SBI FD Rate Hike: ದೀಪಾವಳಿ ಹಬಕ್ಕೂ ಮೊದಲು SBI ಗ್ರಾಹಕರಿಗೆ ದೊಡ್ಡ ಉಡುಗೊರೆ..!

ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಸ್ಥಿರ ಠೇವಣಿ ಯೋಜನೆಯ ಬಡ್ಡಿದರಗಳನ್ನು ಹೆಚ್ಚಿಸಲು ನಿರ್ಧರಿಸಿದೆ. 7 ದಿನಗಳಿಂದ 10 ವರ್ಷಗಳವರೆಗಿನ FDಗಳ ಮೇಲೆ ಹೆಚ್ಚಿನ ಬಡ್ಡಿ ನೀಡಲು ಬ್ಯಾಂಕ್ ನಿರ್ಧರಿಸಿದೆ.  

Written by - Puttaraj K Alur | Last Updated : Oct 16, 2022, 09:46 AM IST
  • ದೀಪಾವಳಿ ಹಬ್ಬಕ್ಕೂ ಮುನ್ನ ಗ್ರಾಹಕರಿಗೆ ಎಸ್‍ಬಿಐ ಭರ್ಜರಿ ಗಿಫ್ಟ್ ನೀಡಿದೆ
  • ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐನಿಂದ ಕೋಟ್ಯಂತರ ಗ್ರಾಹಕರಿಗೆ ಸಿಹಿಸುದ್ದಿ
  • ಎಸ್‌ಬಿಐ ಬ್ಯಾಂಕ್ ಸ್ಥಿರ ಠೇವಣಿಗಳ ಬಡ್ಡಿ ದರವನ್ನು ಶೇ.0.20ರಷ್ಟು ಹೆಚ್ಚಿಸಿದೆ
SBI FD Rate Hike: ದೀಪಾವಳಿ ಹಬಕ್ಕೂ ಮೊದಲು SBI ಗ್ರಾಹಕರಿಗೆ ದೊಡ್ಡ ಉಡುಗೊರೆ..! title=
ಗ್ರಾಹಕರಿಗೆ ಎಸ್‍ಬಿಐ ಭರ್ಜರಿ ಗಿಫ್ಟ್!

ನವದೆಹಲಿ: ದೀಪಾವಳಿಗೂ ಮುನ್ನ ಗ್ರಾಹಕರಿಗೆ ಎಸ್‍ಬಿಐ ಭರ್ಜರಿ ಗಿಫ್ಟ್ ನೀಡಿದೆ. ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಕೋಟ್ಯಂತರ ಜನರಿಗೆ ಈ ಪ್ರಯೋಜನ ಸಿಗಲಿದೆ. ಎಸ್‌ಬಿಐ ಸ್ಥಿರ ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸಿದ್ದು, ಶೇ.0.20ರಷ್ಟು ಹೆಚ್ಚಳ ಮಾಡಲಾಗಿದೆ.

ಬಡ್ಡಿದರಗಳಲ್ಲಿ ಬಂಪರ್ ಏರಿಕೆ   

ಎಸ್‌ಬಿಐ ತನ್ನ ಎಫ್‌ಡಿ ದರಗಳಲ್ಲಿ ಹೆಚ್ಚಳ ಮಾಡುವುದಾಗಿ ಪ್ರಕಟಿಸಿದೆ. ಅಕ್ಟೋಬರ್ 15ರಿಂದಲೇ ಬ್ಯಾಂಕ್ ಹೆಚ್ಚಿದ ಬಡ್ಡಿ ದರಗಳನ್ನು ಜಾರಿಗೆ ತಂದಿದೆ. ಇತ್ತೀಚಿನ ಬಡ್ಡಿ ದರಗಳನ್ನು ತಿಳಿಯಿರಿ.

