Petrol price Today : ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಲ್ಲಿ ಹೊಸ ದಾಖಲೆ : ನಿಮ್ಮ ನಗರದ ದರ ಇಲ್ಲಿ ಪರಿಶೀಲಿಸಿ

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 110.61 ರೂ. ಮತ್ತೆ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 101.49 ರೂ. ಇದೆ.

Written by - Channabasava A Kashinakunti | Last Updated : Oct 22, 2021, 08:25 AM IST
  • ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶುಕ್ರವಾರ ಮತ್ತೆ ಏರಿಕೆ
  • ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 110.61 ರೂ.
  • ದೆಹಲಿಯಲ್ಲಿ ಪೆಟ್ರೋಲ್ ಬೆಲೆ 106.89 ರೂ. 35 ಪೈಸೆ ಏರಿಕೆ
Petrol price Today : ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಲ್ಲಿ ಹೊಸ ದಾಖಲೆ : ನಿಮ್ಮ ನಗರದ ದರ ಇಲ್ಲಿ ಪರಿಶೀಲಿಸಿ title=

ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶುಕ್ರವಾರ ಮತ್ತೆ ಏರಿಕೆಯಾಗಿದ್ದು, ದೇಶಾದ್ಯಂತ ಮತ್ತೊಂದು ಹೊಸ ದಾಖಲೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 106.89 ರೂ. 35 ಪೈಸೆ ಏರಿಕೆ ಆಗಿದೆ, ಮತ್ತೆ ಡೀಸೆಲ್ ದರ 95.62 ರೂ. ಇದ್ದು ಇದು ಕೂಡ 35 ಪೈಸೆ ಹೆಚ್ಚಳವಾಗಿದೆ.

ಮುಂಬೈನಲ್ಲಿ, ಪೆಟ್ರೋಲ್(Petrol price) ಅನ್ನು ಪ್ರತಿ ಲೀಟರ್‌ಗೆ 112.78 ರೂ.ಗೆ ಖರೀದಿಸಬಹುದು, ಈಗ 34 ಪೈಸೆ ಮತ್ತು ಡೀಸೆಲ್ ಬೆಲೆ 103.63 ರೂ., 37 ಪೈಸೆ ಏರಿಕೆ ಆಗಿದೆ.

ಇದನ್ನೂ ಓದಿ : ಒಂದೇ ಕರೆ ಮೂಲಕ ಮನೆ ಬಾಗಿಲಿಗೆ ಬರುತ್ತದೆ 20 ಸಾವಿರ ರೂಪಾಯಿ : SBI ನೀಡುತ್ತಿದೆ ವಿಶೇಷ ಸೌಲಭ್ಯ

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 110.61 ರೂ. ಮತ್ತೆ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 101.49 ರೂ. ಇದೆ.

ಚೆನ್ನೈನಲ್ಲಿ, ಒಂದು ಲೀಟರ್ ಪೆಟ್ರೋಲ್ ಬೆಲೆ 103.92 ರೂ, ಇದು 31 ಪೈಸೆ ದುಬಾರಿಯಾಗಿದೆ. ಶುಕ್ರವಾರ, ಪ್ರತಿ ಲೀಟರ್ ಡೀಸೆಲ್ ಬೆಲೆ(Diesel Price) ಪ್ರತಿ ಲೀಟರ್ ಗೆ 99.92 ರೂ, 33 ಪೈಸೆ ಹೆಚ್ಚಾಗಿದೆ.

ಕೋಲ್ಕತ್ತಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 107.44 ರೂ., ದುಬಾರಿ 33 ಪೈಸೆ ಮತ್ತು ಡೀಸೆಲ್ ಬೆಲೆ 98.73 ರೂ. ಇದು 35 ಪೈಸೆ ಹೆಚ್ಚಾಗಿದೆ.

