Tax Savings Tips : 10 ಅಲ್ಲ 12 ಲಕ್ಷದವರೆಗಿನ ಸಂಬಳಕ್ಕೂ ಕಟ್ಟಬೇಕಾಗಿಲ್ಲ ತೆರಿಗೆ : ಇಲ್ಲಿದೆ ಲೆಕ್ಕಾಚಾರ

ಜವಾಬ್ದಾರಿಯುತ ನಾಗರಿಕರಾಗಿ, ಸರ್ಕಾರಕ್ಕೆ ತೆರಿಗೆ ಪಾವತಿಸುವುದು ನಮ್ಮ ಕರ್ತವ್ಯ. ಆದರೆ ನೀವು ಹೆಚ್ಚು ತೆರಿಗೆಯನ್ನು ಉಳಿಸಬಹುದು, ಅದು ನಿಮಗೆ ಉತ್ತಮವಾಗಿರುತ್ತದೆ. ಅದು ಹೇಗೆ ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Mar 17, 2022, 04:12 PM IST
  • 2021-22 ರ ಹಣಕಾಸು ವರ್ಷ ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ
  • ನೀವು ಇನ್ನೂ ತೆರಿಗೆ ಉಳಿಸಲು ಪ್ಲಾನ್ ಮಾಡುತ್ತಿದ್ದರೆ
  • ನೀವು 12 ಲಕ್ಷದ ಮೇಲೆ ತೆರಿಗೆಯನ್ನು ಹೇಗೆ ಉಳಿಸಬಹುದು
Tax Savings Tips : 10 ಅಲ್ಲ 12 ಲಕ್ಷದವರೆಗಿನ ಸಂಬಳಕ್ಕೂ ಕಟ್ಟಬೇಕಾಗಿಲ್ಲ ತೆರಿಗೆ : ಇಲ್ಲಿದೆ ಲೆಕ್ಕಾಚಾರ title=

ನವದೆಹಲಿ :  2021-22 (FY 2021-22) ರ ಹಣಕಾಸು ವರ್ಷ ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿವೆ. ನೀವು ಇನ್ನೂ ತೆರಿಗೆ ಉಳಿಸಲು ಪ್ಲಾನ್ ಮಾಡುತ್ತಿದ್ದರೆ ಇಲ್ಲಿ ನಿಮಗಾಗಿ ಕೆಲವು ಸಲಹೆಗಳು ಇವೆ. ಜವಾಬ್ದಾರಿಯುತ ನಾಗರಿಕರಾಗಿ, ಸರ್ಕಾರಕ್ಕೆ ತೆರಿಗೆ ಪಾವತಿಸುವುದು ನಮ್ಮ ಕರ್ತವ್ಯ. ಆದರೆ ನೀವು ಹೆಚ್ಚು ತೆರಿಗೆಯನ್ನು ಉಳಿಸಬಹುದು, ಅದು ನಿಮಗೆ ಉತ್ತಮವಾಗಿರುತ್ತದೆ. ಅದು ಹೇಗೆ ಇಲ್ಲಿದೆ ನೋಡಿ..

ಇತರ ಕಡೆ ಹೂಡಿಕೆ ಮಾಡಿ

ತೆರಿಗೆ ಹೊಣೆಗಾರಿಕೆಯಿಂದ ಉಳಿಸಿದ ಹಣ(Money Savings)ವನ್ನು ನೀವು ಇತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಸಂಬಳ 12 ಲಕ್ಷ ರೂ. ವರೆಗೆ ಇದ್ದರೆ, ನೀವು ಯಾವುದೇ ರೀತಿಯ ತೆರಿಗೆಯನ್ನು ಪಾವತಿಸುವ ಅಗತ್ಯವಿಲ್ಲ. ನೀವು 12 ಲಕ್ಷದ ಮೇಲೆ ತೆರಿಗೆಯನ್ನು ಹೇಗೆ ಉಳಿಸಬಹುದು, ಅದರ ಸಂಪೂರ್ಣ ಲೆಕ್ಕಾಚಾರ ಈ ಕೆಳಗಿದೆ.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಬಿಗ್ ಶಾಕ್! DA ಹೆಚ್ಚಿಳದ ಬಗ್ಗೆ ಬಿಗ್ ಅಪ್‌ಡೇಟ್‌

