PAN Card ಕಳೆದುಹೋದರೆ ಚಿಂತಿಸಬೇಡಿ, ಅದನ್ನ ಉಚಿತವಾಗಿ ಪಡೆಯಲು ಈ ಕೆಲಸ ಮಾಡಿ

ಅದನ್ನ ಮರಳಿ ಪಡೆಯುವ ಸುಲಭ ಮಾರ್ಗ ಇಲ್ಲಿದೆ ನೋಡಿ. ಇದಕ್ಕಾಗಿ ನೀವು ಎಲ್ಲಿಯೂ ಹೋಗುವ ಅಗತ್ಯವಿಲ್ಲ ಅಥವಾ ನೀವು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ.

Written by - Channabasava A Kashinakunti | Last Updated : Sep 8, 2021, 04:01 PM IST
  • ಡಿಜಿಟಲ್ ಇಂಡಿಯಾ ಯುಗದಲ್ಲಿ PAN card ಹೊಂದಿರುವುದು ಬಹಳ ಮುಖ್ಯ.
  • ನಿಮ್ಮ PAN card ಕಳೆದುಕೊಂಡಿದ್ದೀರಾ?
  • ಅದನ್ನ ಮನೆಯಲ್ಲಿಯೇ ಕುಳಿತು ಪಡೆಯಬಹುದು
PAN Card ಕಳೆದುಹೋದರೆ ಚಿಂತಿಸಬೇಡಿ, ಅದನ್ನ ಉಚಿತವಾಗಿ ಪಡೆಯಲು ಈ ಕೆಲಸ ಮಾಡಿ title=

ನವದೆಹಲಿ : ಡಿಜಿಟಲ್ ಇಂಡಿಯಾದ ಯುಗದಲ್ಲಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಬ್ಯಾಂಕಿಂಗ್ ಸೇವೆಗಳಿಂದ ಹಿಡಿದು ಶಾಪಿಂಗ್‌ವರೆಗೆ ಪ್ಯಾನ್ ಕಾರ್ಡ್ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಪ್ಯಾನ್ ಹೊಂದಿರುವುದು ಬಹಳ ಮುಖ್ಯ. ನೀವು ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದರೆ ಅಥವಾ ನಿಮ್ಮ ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದರೆ, ಚಿಂತೆ ಮಾಡುವ ಅಗತ್ಯವಿಲ್ಲ. ಅದಕ್ಕೆ ಇಲ್ಲಿದೆ ಪರಿಹಾರ..

ಅದನ್ನ ಮರಳಿ ಪಡೆಯುವ ಸುಲಭ ಮಾರ್ಗ ಇಲ್ಲಿದೆ ನೋಡಿ. ಇದಕ್ಕಾಗಿ ನೀವು ಎಲ್ಲಿಯೂ ಹೋಗುವ ಅಗತ್ಯವಿಲ್ಲ ಅಥವಾ ನೀವು ಹಣ(Money)ವನ್ನು ಖರ್ಚು ಮಾಡುವ ಅಗತ್ಯವಿಲ್ಲ.

ಇದನ್ನೂ ಓದಿ : ನೀವು ATM ನಿಂದ ಎಷ್ಟು ಬಾರಿ ಬೇಕಾದ್ರು ಹಣ ಪಡೆಯಬಹುದು : ಇದಕ್ಕೆ ಯಾವುದೇ ಶುಲ್ಕ ಪಾವತಿಯಿಲ್ಲ !

