Payment Through Aadhaar Number: UPI Address ಅಥವಾ ಸ್ಮಾರ್ಟ್ ಫೋನ್ ಇಲ್ಲವೇ? ಹೀಗೆ Aadhaar Number ಬಳಸಿ ಹಣ ಪಾವತಿ ಮಾಡಿ

ನವದೆಹಲಿ: Payment Using Aadhaar Number - ಆಧಾರ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ನೀವು ಅನೇಕ ಸರ್ಕಾರಿ ಮತ್ತು ಖಾಸಗಿ ಕೆಲಸಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಪ್ರಮುಖ ದಾಖಲೆಯಾಗಿ ಬಳಸಿರಬೇಕು, ಆದರೆ ಇದೀಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯ ಮೂಲಕ ಹಣ  ಪಾವತಿ ಮಾಡಲು ಕೂಡ ಸಾಧ್ಯವಾಗಲಿದೆ. ಈಗ ನೀವು ಹೇಗೆ ಎಂದು ಯೋಚಿಸುತ್ತಿರಬಹುದು. ಹಾಗಾದರೆ ಬನ್ನಿ ತಿಳಿದುಕೊಳ್ಳೋಣ,

Written by - Nitin Tabib | Last Updated : Nov 19, 2021, 07:18 PM IST
  • ಆಧಾರ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ.
  • ನೀವು ಅನೇಕ ಸರ್ಕಾರಿ ಮತ್ತು ಖಾಸಗಿ ಕೆಲಸಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಪ್ರಮುಖ ದಾಖಲೆಯಾಗಿ ಬಳಸಿರಬೇಕು,
  • ಆದರೆ ಇದೀಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯ ಮೂಲಕ ಹಣ ಪಾವತಿ ಮಾಡಲು ಕೂಡ ಸಾಧ್ಯವಾಗಲಿದೆ.
Payment Through Aadhaar Number: UPI Address ಅಥವಾ ಸ್ಮಾರ್ಟ್ ಫೋನ್ ಇಲ್ಲವೇ? ಹೀಗೆ Aadhaar Number ಬಳಸಿ ಹಣ ಪಾವತಿ ಮಾಡಿ title=
Payment Through Aadhaar Number (File Photo)

ನವದೆಹಲಿ: Payment Using Aadhaar Number - ಆಧಾರ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ನೀವು ಅನೇಕ ಸರ್ಕಾರಿ ಮತ್ತು ಖಾಸಗಿ ಕೆಲಸಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಪ್ರಮುಖ ದಾಖಲೆಯಾಗಿ ಬಳಸಿರಬೇಕು, ಆದರೆ ಇದೀಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯ ಮೂಲಕ ಹಣ  ಪಾವತಿ ಮಾಡಲು ಕೂಡ ಸಾಧ್ಯವಾಗಲಿದೆ. ಈಗ ನೀವು ಹೇಗೆ ಎಂದು ಯೋಚಿಸುತ್ತಿರಬಹುದು. ಹಾಗಾದರೆ ಬನ್ನಿ ತಿಳಿದುಕೊಳ್ಳೋಣ,

ಈ ಕುರಿತು ಬಹಿರಂಗಪಡಿಸಿರುವ UIDAI, BHIM ಉಪಯೋಗಿಸುವ ಜನರು ಆಧಾರ್ ಸಂಖ್ಯೆಯನ್ನು ಬಳಸಿ ತಾವು ಹಣ ಕಳುಹಿಸಬೇಕಾಗಿರುವ ವ್ಯಕ್ತಿಗೆ UPI ವಿಳಾಸ ಇಲ್ಲದೆಯೇ ಅಥವಾ ಸ್ಮಾರ್ಟ್ ಫೋನ್  ಇಲ್ಲದೆಯೇ ಹಣವನ್ನು ವರ್ಗಾಯಿಸಬಹುದು. 

