SmilePay: ಕ್ಯಾಶ್, ಕಾರ್ಡ್, ಮೊಬೈಲ್‌ ಬೇಕಿಲ್ಲ.. ಒಂದು ಸ್ಮೈಲ್‌ ಸಾಕು ಹಣ ಪಾವತಿಸಲು !

SmilePay: ಇದರೊಂದಿಗೆ ಗ್ರಾಹಕರು ಕೇವಲ ಕ್ಯಾಮರಾದಲ್ಲಿ ನಗುವ ಮೂಲಕ ಹಣ ಪಾವತಿಸಲು ಸಾಧ್ಯವಾಗುತ್ತದೆ. ಈ ವಹಿವಾಟಿಗೆ ನಿಮಗೆ ಕ್ಯಾಶ್, ಕಾರ್ಡ್ ಅಥವಾ ಮೊಬೈಲ್ ಅಗತ್ಯವಿಲ್ಲ.

Written by - Chetana Devarmani | Last Updated : Sep 1, 2024, 09:44 AM IST
  • SmilePay ನ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು
  • ಸ್ಮೈಲ್ ಪೇ‌ ಪ್ರಾಯೋಗಿಕ ಯೋಜನೆಯಾಗಿ ಆರಂಭ
  • ಸ್ಮೈಲ್ ಪೇ ಮೂಲಕ ಹೇಗೆ ಪೇಮೆಂಟ್‌ ಮಾಡುವುದು?
SmilePay: ಕ್ಯಾಶ್, ಕಾರ್ಡ್, ಮೊಬೈಲ್‌ ಬೇಕಿಲ್ಲ.. ಒಂದು ಸ್ಮೈಲ್‌ ಸಾಕು ಹಣ ಪಾವತಿಸಲು ! title=

How to use SmilePay: ನಿಮ್ಮ ಬ್ಯಾಂಕ್ ಖಾತೆಯು ಫೆಡರಲ್ ಬ್ಯಾಂಕ್‌ನಲ್ಲಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಹೌದು, ಖಾಸಗಿ ವಲಯದ ಬ್ಯಾಂಕ್ ಫೆಡರಲ್ ಬ್ಯಾಂಕ್ ಸ್ಮೈಲ್ ಪೇ ಹೆಸರಿನ ಪೇಮೆಂಟ್ ವ್ಯವಸ್ಥೆಯನ್ನು ಆರಂಭಿಸಿದೆ. ಇದರೊಂದಿಗೆ ಗ್ರಾಹಕರು ಕೇವಲ ಕ್ಯಾಮರಾದಲ್ಲಿ ನಗುವ ಮೂಲಕ ಹಣ ಪಾವತಿಸಲು ಸಾಧ್ಯವಾಗುತ್ತದೆ. ಈ ವಹಿವಾಟಿಗೆ ನಿಮಗೆ ಕ್ಯಾಶ್, ಕಾರ್ಡ್ ಅಥವಾ ಮೊಬೈಲ್ ಅಗತ್ಯವಿಲ್ಲ. ರಿಲಯನ್ಸ್ ರಿಟೇಲ್ ಮತ್ತು ಅನನ್ಯಾ ಬಿರ್ಲಾ ಅವರ ಸ್ವತಂತ್ರ ಮೈಕ್ರೋ ಫೈನಾನ್ಸ್ ಮೂಲಕ ಕೆಲವು ಆಯ್ದ ಶಾಖೆಗಳಲ್ಲಿ ಇದರ ಬಳಕೆ ಪ್ರಾರಂಭವಾಗಿದೆ.

ಸ್ಮೈಲ್ ಪೇ‌ ಪ್ರಾಯೋಗಿಕ ಯೋಜನೆಯಾಗಿ ಆರಂಭ :

