ನವದೆಹಲಿ: SBI Alert- ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಬ್ಯಾಂಕಿಂಗ್ ಕೆಲಸಗಳನ್ನು ಚಿಟಿಕೆ ಹೊಡೆಯುವುದರಲ್ಲಿ ಮಾಡಬಹುದು. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯು ಬ್ಯಾಂಕ್ ಮತ್ತು ಗ್ರಾಹಕರ ಕೆಲಸವನ್ನು ಬಹಳ ಸುಲಭಗೊಳಿಸಿದೆ. ಮನೆಯಲ್ಲಿರಲಿ, ಕಚೇರಿಯಲ್ಲಿರಲಿ ಅಥವಾ ಎಲ್ಲೇ ಇದ್ದರೂ ನೀವು ಅನೇಕ ಬ್ಯಾಂಕ್ ಕೆಲಸಗಳನ್ನು ಆನ್‌ಲೈನ್‌ನಲ್ಲಿ ಭಲ್ ಸುಲಭವಾಗಿ ಮಾಡಬಹುದು. ಆದರೆ ಈ ಡಿಜಿಟಲ್ ವ್ಯವಸ್ಥೆಯು ಕೆಲವೊಮ್ಮೆ ನಿಮ್ಮನ್ನು ಮೋಸದ ಜಾಲದಲ್ಲಿ ಸಿಲುಕಿಸಬಹುದು. ಸ್ವಲ್ಪ ಅಜಾಗರೂಕತೆಯು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು ಮತ್ತು ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳಬಹುದು.
ಕೋಟ್ಯಂತರ ಗ್ರಾಹಕರಿಗೆ ಎಸ್‌ಬಿಐ ಎಚ್ಚರಿಕೆ ನೀಡಿದೆ:
ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಆನ್‌ಲೈನ್ ಬ್ಯಾಂಕ್ ವಂಚನೆಗೆ (Online Banking Fraud) ಸಂಬಂಧಿಸಿದಂತೆ ಕಾಲಕಾಲಕ್ಕೆ ತನ್ನ ಗ್ರಾಹಕರಿಗೆ ಎಚ್ಚರಿಕೆಗಳನ್ನು ನೀಡುತ್ತಲೇ ಇರುತ್ತದೆ. ಎಸ್‌ಬಿಐ ಮತ್ತೊಮ್ಮೆ ತನ್ನ ಕೋಟ್ಯಂತರ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಎಸ್‌ಬಿಐ ತನ್ನ ಗ್ರಾಹಕರಿಗೆ ಉಡುಗೊರೆಗಳೊಂದಿಗೆ ಆಮಿಷವೊಡ್ಡುವ ಲಿಂಕ್‌ಗಳಿಂದ ದೂರವಿರುವಂತೆ ಎಚ್ಚರಿಸಿದೆ. ಇದರಲ್ಲಿ ಎಸ್‌ಬಿಐ ನಿಮಗೆ ಉಚಿತ ಉಡುಗೊರೆಗಳನ್ನು ನೀಡುತ್ತಿದೆ ಎಂದು ಹೇಳಲಾಗಿದೆ. ಅಂತಹ ಲಿಂಕ್‌ಗಳನ್ನು ಮರೆತೂ ಕೂಡ ತೆರೆಯಬೇಡಿ ಎಂದು ಎಸ್‌ಬಿಐ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ - SBI ಡೆಬಿಟ್ ಕಾರ್ಡ್ EMI ಸೌಲಭ್ಯದ ಬಗ್ಗೆ ತಿಳಿದಿದೆಯಾ? ಗ್ರಾಹಕರಿಗೆ ಸಿಗಲಿದೆ ಭಾರೀ ಲಾಭ
ಉಡುಗೊರೆ ಅಥವಾ ಲಾಟರಿ ಯೋಜನೆಯ ಬಗ್ಗೆ ಇರಲಿ ಎಚ್ಚರ: ಎಸ್‌ಬಿಐ