ಭೋಪಾಲ್ ನಲ್ಲಿ 115.54 ರೂ.ಗೆ ಪೆಟ್ರೋಲ್(Petrol) ಖರೀದಿಸಬಹುದಾಗಿದ್ದು, 37 ಪೈಸೆ ಮತ್ತು ಡೀಸೆಲ್ ಬೆಲೆ 104.89 ರೂ., ದುಬಾರಿ 37 ಪೈಸೆ.

ಇದನ್ನೂ ಓದಿ : DA Increase: ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ , 3 ಪ್ರತಿಶತ ತುಟ್ಟಿ ಭತ್ಯೆ ಹೆಚ್ಚಿಸಿ ಆದೇಶ

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ(Indian Oil and Hindustan Petroleum) ಸೇರಿದಂತೆ ತೈಲ ಮಾರುಕಟ್ಟೆ ಕಂಪನಿಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಿಸಲಾಗಿದೆ. ಹೊಸ ಬೆಲೆಯನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಜಾರಿಗೆ ತರಲಾಗುತ್ತದೆ. ರಾಜ್ಯಗಳು ಮತ್ತು ನಗರಗಳು ವಿಭಿನ್ನ ಇಂಧನ ಬೆಲೆಗಳನ್ನು ಹೊಂದಿವೆ ಏಕೆಂದರೆ ಮೌಲ್ಯವರ್ಧಿತ ತೆರಿಗೆಗಳು, ಸ್ಥಳೀಯ ಮತ್ತು ಸರಕು ಶುಲ್ಕಗಳು ಸ್ಥಳವನ್ನು ಅವಲಂಬಿಸಿ ಬದಲಾಗುತ್ತವೆ.

ದೇಶದ ಕೆಲವು ನಗರಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಹೀಗಿವೆ:

1. ಮುಂಬೈ

ಪೆಟ್ರೋಲ್ - ಪ್ರತಿ ಲೀಟರ್‌ಗೆ 112.78 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 103.63 ರೂ.

2. ದೆಹಲಿ

ಪೆಟ್ರೋಲ್ - ಪ್ರತಿ ಲೀಟರ್‌ಗೆ 106.89 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 95.62 ರೂ.

3. ಚೆನ್ನೈ

ಪೆಟ್ರೋಲ್ - ಪ್ರತಿ ಲೀಟರ್‌ಗೆ 103.92 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 99.92 ರೂ.

4. ಕೋಲ್ಕತಾ

ಪೆಟ್ರೋಲ್ - ಪ್ರತಿ ಲೀಟರ್‌ಗೆ 107.44 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 98.73 ರೂ.

5. ಭೋಪಾಲ್

ಪೆಟ್ರೋಲ್ - ಪ್ರತಿ ಲೀಟರ್‌ಗೆ 115.54 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 104.89 ರೂ.

6. ಹೈದರಾಬಾದ್

ಪೆಟ್ರೋಲ್ - ಪ್ರತಿ ಲೀಟರ್‌ಗೆ 111.18 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 104.32 ರೂ.

7. ಬೆಂಗಳೂರು

ಪೆಟ್ರೋಲ್ - ಪ್ರತಿ ಲೀಟರ್‌ಗೆ 110.61 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 101.49 ರೂ.

8. ಗುವಾಹಟಿ

ಪೆಟ್ರೋಲ್ - ಪ್ರತಿ ಲೀಟರ್‌ಗೆ 102.87 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 95.39 ರೂ.

9. ಲಕ್ನೋ

ಪೆಟ್ರೋಲ್ - ಪ್ರತಿ ಲೀಟರ್‌ಗೆ 103.86 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 96.07 ರೂ.

10. ಗಾಂಧಿನಗರ

ಪೆಟ್ರೋಲ್ - ಪ್ರತಿ ಲೀಟರ್‌ಗೆ 103.78 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 103.27 ರೂ.

11. ತಿರುವನಂತಪುರಂ

ಪೆಟ್ರೋಲ್ - ಪ್ರತಿ ಲೀಟರ್‌ಗೆ 109.14 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 102.77 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News