ಸಿಹಿಸುದ್ದಿ ನೀಡಿದ ಬ್ಯಾಂಕ್

ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ, 2 ಕೋಟಿಗಿಂತ ಕಡಿಮೆ ಎಫ್‌ಡಿ ಮೇಲಿನ ಬಡ್ಡಿ ದರಗಳನ್ನು ಬದಲಾಯಿಸಿದೆ. 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯ FDಗಳ ಮೇಲೆ ಬ್ಯಾಂಕ್ ಹೆಚ್ಚಿನ ಬಡ್ಡಿ ನೀಡುತ್ತಿದೆ. ಬ್ಯಾಂಕ್‌ನ ಈ ನಿರ್ಧಾರದಿಂದ ಗ್ರಾಹಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ, ಏಕೆಂದರೆ ದೇಶದ ಕೋಟ್ಯಂತರ ಗ್ರಾಹಕರು ಎಸ್‌ಬಿಐ ಜೊತೆ ಸಂಪರ್ಕ ಹೊಂದಿದ್ದಾರೆ.

ಇದನ್ನೂ ಓದಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ! ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು..?

SBIನ ಹೊಸ ಬಡ್ಡಿದರ ತಿಳಿಯಿರಿ

  1. 7 ದಿನಗಳಿಂದ 45 ದಿನಗಳ FDಗಳಲ್ಲಿ ಸಾಮಾನ್ಯ ಗ್ರಾಹಕರು ಶೇ.3ರಷ್ಟು ಬಡ್ಡಿಯನ್ನು ಪಡೆಯುತ್ತಾರೆ.
  2. ಸಾಮಾನ್ಯ ಗ್ರಾಹಕರು 46 ದಿನಗಳಿಂದ 179 ದಿನಗಳ FD ಮೇಲೆ ಶೇ.4ರಷ್ಟು ಬಡ್ಡಿಯನ್ನು ಪಡೆಯುತ್ತಾರೆ.
  3. 180 ದಿನಗಳಿಂದ 210 ದಿನಗಳವರೆಗೆ FDಗಳ ಮೇಲೆ ಸಾಮಾನ್ಯ ಗ್ರಾಹಕರು ಶೇ.4.65ರಷ್ಟು ಬಡ್ಡಿಯನ್ನು ಪಡೆಯುತ್ತಾರೆ.
  4. 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ FDಗಳ ಮೇಲೆ ಸಾಮಾನ್ಯ ಗ್ರಾಹಕರು ಶೇ.4.70ರಷ್ಟು ಬಡ್ಡಿಯನ್ನು ಪಡೆಯುತ್ತಾರೆ.
  5. 1 ವರ್ಷದಿಂದ 2 ವರ್ಷದೊಳಗಿನ ಎಫ್‌ಡಿಗಳಿಗೆ ಸಾಮಾನ್ಯ ಗ್ರಾಹಕರು ಶೇ.5.60ರಷ್ಟು ಬಡ್ಡಿಯನ್ನು ಪಡೆಯುತ್ತಾರೆ.
  6. 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ FDಗಳಿಗೆ ಸಾಮಾನ್ಯ ಗ್ರಾಹಕರು ಶೇ.5.65ರಷ್ಟು ಬಡ್ಡಿಯನ್ನು ಪಡೆಯುತ್ತಾರೆ.
  7. 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಯ FDಗಳ ಮೇಲೆ ಸಾಮಾನ್ಯ ಗ್ರಾಹಕರು ಶೇ.5.80ರಷ್ಟು ಬಡ್ಡಿಯನ್ನು ಪಡೆಯುತ್ತಾರೆ.
  8. ಸಾಮಾನ್ಯ ಗ್ರಾಹಕರು 5 ವರ್ಷದಿಂದ 10 ವರ್ಷಗಳವರೆಗೆ FD ಮೇಲೆ ಶೇ.5.85ರಷ್ಟು ಬಡ್ಡಿಯನ್ನು ಪಡೆಯುತ್ತಾರೆ. ಅದೇ ರೀತಿ ಹಿರಿಯ ನಾಗರಿಕರು ಗರಿಷ್ಠ ಶೇ.6.65ರಷ್ಟು ಬಡ್ಡಿದರವನ್ನು ಪಡೆಯುತ್ತಾರೆ.

ಇದನ್ನೂ ಓದಿ: Flipkart Diwali Sale : Flipkart ಬಂಪರ್ ಡಿಸ್ಕೌಂಟ್! ಬರೀ ₹28 ಸಾವಿರಕ್ಕೆ ಸಿಗಲಿದೆ iPhone 13

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News