ಇದೀಗ ಈ ಸೌಲಭ್ಯವನ್ನು ಪ್ರಾಯೋಗಿಕ ಯೋಜನೆಯಾಗಿ ಆರಂಭಿಸಲಾಗಿದೆ. 'ಭೀಮ್ ಆಧಾರ್ ಪೇ' ಆಧಾರಿತ ಈ ವ್ಯವಸ್ಥೆಯಲ್ಲಿ, ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಖಾತೆಯಿಂದ ಹಣವನ್ನು ವರ್ಗಾಯಿಸಲು ಬಯೋಮೆಟ್ರಿಕ್ ಡೇಟಾವನ್ನು ಬಳಸಲಾಗುತ್ತದೆ. ಈ ವ್ಯವಸ್ಥೆಯ ಬಗ್ಗೆ ನೀಡಿರುವ ಮಾಹಿತಿಯಲ್ಲಿ, ಇದಕ್ಕಾಗಿ ಸಂಪೂರ್ಣ ಸುರಕ್ಷಿತ ಫೇಸ್‌ ರೆಕಗ್ನೇಷನ್ ವ್ಯವಸ್ಥೆಯನ್ನು UIDAI ಬಳಸುತ್ತದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಹೆಣ್ಣು ಮಕ್ಕಳ ಪೋಷಕರೇ ತಿಳಿದುಕೊಳ್ಳಿ !ಅಕ್ಟೋಬರ್ 1 ರಿಂದ ಸುಕನ್ಯ ಸಮೃದ್ದಿಗೆ ಹೊಸ ನಿಯಮ !ಶೂನ್ಯವಾಗುವುದು ಬಡ್ಡಿ

ಸ್ಮೈಲ್ ಪೇ ಎಂದರೇನು?

ಫೆಡರಲ್ ಬ್ಯಾಂಕ್ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಸ್ಮೈಲ್ ಪೇ ದೇಶದ ಮೊದಲ ವಿಶೇಷ ರೀತಿಯ ಪಾವತಿ ವ್ಯವಸ್ಥೆಯಾಗಿದೆ. ಇದು UIDAI ನ BHIM ಆಧಾರ್ ಪೇ ಮೇಲೆ ನಿರ್ಮಿಸಲಾದ ಅಪ್‌ಡೇಟೆಡ್‌ ಫೇಸ್‌ ರೆಕಗ್ನೇಷನ್ ತಂತ್ರಜ್ಞಾನವನ್ನು ಬಳಸುತ್ತದೆ. SmilePay ಬಳಕೆದಾರರು ತಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ಪೇಮೆಂಟ್ ಮಾಡಬಹುದು. ಈ ಸೌಲಭ್ಯವನ್ನು ಪ್ರಾರಂಭಿಸಿದ ನಂತರ ಗ್ರಾಹಕರು ಕಾರ್ಡ್ ಅಥವಾ ಮೊಬೈಲ್ ಇಲ್ಲದೆಯೂ ಪಾವತಿ ಮಾಡಲು ಸಾಧ್ಯವಾಗುತ್ತದೆ. 

ವಹಿವಾಟಿನ ಸಂಪೂರ್ಣ ಪ್ರಕ್ರಿಯೆಯು ಎರಡು ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ. ಫೆಡರಲ್ ಬ್ಯಾಂಕ್‌ನ ಸಿಡಿಒ, ಇಂದ್ರನಿಲ್ ಪಂಡಿತ್ ಈ ಬಗ್ಗೆ ತಿಳಿಸಿದ್ದಾರೆ. ನಗದು, ಕಾರ್ಡ್ ಮತ್ತು ಕ್ಯೂಆರ್ ಕೋಡ್ ಮೂಲಕ ಪಾವತಿ ಬಳಿಕ ಈಗ ನಗುವ ಮೂಲಕ ಪೇಮೆಂಟ್‌ ಮಾಡುವುದು ತುಂಬಾ ಆಸಕ್ತಿದಾಯಕವಾಗಿದೆ. ಜನರು ಇದನ್ನು ತುಂಬಾ ಇಷ್ಟಪಡುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

