ಪಿಎಂ ಕಿಸಾನ್ ಯೋಜನೆಯ 11ನೇ ಕಂತು ಈ ದಿನ ರೈತರ ಖಾತೆಗೆ!

ದೇಶದಾದ್ಯಂತ 12.5 ಕೋಟಿ ರೈತರು ಪಿಎಂ ಕಿಸಾನ್ ನಿಧಿಗಾಗಿ ನೋಂದಾಯಿಸಿಕೊಂಡಿದ್ದಾರೆ. 11ನೇ ಕಂತಿನ ಮೊದಲು ಇ-ಕೆವೈಸಿ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಮೊದಲು ಇ-ಕೆವೈಸಿಗೆ ಮಾರ್ಚ್ 31 ಕೊನೆಯ ದಿನಾಂಕವಾಗಿತ್ತು, ಆದರೆ ಈಗ ಅದನ್ನು ಮೇ 31 ಕ್ಕೆ ವಿಸ್ತರಿಸಲಾಗಿದೆ.

Written by - Channabasava A Kashinakunti | Last Updated : May 16, 2022, 08:58 PM IST
  • ಪಿಎಂ ಕಿಸಾನ್ 11ನೇ ಕಂತು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ
  • ದೇಶದಾದ್ಯಂತ 12.5 ಕೋಟಿ ರೈತರು ಪಿಎಂ ಕಿಸಾನ್ ನೋಂದಾಯಿಸಿಕೊಂಡಿದ್ದಾರೆ.
  • 11ನೇ ಕಂತಿನ ಮೊದಲು ಇ-ಕೆವೈಸಿ ಮಾಡುವುದನ್ನು ಸರ್ಕಾರ ಕಡ್ಡಾಯ
ಪಿಎಂ ಕಿಸಾನ್ ಯೋಜನೆಯ 11ನೇ ಕಂತು ಈ ದಿನ ರೈತರ ಖಾತೆಗೆ! title=

ನವದೆಹಲಿ : ಪಿಎಂ ಕಿಸಾನ್ 11ನೇ ಕಂತು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಅರ್ಹ ರೈತರ ಖಾತೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ನೀಡುವ 2000 ರೂ. ಜಮಾ ಮಾಡಲಿದೆ.

ದೇಶದಾದ್ಯಂತ 12.5 ಕೋಟಿ ರೈತರು ಪಿಎಂ ಕಿಸಾನ್ ನಿಧಿಗಾಗಿ ನೋಂದಾಯಿಸಿಕೊಂಡಿದ್ದಾರೆ. 11ನೇ ಕಂತಿನ ಮೊದಲು ಇ-ಕೆವೈಸಿ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಮೊದಲು ಇ-ಕೆವೈಸಿಗೆ ಮಾರ್ಚ್ 31 ಕೊನೆಯ ದಿನಾಂಕವಾಗಿತ್ತು, ಆದರೆ ಈಗ ಅದನ್ನು ಮೇ 31 ಕ್ಕೆ ವಿಸ್ತರಿಸಲಾಗಿದೆ.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ 18 ತಿಂಗಳ DA ಬಾಕಿ ಇದೆಯೇ? ಇಲ್ಲಿ ತಿಳಿಯಿರಿ

ಪಿಎಂ ಕಿಸಾನ್

ಪಿಎಂ ಕಿಸಾನ್ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ದೇಶಾದ್ಯಂತ ಕೋಟ್ಯಂತರ ಬಡ ರೈತರಿಗೆ ಆರ್ಥಿಕ ನೆರವು ನೀಡುತ್ತದೆ.

ಯೋಜನೆಯ ಭಾಗವಾಗಿ, ಅರ್ಹ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಷದಲ್ಲಿ 6000 ರೂ. ಮೊತ್ತವನ್ನು ರೈತರಿಗೆ ತಲಾ 2000 ರೂ.ಗಳಂತೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ.

11ನೇ ಕಂತು ಯಾವಾಗ ಬರುತ್ತೆ?

11ನೇ ಕಂತು ಈ ಬಾರಿ ತಡವಾಗಿದೆ. ಕಳೆದ ವರ್ಷ ಏಪ್ರಿಲ್-ಜುಲೈ ತಿಂಗಳ ಕಂತಿನ ಹಣವನ್ನು ಮೇ 15 ರಂದು ರೈತರ ಖಾತೆಗೆ ಜಮಾ ಮಾಡಲಾಗಿತ್ತು. ಆದರೆ ಈ ಬಾರಿ ಮೇ 31 ರೊಳಗೆ ಕಂತು ಬರುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.

ಆದ್ದರಿಂದ, ಅರ್ಹ ರೈತರು ಕೆಲವೇ ದಿನಗಳಲ್ಲಿ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಬಹುದು. ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳಲ್ಲಿ 2000 ರೂ. ಸ್ವೀಕರಿಸಲು ತಮ್ಮ ಇ-ಕೆವೈಸಿ ಪೂರ್ಣಗೊಳಿಸಿರಬೇಕು ಎಂಬುದನ್ನು ಗಮನಿಸಬೇಕು.

ಪಿಎಂ ಕಿಸಾನ್ ಯೋಜನೆಯಡಿ 10 ನೇ ಕಂತನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 1, 2022 ರಂದು ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ : Bumper Offer: ಹೊಸ ಕಾರು ಖರೀದಿಸುವವರಿಗೆ ಭರ್ಜರಿ ರಿಯಾಯತಿ ಘೋಷಿಸಿದ ಹೋಂಡಾ!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News