ಹೌದು,  BHIM ಬಳಕೆದಾರರು ಸ್ವೀಕರಿಸುವವರ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ಹಣವನ್ನು ಕಳುಹಿಸಬಹುದು. ಕರೋನವೈರಸ್ ಸಾಂಕ್ರಾಮಿಕ ರೋಗವು ಭಾರತದಲ್ಲಿ ಡಿಜಿಟಲ್ ಹಣಕಾಸು ವಹಿವಾಟಿಗೆ ಭಾರಿ ಉತ್ತೇಜನವನ್ನು ನೀಡಿದೆ. ಶಿಕ್ಷಣದಿಂದ ಹಿಡಿದು ದಿನಸಿ ಖರೀದಿಸುವವರೆಗೆ ಮತ್ತು ಎಲ್ಲಾ ರೀತಿಯ ಪಾವತಿಗಳನ್ನು ಮಾಡುವುದು, ಬಹುತೇಕ ಎಲ್ಲವೂ ಡಿಜಿಟಲ್ ಆಗಿವೆ. ಆದರೆ, ಕೆಲವರಿಗೆ ಇದರ ಸದುಪಯೋಗ ಇನ್ನೂ ಮರೀಚಿಕೆಯಾಗಿದೆ. ಉದಾಹರಣೆಗೆ, ಸ್ಮಾರ್ಟ್‌ಫೋನ್ ಅಥವಾ ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (UPI Payment) ವಿಳಾಸವನ್ನು ಹೊಂದಿರದ ಜನರಿದ್ದಾರೆ, ಇದರಿಂದಾಗಿ ಅವರು ಹಣವನ್ನು ಕಳುಹಿಸಲು ಕಷ್ಟಪಡುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು, BHIM (ಭಾರತ್ ಇಂಟರ್‌ಫೇಸ್ ಫಾರ್ ಮನಿ) ಬಳಸುವ ಜನರು ಫೋನ್ ಅಥವಾ UPI ವಿಳಾಸವಿಲ್ಲದೆ ಸ್ವೀಕರಿಸುವವರಿಗೆ ಆಧಾರ್ ಸಂಖ್ಯೆಗಳನ್ನು ಬಳಸಿಕೊಂಡು ಹಣವನ್ನು ಕಳುಹಿಸಬಹುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಬಹಿರಂಗಪಡಿಸಿದೆ. ಅದ್ಭುತ ಸೌಲಭ್ಯವಾಗಿದೆಯಲ್ಲವೇ ಇದು, ಬನ್ನಿ ಹಾಗಾದರೆ ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ತಿಳಿಯೋಣ.

BHIM ಒಂದು ಯುಪಿಐ ಆಧಾರಿತ ಪಾವತಿ ಇಂಟರ್ಫೇಸ್ ಆಗಿದ್ದು, ಇದು  ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಹೆಸರಿನಂತಹ ಒಂದು ಗುರುತನ್ನು ಬಳಸಿಕೊಂಡು ರಿಯಲ್ ಟೈಮ್ ಫಂಡ್ ವರ್ಗಾವಣೆಯನ್ನುಅನುಮತಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ. UIDAI ಪ್ರಕಾರ, BHIM ನಲ್ಲಿ ಫಲಾನುಭವಿಯ ವಿಳಾಸವು ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಹಣವನ್ನು ಕಳುಹಿಸುವ ಆಯ್ಕೆಯನ್ನು ನೀಡುತ್ತದೆ. ನೀವು BHIM ಬಳಕೆದಾರರಾಗಿದ್ದರೆ ಮತ್ತು ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಹಣವನ್ನು ಕಳುಹಿಸಲು ಬಯಸಿದರೆ ಇದನ್ನು ತಿಳಿದುಕೊಳ್ಳುವುದು ಮುಖ್ಯ.

BHIM ನಲ್ಲಿ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಹಣವನ್ನು ಕಳುಹಿಸುವುದು ಹೇಗೆ?
ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಹಣವನ್ನು ಕಳುಹಿಸಲು ಅಥವಾ ವರ್ಗಾಯಿಸಲು, BHIM ಬಳಕೆದಾರರು ಫಲಾನುಭವಿಯ 12 ಅಂಕಿಗಳ ಅನನ್ಯ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಪರಿಶೀಲನೆ ಬಟನ್ ಒತ್ತಬೇಕು.
ಅದರ ನಂತರ, ವ್ಯವಸ್ಥೆಯು ಆಧಾರ್ ಲಿಂಕ್ ಮಾಡುವಿಕೆಯನ್ನು ಪರಿಶೀಲಿಸುತ್ತದೆ ಮತ್ತು ಫಲಾನುಭವಿಯ ವಿಳಾಸವನ್ನು ತುಂಬುತ್ತದೆ ಮತ್ತು UIDAI ಒದಗಿಸಿದ ಮಾಹಿತಿಯ ಪ್ರಕಾರ ಬಳಕೆದಾರರು ಹಣವನ್ನು ಕಳುಹಿಸಲು ಸಾಧ್ಯವಾಗುತ್ತದೆ.