ಇಂತಹ ಲಿಂಕ್‌ಗಳಿಗೆ ಸಂಬಂಧಿಸಿದಂತೆ ಎಸ್‌ಬಿಐ (SBI) ಟ್ವಿಟರ್‌ನಲ್ಲಿ ಎಚ್ಚರಿಕೆ ನೀಡಿದೆ. ಅಂತಹ ಯಾವುದೇ ಉಡುಗೊರೆ / ಲಾಟರಿ ಯೋಜನೆಯನ್ನು ನಾವು ನಡೆಸುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ. ನಿಮ್ಮ ಇನ್‌ಬಾಕ್ಸ್‌ನಲ್ಲಿ ನೀವು ಅಂತಹ ಲಿಂಕ್‌ಗಳನ್ನು ಪಡೆದರೆ, ಅಂತಹ ಫಿಶಿಂಗ್ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರಿಂದ ನಿಮ್ಮ ವೈಯಕ್ತಿಕ ಮತ್ತು ರಹಸ್ಯ ಮಾಹಿತಿಯನ್ನು ಕದಿಯಬಹುದು ಎಂದು ಎಸ್‌ಬಿಐ ಹೇಳಿದೆ. ಆದ್ದರಿಂದ ಜಾಗರೂಕರಾಗಿರಿ ಮತ್ತು ಅಂತಹ ಲಿಂಕ್ ಕ್ಲಿಕ್ ಮಾಡುವ ಮೊದಲು ಯೋಚಿಸಿ ಎಂದು ಗ್ರಾಹಕರಿಗೆ ಸೂಚಿಸಿದೆ.
ಇದನ್ನೂ ಓದಿ- SBI Debit Card PIN: ಕುಳಿತಲ್ಲೇ ಜನರೇಟ್ ಮಾಡಬಹುದು ಎಸ್ ಬಿಐ ಡೆಬಿಟ್ ಕಾರ್ಡ್ ಪಿನ್
ಒಂದು ಕ್ಲಿಕ್ ನಲ್ಲಿ ಖಾತೆ ಖಾಲಿಯಾಗುತ್ತೆ:
ಉಚಿತ ಉಡುಗೊರೆಯ ವಿಷಯದಲ್ಲಿ ನೀವು ಅಂತಹ ಯಾವುದೇ ಫಿಶಿಂಗ್ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಅದು ನಿಮ್ಮನ್ನು ಮತ್ತೊಂದು ಪುಟಕ್ಕೆ ಕರೆದೊಯ್ಯುತ್ತದೆ, ಅಲ್ಲಿ ಅದು ನಿಮ್ಮ ವೈಯಕ್ತಿಕ ಮತ್ತು ಇತರ ಪ್ರಮುಖ ಮಾಹಿತಿಯನ್ನು ನಿಮ್ಮಿಂದ ತೆಗೆದುಕೊಳ್ಳುತ್ತದೆ ಮತ್ತು ನೀವು ವಂಚನೆಗೆ ಬಲಿಪಶುವಾಗುತ್ತೀರಿ. ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ ಯಾವುದೇ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳದಂತೆ ನಾವು ನಿಮಗೆ ಸಲಹೆ ನೀಡುತ್ತೇವೆ ಎಂದು ಎಸ್‌ಬಿಐ ಹೇಳಿದೆ. ಅಂತಹ ಯಾವುದೇ ವಂಚನೆಯನ್ನು ಸಂಬಂಧಪಟ್ಟ ಏಜೆನ್ಸಿಗೆ ವರದಿ ಮಾಡುವಂತೆ ತಿಳಿಸಲಾಗಿದೆ.
Are you receiving these links in your inbox? Steer Clear! Clicking on these phishing links could lead to loss of your personal and confidential information. Stay alert. Think before you click!#ThinkBeforeYouClick #StayAlert #StaySafe #CyberSafety pic.twitter.com/URZcURvECl
— State Bank of India (@TheOfficialSBI) June 17, 2021
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.