ಅಪ್‌ಡೇಟ್
- ಮೊಬೈಲ್ ಸಂಖ್ಯೆ ಅಪ್‌ಡೇಟ್
- ಇಮೇಲ್ ಐಡಿ ಅಪ್‌ಡೇಟ್
- ಜನ್ಮ ದಿನಾಂಕ ಅಪ್‌ಡೇಟ್
- ಲಿಂಗ ಅಪ್‌ಡೇಟ್
- ಬಯೋಮೆಟ್ರಿಕ್ ಅಪ್‌ಡೇಟ್

ಆನ್‌ಲೈನ್  ಅಪಾಯಿಂಟ್‌ಮೆಂಟ್ ಪಡೆಯುವುದು ಹೇಗೆ ? 
- https://uidai.gov.in/ ಗೆ ಹೋಗಿ .
- My Aadhaar ಮೇಲೆ ಕ್ಲಿಕ್ ಮಾಡಿ, Book a appointment ಆಯ್ಕೆಮಾಡಿ.
- ಡ್ರಾಪ್‌ಡೌನ್‌ನಲ್ಲಿ ನಿಮ್ಮ ನಗರ ಮತ್ತು ಸ್ಥಳವನ್ನು ಆಯ್ಕೆಮಾಡಿ.
-  Proceed to book appointment ಮೇಲೆ ಕ್ಲಿಕ್ ಮಾಡಿ.
- ಮೊಬೈಲ್ ಸಂಖ್ಯೆಯನ್ನು ನಮೂದಿಸಿ, 'ಹೊಸ ಆಧಾರ್' ಅಥವಾ 'ಆಧಾರ್ ಅಪ್‌ಡೇಟ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಕ್ಯಾಪ್ಚಾ ನಮೂದಿಸಿ ಮತ್ತು ಜನರೇಟ್ ಒಟಿಪಿ ಮೇಲೆ ಕ್ಲಿಕ್ ಮಾಡಿ.
- OTP ಅನ್ನು ನಮೂದಿಸಿ ಮತ್ತು ವೆರಿಫಿಕೆಶನ್ ಮೇಲೆ ಕ್ಲಿಕ್ ಮಾಡಿ.
-ಪುರಾವೆಯೊಂದಿಗೆ ವೈಯಕ್ತಿಕ ವಿವರಗಳು ಮತ್ತು ವಿಳಾಸದ ವಿವರಗಳನ್ನು ನಮೂದಿಸಿ.
- ಟೈಮ್ ಸ್ಲಾಟ್ ಅನ್ನು ಆಯ್ಕೆ ಮಾಡಿ ಮತ್ತು Next ಮೇಲೆ ಕ್ಲಿಕ್ ಮಾಡಿ.
ಹೀಗೆ ಮಾಡಿದರೆ ನಿಮ್ಮ ಅಪಾಯಿಂಟ್‌ಮೆಂಟ್ ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ :  7th Pay Commission : ಕೇಂದ್ರ ನೌಕರರ ವೇತನದಲ್ಲಿ ಮತ್ತೆ ₹20,484 ಹೆಚ್ಚಳ! ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News