T20 world cup 2024: ಟಿ20 ವಿಶ್ವಕಪ್‌ನಲ್ಲಿ(T20 world cup 2024) ಭಾರತ ಭರ್ಜರಿ ಹೋರಾಟಕ್ಕೆ ಸಜ್ಜಾಗಿದೆ. ಟಿ20 ಮಾದರಿಯಲ್ಲಿ ವಿಶ್ವ ಚಾಂಪಿಯನ್ ಆಗಲು ಕೇವಲ ಒಂದು ಹೆಜ್ಜೆ ಮಾತ್ರ ಬಾಕಿ ಇದೆ. ಶನಿವಾರ ಬಾರ್ಬಡೋಸ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಟೀಂ ಇಂಡಿಯಾ ಬಲಿಷ್ಠ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಬಲಾಬಲದಲ್ಲಿ ಉಭಯ ತಂಡಗಳು ಸಮಾನವಾಗಿದ್ದರೂ ಭಾರತ ಫೇವರಿಟ್ ಆಗಿ ಪ್ರಶಸ್ತಿ ಹೋರಾಟಕ್ಕೆ ಇಳಿಯುತ್ತಿದೆ.
ಆದರೆ ವಿಶ್ವಕಪ್ ಗೆಲ್ಲಲು ಭಾರತಕ್ಕೆ ಸ್ವಲ್ಪ ಅದೃಷ್ಟ ಬೇಕು ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ. ಕಳೆದ ಏಳು ತಿಂಗಳ ಅವಧಿಯಲ್ಲಿ ನಾಯಕನಾಗಿ ರೋಹಿತ್‌ಗೆ ಇದು ಎರಡನೇ ವಿಶ್ವಕಪ್ ಫೈನಲ್ ಆಗಿದೆ.ಏಕದಿನ ವಿಶ್ವಕಪ್‌ನುದ್ದಕ್ಕೂ ಸತತ ಗೆಲುವಿನೊಂದಿಗೆ ಬಲಿಷ್ಠವಾಗಿದ್ದ ಟೀಂ ಇಂಡಿಯಾ ಕೊನೆಯ ಮೆಟ್ಟಿಲಲ್ಲಿ ಎಡವಿ ಬಿತ್ತು.
ಇದನ್ನೂ ಓದಿ: IND vs SA: ಟೀಂ ಇಂಡಿಯಾ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್..! ಅಂತಿಮ ಕಾದಾಟಕ್ಕೆ ಇವರೇ ನೋಡಿ ಅಂಪೈರ್ಸ್
ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟ್ರೋಫಿಯನ್ನು ಕಳೆದುಕೊಂಡಿತು. ಬಳಿಕ ಆ ನೋವನ್ನು ಮೆಟ್ಟಿನಿಂತು ಕೆಲವೇ ತಿಂಗಳಲ್ಲಿ ಭಾರತ ಮತ್ತೊಂದು ಮೆಗಾಟೂರ್ನಮೆಂಟ್ ಪ್ರವೇಶಿಸಿ ಫೈನಲ್ ತಲುಪಿತು. ಈ ಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋತರೆ ಆ ನೋವಿನಿಂದಲೇ ರೋಹಿತ್ ಸಮುದ್ರಕ್ಕೆ ಹಾರಲು ಯೋಚಿಸುತ್ತಾರೆ ಎಂದು ದಾದಾ ಹೇಳಿದ್ದಾರೆ. ಆದರೆ ಭಾರತ ಕಪ್ ಕಳೆದುಕೊಳ್ಳುವ ಸಾಧ್ಯತೆ ಇಲ್ಲ, ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
"7 ತಿಂಗಳಲ್ಲಿ ಎರಡು ವಿಶ್ವಕಪ್ ಫೈನಲ್‌ಗೆ ಹೋಗುವುದು ತಂಡದ ಸಾಮರ್ಥ್ಯ ಏನು ಎಂಬುದನ್ನು ತೋರಿಸಿಕೊಡುತ್ತದೆ. ರೋಹಿತ್ ತಂಡವನ್ನು ಮುಂಚೂಣಿಯಿಂದ ಮುನ್ನಡೆಸುತ್ತಿದ್ದಾರೆ, ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಫೈನಲ್‌ನಲ್ಲೂ ಅವರು ಅದೇ ವೇಗವನ್ನು ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಆಟಗಾರರು ಮುಕ್ತವಾಗಿ ಆಡಬೇಕು, ಟೀಂ ಇಂಡಿಯಾಕ್ಕೂ ಶುಭ ಹಾರೈಸುತ್ತೇನೆ. ಮೆಗಾ-ಟೂರ್ನಮೆಂಟ್‌ಗಳಲ್ಲಿ ವಿಜೇತರಾಗಲು, ಸ್ವಲ್ಪ ಅದೃಷ್ಟವೂ ಬೇಕು" ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
#WATCH | On India vs South Africa T20 World Cup final, former Team India captain, Sourav Ganguly says, "...To get to two World Cup finals in 7 months speaks volumes about the capability & strength of the team...They will not make any changes to the team and this is Rohit Sharma's… pic.twitter.com/w4WBufjxqM
— ANI (@ANI) June 28, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