ಸ್ವೀಕರಿಸುವವರ ಯಾವ ಖಾತೆಯಲ್ಲಿ ಹಣವನ್ನು ಜಮಾ ಮಾಡಲಾಗುತ್ತದೆ?
UIDAI ಪ್ರಕಾರ, DBT/ಆಧಾರ್ ಆಧಾರಿತ ಕ್ರೆಡಿಟ್ ಪಡೆಯಲು ಅವನು/ಅವಳು ಆಯ್ಕೆಮಾಡಿದ ಸ್ವೀಕೃತದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ ನಂತರ ಹಣವನ್ನು ಕ್ರೆಡಿಟ್ ಮಾಡಲಾಗುತ್ತದೆ. ಅಲ್ಲದೆ, ಪಾವತಿಗಳನ್ನು ಸ್ವೀಕರಿಸಲು ಆಧಾರ್ ಪೇ ಪಿಒಎಸ್ ಬಳಸಿ ವ್ಯಾಪಾರಿಗಳಿಗೆ ಡಿಜಿಟಲ್ ಪಾವತಿ ಮಾಡಲು ಆಧಾರ್ ಸಂಖ್ಯೆ ಮತ್ತು ಫಿಂಗರ್‌ಪ್ರಿಂಟ್ ಅನ್ನು ಬಳಸಬಹುದು.

ಇದನ್ನೂ ಓದಿ-ಯಾವಾಗ ರೈತರ ಖಾತೆಗೆ ಕ್ರೆಡಿಟ್ ಆಗಲಿದೆ ಪಿಎಂ ಕಿಸಾನ್ 10ನೇ ಕಂತಿಕನ ಹಣ? ಇಲ್ಲಿದೆ ಮಾಹಿತಿ

ಒಬ್ಬ ವ್ಯಕ್ತಿಯು 1 ಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿದ್ದರೆ ಮತ್ತು ಎಲ್ಲಾ ಖಾತೆಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದರೆ, ನಂತರ ಎಲ್ಲಾ ಖಾತೆಗಳನ್ನು ಡಿಜಿಟಲ್ ಪಾವತಿ ಮಾಡಲು ಬಳಸಬಹುದು.

ಇದನ್ನೂ ಓದಿ-Business Idea: ಸ್ವಂತ ವ್ಯಾಪಾರ ಆರಂಭಿಸಿ, ಸಂಪಾದಿಸಿ 15 ಲಕ್ಷಗಳವರೆಗೆ ಆದಾಯ

UIDAI ಪ್ರಕಾರ, "ಆಧಾರ್ ಆಧಾರಿತ ಪಾವತಿಗಳನ್ನು ಮಾಡುವಾಗ, ನೀವು ಪಾವತಿ ಮಾಡಲು ಬಯಸುವ ಬ್ಯಾಂಕ್‌ನ ಹೆಸರನ್ನು ಆಯ್ಕೆ ಮಾಡುವ ಅಧಿಕಾರ ನಿಮಗೆ ನೀಡಲಾಗುತ್ತದೆ. ಹೀಗಾಗಿ, ನೀವು ಪ್ರತಿ ಬಾರಿ ಪಾವತಿ ಮಾಡುವಾಗ ಬ್ಯಾಂಕ್ ಅನ್ನು ನಿರ್ಧರಿಸುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. " ಆಧಾರ್ ಪೇ ಮೂಲಕ ಪಾವತಿ ಮಾಡುವಾಗ ನಿಮ್ಮ ಖಾತೆಯನ್ನು ಆನ್‌ಲೈನ್‌ನಲ್ಲಿ/ತತ್‌ಕ್ಷಣದಲ್ಲಿ ಡೆಬಿಟ್ ಮಾಡಲಾಗುತ್ತದೆ.

ಇದನ್ನೂ ಓದಿ-World's Most Expensive Bike: ಇದುವೇ ವಿಶ್ವದ ಅತ್ಯಂತ ದುಬಾರಿ ಬೈಕ್, ಬೆಲೆ ಕೇಳಿ ನಿಮಗೂ ಶಾಕ್ ಆಗಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News