PM Kisan: ದೇಶಾದ್ಯಂತದ ರೈತರಿಗೆ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸರ್ಕಾರ

PM Kisan 11th Installment: e -KYC ಪ್ರಕ್ರಿಯೆಯನ್ನು ಪೂರ್ಣಗಳಿಸಿದ ನಂತರವೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಯೋಜನೆಯ 11ನೇ  ಕಾಂತಿನ ಹಣ ಸಿಗಲಿದೆ. ಹೀಗಿರುವಾಗ ಕೇಂದ್ರ ಸರ್ಕಾರ e-KYC ಮಾಡಿಸಲು ಈ ಮೊದಲು ವಿಧಿಸಿದ್ದ ಗಡುವನ್ನು ವಿಸ್ತರಿಸಿದೆ. 

Written by - Nitin Tabib | Last Updated : May 21, 2022, 04:39 PM IST
  • ಪಿಎಂ ಕಿಸಾನ್ ಫಲಾನುಭವಿಗಳಿಗೊಂದು ಮಹತ್ವದ ಮಾಹಿತಿ
  • ಇ-ಕೆವೈಸಿ ಮಾಡಿಸುವ ಗಡುವು ವಿಸ್ತರಣೆ
  • ಹೊಸ ಗಡುವು ತಿಳಿದುಕೊಳ್ಳಲು ವರದಿಯನ್ನೊಮ್ಮೆ ಓದಿ
PM Kisan: ದೇಶಾದ್ಯಂತದ ರೈತರಿಗೆ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸರ್ಕಾರ title=
PM Kisan Yojana

PM Kisan Scheme: ಪಿಎಂ ಕಿಸಾನ್ ಯೋಜನೆ (ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ) ಅಡಿಯಲ್ಲಿ ಶೀಘ್ರದಲ್ಲಿಯೇ ರೈತರಿಗೆ 11 ನೇ ಕಂತಿನ ಹಣ ಸಿಗಲಿದೆ. ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತನ್ನು ಪ್ರಧಾನಿಯವರು ಮೇ 31 ರಂದು ಘೋಷಿಸಲಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. ಆದರೆ 11ನೇ  ಕಂತಿನ ಹಣಕ್ಕಾಗಿ  ರೈತರು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಲಿದೆ. 

ಕೇಂದ್ರ ಸರ್ಕಾರದ ಘೋಷಣೆ
ಯೋಜನೆಯ ಪ್ರಯೋಜನಗಳನ್ನು ಪಡೆಯಲು ಕೇಂದ್ರ ಸರ್ಕಾರವು ಇದೀಗ ಕಡ್ಡಾಯ eKYC ಗಡುವನ್ನು ವಿಸ್ತರಿಸಿದೆ. ಮೊದಲು ಇದರ ಕೊನೆಯ ದಿನಾಂಕ 22 ಮೇ 2022 ಆಗಿತ್ತು. ಈ ಮಾಹಿತಿಯನ್ನು ಪಿಎಂ ಕಿಸಾನ್ ಪೋರ್ಟಲ್ (pmkisan.gov.in) ನಲ್ಲಿ ನೀಡಲಾಗಿದೆ. ಮಾಹಿತಿಯ ಪ್ರಕಾರ, ಇದೀಗ eKYC ಅನ್ನು ಮೇ 31, 2022 ರವರೆಗೆ ಪೂರ್ಣಗೊಳಿಸಬಹುದಾಗಿದೆ. ಮೇ 22 ರ ಮೊದಲು, ಅದರ ಗಡುವು ಮಾರ್ಚ್ 31, 2022 ಆಗಿತ್ತು.