ಈ ರೀತಿ ಪ್ಯಾನ್ ಕಾರ್ಡ್ ಪಡೆಯಬಹುದು 

ನೀವು ಆದಾಯ ತೆರಿಗೆ ಇಲಾಖೆ(Income Tax Department)ಯ ವೆಬ್‌ಸೈಟ್ incometaxindiaefiling.gov.in ಗೆ ಹೋಗಿ. ಇಲ್ಲಿ ಆಧಾರ್ ವಿಭಾಗದ ಮೂಲಕ ತತ್‌ಕ್ಷಣ PAN ಗೆ ಹೋಗಿ. ಇಲ್ಲಿ ತೆರೆಯುವ ಹೊಸ ಪುಟದಲ್ಲಿ, ನೀವು ಹೊಸ ಪ್ಯಾನ್ ಪಡೆಯಿರಿ ಅನ್ನು ಕ್ಲಿಕ್ ಮಾಡಬೇಕು. ಮುಂದೆ, ಹೊಸ ಪುಟದಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ಅದರ ನಂತರ OTP ಯನ್ನು ರಚಿಸಿ. ನಿಮ್ಮ ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ನಮೂದಿಸುವ ಮೂಲಕ ಆಧಾರ್ ವಿವರಗಳನ್ನು ಪರಿಶೀಲಿಸಿ.

ಇದರ ನಂತರ ಪ್ಯಾನ್ ಕಾರ್ಡ್‌(Pan Card)ಗಾಗಿ ಇಮೇಲ್ ಐಡಿ ನಮೂದಿಸಿ. ನಿಮ್ಮ ಆಧಾರ್ ಇ-ಕೆವೈಸಿ ಡೇಟಾವನ್ನು ಇಪಿಎಎನ್ ಗೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಯ ನಂತರ ನಿಮಗೆ PAN ಅನ್ನು PDF ನಲ್ಲಿ ನೀಡಲಾಗುತ್ತದೆ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೀವು ಅದನ್ನು ಡೌನ್‌ಲೋಡ್ ಮಾಡಬಹುದು ಅಥವಾ ಅದನ್ನು ನಿಮ್ಮ ಮೇಲ್‌ನಲ್ಲಿಯೂ ಹುಡುಕಬಹುದು.

ಇದನ್ನೂ ಓದಿ : SBI Platinum Deposits : ಸೆಪ್ಟೆಂಬರ್ 14 ರೊಳಗೆ ಎಸ್ ಬಿಐ ಯಲ್ಲಿ ಈ ವಿಶೇಷ ಡಿಪಾಸಿಟ್ ಮಾಡಿಸಿದರೆ ಸಿಗಲಿದೆ ಅಧಿಕ ಬಡ್ಡಿ

ಪ್ಯಾನ್ ಸಂಖ್ಯೆಯನ್ನು ಹೀಗೆ ಡೌನ್‌ಲೋಡ್ ಮಾಡಿ

ಆದಾಯ ತೆರಿಗೆ ವೆಬ್ ಸೈಟ್ https://www.incometax.gov.in/iec/foportal ಗೆ ಲಾಗ್ ಇನ್ ಮಾಡಿ ಮತ್ತು 'ಇನ್ಸ್ಟಂಟ್ ಇ-ಪ್ಯಾನ್' ಮೇಲೆ ಕ್ಲಿಕ್ ಮಾಡಿ. ಇಲ್ಲಿ 'ಹೊಸ ಇ-ಪ್ಯಾನ್'(New E-Pan) ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಿ. ನಿಮಗೆ ಪ್ಯಾನ್ ಸಂಖ್ಯೆ ನೆನಪಿಲ್ಲದಿದ್ದರೆ, ಆಧಾರ್ ಸಂಖ್ಯೆಯನ್ನು ನಮೂದಿಸಿ. ನಿಯಮಗಳು ಮತ್ತು ಷರತ್ತುಗಳನ್ನು ಇಲ್ಲಿ ಸ್ವೀಕರಿಸಿ. ಅದರ ನಂತರ ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ನಮೂದಿಸಿ. ವಿವರಗಳನ್ನು 'ಪರಿಶೀಲಿಸಿ'. ಈಗ ನಿಮ್ಮ ಪ್ಯಾನ್ ಅನ್ನು ನಿಮ್ಮ ಇಮೇಲ್ ಐಡಿಗೆ ಪಿಡಿಎಫ್‌ನಲ್ಲಿ ಕಳುಹಿಸಲಾಗುತ್ತದೆ. ನೀವು ಅದನ್ನು ಇಲ್ಲಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News