Petrol-Diesel Price : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ : ಮುಂಬೈನಲ್ಲಿ ₹ 101 ಪೆಟ್ರೋಲ್ ಬೆಲೆ!

ಬೆಂಗಳೂರಿನಲ್ಲಿ 28 ಪೈಸೆ ಏರಿಕೆಯಾಗಿ ಪೆಟ್ರೋಲ್ ದರ ₹97.92, 30 ಪೈಸೆ ಏರಿಕೆ

Last Updated : Jun 6, 2021, 01:51 PM IST
  • ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಮತ್ತೆ ಏರಿಕೆ
  • ಮುಂಬೈಯಲ್ಲಿ ಪೆಟ್ರೋಲ್ ಬೆಲೆ 27 ಪೈಸೆ ಏರಿಕೆ. ಲೀಟರ್‌ಗೆ ₹ 101.25 ಕ್ಕೆ ತಲುಪಿದೆ
  • ಬೆಂಗಳೂರಿನಲ್ಲಿ 28 ಪೈಸೆ ಏರಿಕೆಯಾಗಿ ಪೆಟ್ರೋಲ್ ದರ ₹97.92, 30 ಪೈಸೆ ಏರಿಕೆ
Petrol-Diesel Price : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ : ಮುಂಬೈನಲ್ಲಿ ₹ 101 ಪೆಟ್ರೋಲ್ ಬೆಲೆ! title=

ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಮತ್ತೆ ಏರಿಕೆ ಕಂಡಿವೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆಯನ್ನು 27 ಪೈಸೆ ಏರಿಕೆ ಆಗಿದೆ. ಈಗ ಲೀಟರ್‌ಗೆ  ₹ 95.03 ಕ್ಕೆ ತಲುಪಿದೆ. ಡೀಸೆಲ್ ಅನ್ನು 29 ಪೈಸೆ ಏರಿಕೆ ಆಗಿ ಈಗ ಪ್ರತಿ ಲೀಟರ್  ₹ 85.95 ಬೆಲೆಯಿದೆ.

 ವಾಣಿಜ್ಯ ನಗರಿ ಮುಂಬೈಯಲ್ಲಿ ಪೆಟ್ರೋಲ್ ಬೆಲೆ(Petrol Price) 27 ಪೈಸೆ ಏರಿಕೆ ಆಗಿ ಲೀಟರ್‌ಗೆ ₹ 101.25 ಕ್ಕೆ ತಲುಪಿದೆ. ಡೀಸೆಲ್ ಬೆಲೆಯನ್ನು 31 ಪೈಸೆ ಏರಿಕೆ ಆಗಿ ಲೀಟರ್‌ಗೆ. 93.30 ದಾಖಲಾಗಿದೆ.

ಇದನ್ನೂ ಓದಿ : PF ಖಾತೆದಾರರಿಗೆ 5 ಪ್ರಯೋಜನಗಳ ಲಾಭ : ಇಲ್ಲಿದೆ ನೋಡಿ!

ಜೂನ್‌ನಲ್ಲಿಯೇ ಇಂಧನ ಬೆಲೆಯಲ್ಲಿ ಇದು 3ನೇ ಭಾರಿ ಏರಿಕೆ :

ಮಧ್ಯಪ್ರದೇಶ ಮತ್ತು ರಾಜಸ್ಥಾನದ ವಿವಿಧ ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ದರ ₹ 100 ದಾಟಿದೆ. ಮೌಲ್ಯವರ್ಧಿತ ತೆರಿಗೆ(Tax) ಅಥವಾ ವ್ಯಾಟ್‌ನಿಂದಾಗಿ ದೇಶದ ರಾಜ್ಯಗಳಲ್ಲಿ ಇಂಧನ ದರಗಳು ಬದಲಾಗುತ್ತವೆ.

ಇದನ್ನೂ ಓದಿ : Gold-Silver Rate : ಚಿನ್ನಾಭರಣ ಪ್ರಿಯರೆ ಗಮನಿಸಿ : ಇಲ್ಲಿದೆ ಚಿನ್ನ ಬೆಳ್ಳಿ ಬೆಲೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 28 ಪೈಸೆ ಏರಿಕೆಯಾಗಿ ಪೆಟ್ರೋಲ್ ದರ 97.92 ಮತ್ತು 30 ಪೈಸೆ ಏರಿಕೆಯಾಗಿ ಲೀಟರ್ ಡೀಸೆಲ್ ದರ(Diesel Price) ₹ 90.81 ಆಗಿದೆ.

ದೇಶದ ವಿವಿಧ ನಗರಗಳಲ್ಲಿ  ಪೆಟ್ರೋಲ್-ಡೀಸೆಲ್ ಬೆಲೆ :

ದೆಹಲಿ ಪೆಟ್ರೋಲ್ ಬೆಲೆ ₹ 95.03 ಡೀಸೆಲ್ ಬೆಲೆ ₹ 85.95  

ಇದನ್ನೂ ಓದಿ : Driving license link aadhar card online : ಡ್ರೈವಿಂಗ್ ಲೈಸೆನ್ಸ್‍ಗೆ ಆಧಾರ್ ಲಿಂಕ್ ಮಾಡುವುದು ಇನ್ನು ಅನಿವಾರ್ಯ.! ಹೀಗೆ ಮಾಡಿ

ಮುಂಬೈ(Mumbai) ಪೆಟ್ರೋಲ್ ಬೆಲೆ ₹ 101.25 ಡೀಸೆಲ್ ಬೆಲೆ ₹ 93.30

ಚೆನ್ನೈ ಪೆಟ್ರೋಲ್ ಬೆಲೆ ₹ 96.47 ಡೀಸೆಲ್ ಬೆಲೆ ₹ 90.66

ಇದನ್ನೂ ಓದಿ : Not Filing ITR For Two Years? ಈ ತಿಂಗಳಾಂತ್ಯದವರೆಗೆ ಈ ಕೆಲಸ ಮಾಡಿ, ಇಲ್ಲದೆ ಹೋದರೆ ದುಪ್ಪಟ್ಟು TDS ಪಾವತಿಸಬೇಕು, ಇಲ್ಲಿದೆ ನಿಯಮ

ಕೋಲ್ಕತಾ(Kolkata) ಪೆಟ್ರೋಲ್ ಬೆಲೆ ₹ 95.02 ಡೀಸೆಲ್ ಬೆಲೆ ₹ 88.80 

ಸರ್ಕಾರಿ ತೈಲ ಮಾರಾಟ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ವಿದೇಶಿ ವಿನಿಮಯ ದರಗಳಲ್ಲಿನ ಯಾವುದೇ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಂಡು ದೇಶೀಯ ಇಂಧನದ ದರವನ್ನು ಜಾಗತಿಕ ಕಚ್ಚಾ ತೈಲ ಬೆಲೆಗಳೊಂದಿಗೆ ಹೊಂದಿಸುತ್ತದೆ. ಇಂಧನ ಬೆಲೆಯಲ್ಲಿನ ಯಾವುದೇ ಬದಲಾವಣೆಗಳನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ತರಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News