ಇ-ಕೆವೈಸಿ ಇಲ್ಲದೆ ಹಣ ಖಾತೆಗೆ ಬರುವುದಿಲ್ಲ
ಇ-ಕೆವೈಸಿ ಇಲ್ಲದೆ ನಿಮ್ಮ ಕಂತು ಸೀಳುಕಿಕೊಳ್ಳುವ ಸಾಧ್ಯತೆ ಇದೆ. ಶೀಘ್ರದಲ್ಲೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ನೇ ಕಂತು ಕೂಡ ಬಿಡುಗಡೆಯಾಗಲಿದೆ. ಆಧಾರ್ ಆಧಾರಿತ OTP ದೃಢೀಕರಣಕ್ಕಾಗಿ, ರೈತರು ಕಿಸಾನ್ ಕಾರ್ನರ್‌ನಲ್ಲಿ ಇ-ಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗಲಿದೆ ಎಂದು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ತಿಳಿಸಲಾಗಿದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ರೈತರು ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಬೇಕು. ನಿಮ್ಮ ಮೊಬೈಲ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಿಂದಲೂ ನೀವು ಮನೆಯಲ್ಲಿ ಕುಳಿತು ಈ ಕೆಲಸವನ್ನು ಮಾಡಬಹುದು.

ಪ್ರಕ್ರಿಯೆ ಇಲ್ಲಿದೆ
1. ಆಧಾರ್ ಆಧಾರಿತ OTP ದೃಢೀಕರಣಕ್ಕಾಗಿ ಫಾರ್ಮರ್ಸ ಕಾರ್ನರ್ ನಲ್ಲಿ 'EKYC' ಆಯ್ಕೆಯನ್ನು ಕ್ಲಿಕ್ ಮಾಡಬೇಕು. 
2. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹತ್ತಿರದ CSC ಕೇಂದ್ರವನ್ನು ಸಂಪರ್ಕಿಸಬೇಕು.
3. ನಿಮ್ಮ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಸಹಾಯದಿಂದ ನೀವು ಅದನ್ನು ಮನೆಯಲ್ಲಿಯೇ ಕುಳಿತು ಪೂರ್ಣಗೊಳಿಸಬಹುದು.
4. ಇದಕ್ಕಾಗಿ, ನೀವು ಮೊದಲು https://pmkisan.gov.in/ ಪೋರ್ಟಲ್‌ಗೆ ಹೋಗಿ.
5. ಬಲಭಾಗದಲ್ಲಿ ನೀವು ಈ ಕುರಿತಾದ ಟ್ಯಾಬ್ಗಳನ್ನು ಕಾಣಬಹುದು. ಮೇಲ್ಭಾಗದಲ್ಲಿ ನೀವು ಇ-ಕೆವೈಸಿ ಬರೆದಿರುವುದನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ-Vegetable Price: ತರಕಾರಿ ಬೆಲೆಯಲ್ಲಿ ಭಾರೀ ಏರಿಳಿತ: ಟೊಮ್ಯಾಟೋ ದರ ಎಷ್ಟು ಗೊತ್ತಾ?

ಇದರ ಹೊರತಾಗಿ, ನಿಮ್ಮ ಕಂತಿನ ಸ್ಥಿತಿಯನ್ನು ನೀವು ಸುಲಭವಾಗಿ ಪರಿಶೀಲಿಸಬಹುದು. ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ.

ಇದನ್ನೂ ಓದಿ-Gold-Sliver Price: ಗ್ರಾಹಕರಿಗೆ ಸಿಹಿ-ಕಹಿ ಸುದ್ದಿ: ಇಂದಿನ ಚಿನ್ನ ಬೆಳ್ಳಿ ದರ ಗಮನಿಸಿ

ನಿಮ್ಮ ಕಂತಿನ  ಸ್ಥಿತಿಯನ್ನು ಈ ರೀತಿ ಪರಿಶೀಲಿಸಿ
1. ಇದಕ್ಕಾಗಿ, ನೀವು ಮೊದಲು PM ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಭೇಟಿ ನೀಡಿ.
2. ಈಗ ಅದರ ಮುಖಪುಟದಲ್ಲಿ ನೀವು ರೈತರ ಕಾರ್ನರ್ ಆಯ್ಕೆಯನ್ನು ಗಮಣಿಸುವಿರಿ.
3. ರೈತರ ಕಾರ್ನರ್ ವಿಭಾಗದಲ್ಲಿ, ಫಲಾನುಭವಿಗಳ ಪಟ್ಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಈಗ ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
5. ಇದರ ನಂತರ ನೀವು 'Get Report' ಮೇಲೆ ಕ್ಲಿಕ್ ಮಾಡಿ.
6. ಇದರ ನಂತರ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸಿಕೊಳ್ಳಲಿದೆ, ಅದರಲ್ಲಿ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News