Ration Cardholder: ದೇಶದ ಕೋಟ್ಯಾಂತರ ಪಡಿತರ ಚೀಟಿ ಧಾರಕರಿಗೊಂದು ಸಂತಸದ ಸುದ್ದಿ

Free Ration Scheme: ಉಚಿತ ಪಡಿತರ ಚೀಟಿದಾರರಿಗೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಮಹತ್ವದ ಘೋಷಣೆ ಮಾಡಿದೆ. ಈ ಬಾರಿಯ ದೀಪಾವಳಿಯಂದು ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಸಕ್ಕರೆ ಬೆಲೆಯನ್ನು ಕಡಿಮೆ ಮಾಡಲು ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.  

Written by - Nitin Tabib | Last Updated : Oct 15, 2022, 07:47 PM IST
  • ಪಡಿತರ ಚೀಟಿದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ.
  • ನೀವು ಸಹ ಪಡಿತರ ಚೀಟಿ ಹೊಂದಿದ್ದರೆ,
  • ನಿಮ್ಮ ದೀಪಾವಳಿ ಈ ಬಾರಿ ಬಂಬಾಟಾಗಿರಲಿದೆ.
Ration Cardholder: ದೇಶದ ಕೋಟ್ಯಾಂತರ ಪಡಿತರ ಚೀಟಿ ಧಾರಕರಿಗೊಂದು ಸಂತಸದ ಸುದ್ದಿ title=
Ration Cardholders

Ration Card Update: ಪಡಿತರ ಚೀಟಿದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ನೀವು ಸಹ ಪಡಿತರ ಚೀಟಿ ಹೊಂದಿದ್ದರೆ,  ನಿಮ್ಮ ದೀಪಾವಳಿ ಈ ಬಾರಿ ಬಂಬಾಟಾಗಿರಲಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಉಚಿತ ಪಡಿತರ ಯೋಜನೆಯನ್ನು ಡಿಸೆಂಬರ್ ವರೆಗೆ ವಿಸ್ತರಿಸಿದೆ. ಇದಾದ ಬಳಿಕ ರಾಜ್ಯ ಸರ್ಕಾರಗಳು ಕೂಡ ಕಾರ್ಡ್‌ದಾರರಿಗೆ ಘೋಷಣೆಗಳನ್ನು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಕ್ಕರೆ ಬೆಲೆ ಇಳಿಕೆಯ ಮಹತ್ವದ ನಿರ್ಧಾರ ಕೈಗೊಂಡಿದೆ. ಅಷ್ಟೇ ಅಲ್ಲ 100 ರೂಪಾಯಿಗೆ ದಿನಸಿ ಸಾಮಾನುಗಳು ಕೂಡ ಸಿಗಲಿವೆ. ಈ ಕುರಿತಾದ ಇತ್ತೀಚಿನ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ, 

ಇದನ್ನೂ ಓದಿ-PM Kisan Update: ಸ್ಥಗಿತಗೊಳ್ಳಲಿದೆಯಾ ಪಿಎಂ ಕಿಸಾನ್ ಯೋಜನೆ? ಸರ್ಕಾರ ಹೇಳಿದ್ದೇನು?

ಈಗ ನೀವು ಸಕ್ಕರೆಗಾಗಿ ಎಷ್ಟು ಹಣ ಪಾವತಿಸಬೇಕು ತಿಳಿಯೋಣ
ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಸಕ್ಕರೆ ಬೆಲೆಯನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ. ಈ ಘೋಷಣೆಯ ಬಳಿಕ ಪ್ರತಿ ಕೆ.ಜಿ ನೀವು ಕೇವಲ ಕೇವಲ 20 ರೂ ಪಾವತಿಸಬೇಕಾಗಲಿದೆ. ಸರ್ಕಾರದ ಈ ಘೋಷಣೆಯ ಲಾಭ ಅಂತ್ಯೋದಯ ಕಾರ್ಡ್ ಧಾರಕರಿಗೆ ಸಿಗಲಿದೆ. ಸರ್ಕಾರದ ಈ ಘೋಷಣೆಯಿಂದ ಕಾರ್ಡ್ ಧಾರಕರಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದ ಮುಕ್ತಿ ಸಿಗಲಿದೆ. ಹಬ್ಬ ಹರಿದಿನಗಳಲ್ಲಿ ಸರ್ಕಾರ ನೀಡುತ್ತಿರುವ ಉಚಿತ ಪಡಿತರ ಸೌಲಭ್ಯದಿಂದ ಜನರು ಸಂತಸಗೊಂಡಿದ್ದು, ಈ ಘೋಷಣೆಯಿಂದ ಸರ್ಕಾರ ಮತ್ತೊಮ್ಮೆ ಜನರ ಮನ ಗೆದ್ದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ-Top Selling MPV: ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಸೃಷ್ಟಿಸಿದ 3 ಬಹು ಉದ್ದೇಶಿತ ಕಾರುಗಳು, ಮತ್ತೆ ನಂ.1 ಪಟ್ಟಕ್ಕೇರಿದೆ ಈ ಕಾರು

ಮಹಾರಾಷ್ಟ್ರ ಸರ್ಕಾರ ಘೋಶಿಸಿದ್ದೇನು?
ಕೇಂದ್ರ ಸರ್ಕಾರದ ಘೋಷಣೆಗಳ ಜತೆಗೆ ಇದೀಗ ರಾಜ್ಯ ಸರ್ಕಾರಗಳೂ ಕೂಡ ನಾಗರಿಕರಿಗೆ ಇದೀಗ ದೀಪಾವಳಿ ಉಡುಗೊರೆ ನೀಡುತ್ತಿವೆ. ಹಬ್ಬದ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರವು ಪಡಿತರ ಚೀಟಿದಾರರಿಗೆ ವಿಶೇಷ ಘೋಷಣೆ ಮಾಡಿದೆ. ಇದರ ಅಡಿಯಲ್ಲಿ ಸರಕಾರ ನಾಗರಿಕರಿಗೆ ಕೇವಲ 100 ರೂ.ಗೆ ದಿನಸಿ ನೀಡುತ್ತಿದೆ. ಇದರಲ್ಲಿ ಒಂದು ಕೆ.ಜಿ ರವೆ (ರವೆ), ಖಾದ್ಯ ಎಣ್ಣೆ, ಹಳದಿ ಉದ್ದಿನಬೇಳೆ ಮತ್ತು ಶೇಂಗಾ ಇರಲಿದೆ. ಅದೂ ಕೇವಲ ರೂ.100 ರೂ.ಗೆ ಮಾತ್ರ ಸಿಗಲಿದೆ. ಕೇಂದ್ರ ಸರ್ಕಾರದ ಉಚಿತ ಪಡಿತರ ಯೋಜನೆಯನ್ನು ಡಿಸೆಂಬರ್ ವರೆಗೆ ವಿಸ್ತರಿಸಿರುವುದರಿಂದ ದೇಶಾದ್ಯಂತ ಪಡಿತರ ಚೀಟಿಧಾರಕರಲ್ಲಿ ಭಾರಿ ಸಂತಸದ ಅಲೆ ಇದೆ. ಮಹಾರಾಷ್ಟ್ರ ಸರ್ಕಾರದ ಈ ಘೋಷಣೆ ರಾಜ್ಯದ ಪಡಿತರ ಚೀಟಿದಾರರ ದೀಪಾವಳಿಯ ಉತ್ಸಾಹವನ್ನು ಇನ್ನಷ್ಟು ಬೆಳಗಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News