ನವದೆಹಲಿ : ತ್ವರಿತವಾಗಿ ಹಣ (Quick Money) ಗಳಿಸಲು ಬಯಸಿದರೆ, ಮನೆಯಲ್ಲಿ ಕುಳಿತು 5 ಲಕ್ಷಕ್ಕಿಂತ ಹೆಚ್ಚು ಗಳಿಸಬಹುದಾದ ಸಂಭವ ಇದೆ. ಅದಕ್ಕಾಗಿ ನಿಮ್ಮ ಬಳಿ ಹಳೆಯ ನಾಣ್ಯಗಳಿರಬೇಕು (Old coin). ಹಳೆಯ ನಾಣ್ಯಗಳಿದ್ದರೆ ಸುಲಭವಾಗಿ ಹಣ ಗಳಿಸಬಹುದು.
ಹಳೆಯ ವಸ್ತುಗಳಾಗಲಿವೆ ಆಂಟಿಕ್ :
ವಾಸ್ತವವಾಗಿ ವಸ್ತುಗಳು ಹಳೆಯದಾದಾಗ, ಅವುಗಳನ್ನು ಆಂಟಿಕ್ ಪೀಸ್ (Antique Pieces) ಸಾಲಿಗೆ ಸೇರುತ್ತವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂತಹ ಪುರಾತನ ವಸ್ತುಗಳಿಗೆ ಸಾಕಷ್ಟು ಬೇಡಿಕೆಯಿದೆ. ಈ ಪುರಾತನ ವಸ್ತುಗಳಿಗೆ ಉತ್ತಮ ಹಣ ಕೂಡಾ ಸಿಗಲಿದೆ. ನಿಮಗೂ ಹಳೆಯ ನಾಣ್ಯಗಳು ಅಥವಾ ನೋಟುಗಳನ್ನು (Old note) ಸಂಗ್ರಹಿಸುವ ಅಭ್ಯಾಸವಿದ್ದರೆ, ಹಳೆಯ ನಾಣ್ಯಗಳ ಮೂಲಕ ಸುಲಭವಾಗಿ ಹಣ ಸಂಪಾದಿಸಬಹುದು.
ಇದನ್ನೂ ಓದಿ : Grazia 125: ಕಲರ್ಫುಲ್ ಅವತಾರದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ Honda ಕಂಪನಿಯ ಹೊಸ ಸ್ಕೂಟರ್
ಈ ನಾಣ್ಯವಿದ್ದರೆ ಆಗಬಹುದು ಮಿಲಿಯನೇರ್ :
ನಿಮ್ಮ ಬಳಿ ಹಳೆಯ 2 ರೂಪಾಯಿ ನಾಣ್ಯವಿದ್ದರೆ, ಆ ನಾಣ್ಯಕ್ಕೆ ಬದಲಾಗಿ ಆನ್‌ಲೈನ್‌ನಲ್ಲಿ (Online) 5 ಲಕ್ಷ ರೂಪಾಯಿಯನ್ನು ಗಳಿಸಬಹುದು. ಆದರೆ ಆ ನಾಣ್ಯಗಳು 1994, 1995, 1997 ಅಥವಾ 2000 ಸರಣಿಯದ್ದಾಗಿರಬೇಕು. ಈ ಸರಣಿಯ ನಾಣ್ಯ ನಿಮ್ಮ ಬಳಿಯಿದ್ದರೆ, 5 ಲಕ್ಷ ರೂಪಾಯಿ ಗಳಿಸುವ ಸಂಭವ ಇದೆ.
ಈ ನಾಣ್ಯವನ್ನು ಮಾರಾಟ ಮಾಡುವುದು ಹೇಗೆ ?
-ನಿಮ್ಮ ಬಳಿ 2 ರೂಪಾಯಿ ಇಂಥಹ ನಾಣ್ಯಗಳಿದ್ದರೆ, ಅದನ್ನು ಆನ್‌ಲೈನ್‌ನಲ್ಲಿ OLX ನಲ್ಲಿ ಮಾರಾಟ ಮಾಡಬಹುದು.
-ಈ ವೆಬ್‌ಸೈಟ್‌ನಲ್ಲಿ ಈ ಅಪರೂಪದ ನಾಣ್ಯಕ್ಕೆ ಖರೀದಿದಾರರು ಭಾರಿ ಮೊತ್ತವನ್ನು ಪಾವತಿಸುತ್ತಿದ್ದಾರೆ.
-ನಾಣ್ಯಗಳನ್ನು ಮಾರಾಟ ಮಾಡಲು ನೀವು ಮೊದಲು Olx ನಲ್ಲಿ ಮಾರಾಟಗಾರರಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳಿ.
-ಇದರ ನಂತರ, ಅದನ್ನು ಕ್ಲಿಕ್ ಮಾಡುವ ಮೂಲಕ ನಾಣ್ಯದ ಎರಡೂ ಬದಿಗಳ ಫೋಟೋವನ್ನು ಅಪ್ಲೋಡ್ ಮಾಡಿ.
-ಅದರ ನಂತರ ನಿಮ್ಮ ಮೊಬೈಲ್ ಸಂಖ್ಯೆ (Mobile number) ಮತ್ತು ಇ-ಮೇಲ್ ಐಡಿಯನ್ನು ನಮೂದಿಸಿ.
-ವೆಬ್‌ಸೈಟ್‌ನಲ್ಲಿ (Website) ನೀವು ಒದಗಿಸಿದ ಮಾಹಿತಿಯನ್ನು ಪರಿಶೀಲಿಸಿ.
-ಯಾರಾದರೂ ಈ ನಾಣ್ಯವನ್ನು ಖರೀದಿಸಲು ಬಯಸಿದರೆ, ಅವರು ನಿಮ್ಮನ್ನು ಸಂಪರ್ಕಿಸುತ್ತಾರೆ.
ಇದನ್ನೂ ಓದಿ : Petrol-Diesel Price : ದೇಶದಲ್ಲೆ ಇಲ್ಲಿ ತುಂಬಾ ಕಡಿಮೆ ಬೆಲೆಗೆ ಸಿಗುತ್ತೆ ಪೆಟ್ರೋಲ್!
ವೆಬ್‌ಸೈಟ್ ಪ್ರಕಾರ, ನೀವು ಅದೃಷ್ಟವಂತರಾಗಿದ್ದರೆ, ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. ನಂತರ ನೀವು ಪಾವತಿ ಮತ್ತು ವಿತರಣೆಯ ನಿಯಮಗಳ ಪ್ರಕಾರ ನಿಮ್ಮ ನಾಣ್ಯವನ್ನು ಮಾರಾಟ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.