SmilePay ನ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

SmilePay ಮೂಲಕ ನೀವು ನಗದು, ಕಾರ್ಡ್‌ಗಳು ಅಥವಾ ಮೊಬೈಲ್ ಇಲ್ಲದೆಯೇ ನಿಮ್ಮ ವಹಿವಾಟುಗಳನ್ನು ಪೂರ್ಣಗೊಳಿಸಬಹುದು. ಈ ಸೌಲಭ್ಯದ ಪರಿಚಯವು ಕೌಂಟರ್‌ನಲ್ಲಿ ಜನಸಂದಣಿಯಿಂದ ಪರಿಹಾರವನ್ನು ನೀಡುತ್ತದೆ. UIDAI ಫೇಸ್‌ ರೆಕಗ್ನೇಷನ್ ಸೇವೆಯ ಆಧಾರದ ಮೇಲೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಹಿವಾಟುಗಳನ್ನು ಮಾಡಬಹುದು. ವಿಶೇಷವಾಗಿ ಫೆಡರಲ್ ಬ್ಯಾಂಕ್ ಗ್ರಾಹಕರಿಗೆ SmilePay ವೈಶಿಷ್ಟ್ಯವು ಲಭ್ಯವಿರುತ್ತದೆ. ಇದಕ್ಕೆ ವ್ಯಾಪಾರಿಗಳು ಮತ್ತು ಗ್ರಾಹಕರು ಇಬ್ಬರೂ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು. ಫೆಡರಲ್ ಬ್ಯಾಂಕ್ ಮುಂಬರುವ ಸಮಯದಲ್ಲಿ ಈ ಯೋಜನೆಯನ್ನು ವಿಸ್ತರಿಸಲು ಯೋಜಿಸುತ್ತಿದೆ.

ಇದನ್ನೂ ಓದಿ:  ದೇಶದ ಜನರಿಗೆ ಸಂತಸದ ಸುದ್ದಿ! ಸೆಪ್ಟೆಂಬರ್‌ 1 ರಿಂದ ಎಲ್‌ಪಿಜಿ ಸಿಲಿಂಡರ್‌, ಪೆಟ್ರೋಲ್‌, ಡಿಸೆಲ್‌ ಬೆಲೆಯಲ್ಲಿ ಭಾರಿ ಇಳಿಕೆ?

ಸ್ಮೈಲ್ ಪೇ ಮೂಲಕ ಹೇಗೆ ಪೇಮೆಂಟ್‌ ಮಾಡುವುದು?

ಫೆಡರಲ್ ಬ್ಯಾಂಕ್‌ ಖಾತೆ ಹೊಂದಿರುವ ಮಾಲೀಕನ ಅಂಗಡಿಗೆ ಭೇಟಿ ನೀಡುವ ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ಫೆಡ್ ಮರ್ಚೆಂಟ್ ಅಪ್ಲಿಕೇಶನ್ ಅನ್ನು ಇಟ್ಟುಕೊಳ್ಳಬೇಕು. ಬಿಲ್ ಪಾವತಿಸಬೇಕಾದಾಗ ಚೆಕ್‌ಔಟ್‌ನಲ್ಲಿ SmilePay ಆಯ್ಕೆಮಾಡಿ. ಅಂಗಡಿಯವನು ಗ್ರಾಹಕರ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ FED MERCHANT ಅಪ್ಲಿಕೇಶನ್‌ನಿಂದ ಪಾವತಿಯನ್ನು ಪ್ರಾರಂಭಿಸುತ್ತಾನೆ. ಅಂಗಡಿಯವನ ಮೊಬೈಲ್ ಕ್ಯಾಮರಾ ಗ್ರಾಹಕರ ಮುಖವನ್ನು ಸ್ಕ್ಯಾನ್ ಮಾಡುತ್ತದೆ ಮತ್ತು UIDAI ಸಿಸ್ಟಮ್ ಆಧಾರಿತ ಫೇಸ್‌ ರೆಕಗ್ನೇಷನ್ ಡೇಟಾದೊಂದಿಗೆ ಹೊಂದಾಣಿಕೆ ಮಾಡುತ್ತದೆ. ಸರಿಯಾಗಿ ಕಂಡುಬಂದರೆ ತಕ್ಷಣವೇ ಪಾವತಿ ಮಾಡಲಾಗುತ್ತದೆ ಮತ್ತು ಗ್ರಾಹಕರ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ. ಈ ಹಣವನ್ನು ಅಂಗಡಿಕಾರರ ಫೆಡರಲ್ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಪಾವತಿಯನ್ನು ಪ್ರಕ್ರಿಯೆಗೊಳಿಸಿದ ನಂತರ, ಪಾವತಿ ಪೂರ್ಣಗೊಂಡಿದೆ ಎಂದು FED MERCHANT ಅಪ್ಲಿಕೇಶನ್ ನಿಮಗೆ ತಿಳಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News