ಸಂಪೂರ್ಣ ಯೋಜನೆ ಅಗತ್ಯವಿದೆ

ತೆರಿಗೆ ಉಳಿತಾಯಕ್ಕಾಗಿ ನೀವು ಸಂಪೂರ್ಣವಾಗಿ ಪ್ಲಾನ್ ಮಾಡಬೇಕು. ನಿಮ್ಮ ಉದ್ಯೋಗದಾತ ಕಂಪನಿಯು ನಿಮ್ಮ ಸಂಬಳದಿಂದ ತೆರಿಗೆ ಹಣ(Tax Money)ವನ್ನು ಕಡಿತಗೊಳಿಸಿದ್ದರೂ ಸಹ, ಈ ಲೆಕ್ಕಾಚಾರದ ಆಧಾರದ ಮೇಲೆ ITR ಅನ್ನು ಸಲ್ಲಿಸುವ ಮೂಲಕ ನಿಮ್ಮ ಕಡಿತಗೊಳಿಸಿದ ಹಣವನ್ನು ನೀವು ಇನ್ನೂ ಪಡೆಯಬಹುದು. 

12 ಲಕ್ಷ ಸಂಬಳದಲ್ಲಿ, ನೀವು ಶೇ. 30 ರಷ್ಟು ಸ್ಲ್ಯಾಬ್‌ನಲ್ಲಿ ಬರುತ್ತೀರಿ. ಏಕೆಂದರೆ 10 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯದ ಮೇಲೆ ಶೇ.30 ರಷ್ಟು ಹೊಣೆಗಾರಿಕೆ ಇರುತ್ತದೆ.

ಇದು ಪೂರ್ಣ ಲೆಕ್ಕಾಚಾರ

1. ಮೊದಲನೆಯದಾಗಿ, ಸ್ಟ್ಯಾಂಡರ್ಡ್ ಡಿಡಕ್ಷನ್ ಆಗಿ ಸರ್ಕಾರ ನೀಡಿದ 50 ಸಾವಿರ ಕಳೆಯಿರಿ. ಈ ರೀತಿಯಲ್ಲಿ ಈಗ ನಿಮ್ಮ ತೆರಿಗೆಯ ಆದಾಯ 11.50 ಲಕ್ಷ ರೂ.

2. ಈಗ ನೀವು 80C ಅಡಿಯಲ್ಲಿ 1.5 ಲಕ್ಷ ರೂ. ಇದರಲ್ಲಿ, ನೀವು ಮಕ್ಕಳ ಬೋಧನಾ ಶುಲ್ಕ, PPF, LIC, EPF, ಮ್ಯೂಚುವಲ್ ಫಂಡ್ (ELSS), ಗೃಹ ಸಾಲದ ಅಸಲು ಇತ್ಯಾದಿಗಳನ್ನು ಕ್ಲೈಮ್ ಮಾಡಬಹುದು. ಈ ರೀತಿಯಾಗಿ, ಇಲ್ಲಿ ನಿಮ್ಮ ತೆರಿಗೆಯ ಆದಾಯ 10 ಲಕ್ಷ ರೂ.

3. 12 ಲಕ್ಷಗಳ ಸಂಬಳದ ಮೇಲೆ ತೆರಿಗೆ ಶೂನ್ಯ (0) ಮಾಡಲು 80CCD (1B) ಅಡಿಯಲ್ಲಿ ನೀವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ 50 ಸಾವಿರ ರೂ. ಹೂಡಿಕೆ ಮಾಡಬೇಕು. ಈ ಮೂಲಕ ನಿಮ್ಮ ತೆರಿಗೆಯ ವೇತನ 9.5 ಲಕ್ಷ ರೂ.ಗೆ ಇಳಿದಿದೆ.

4. ಈಗ ನೀವು ಆದಾಯ ತೆರಿಗೆಯ ಸೆಕ್ಷನ್ 24B ಅಡಿಯಲ್ಲಿ ಬಡ್ಡಿಯ ಮೇಲೆ ರೂ 1.5 ಲಕ್ಷದವರೆಗೆ ಮತ್ತು ಆದಾಯ ತೆರಿಗೆಯ ಸೆಕ್ಷನ್ 80EEA ಅಡಿಯಲ್ಲಿ ರೂ 1.5 ಲಕ್ಷದವರೆಗೆ ಹೆಚ್ಚುವರಿ ಕಡಿತವನ್ನು ಪಡೆಯಬಹುದು. ಈ ರೀತಿಯಾಗಿ, ನೀವು ಗೃಹ ಸಾಲದ ಬಡ್ಡಿಯ ಮೇಲೆ ಒಟ್ಟು 3.5 ಲಕ್ಷಗಳ ಕಡಿತವನ್ನು ಕ್ಲೈಮ್ ಮಾಡಬಹುದು. ಕೈಗೆಟಕುವ ಬೆಲೆಯ ಮನೆಗಳಿಗೆ 2019 ರ ಬಜೆಟ್‌ನಲ್ಲಿ 1.5 ಲಕ್ಷ ಹೆಚ್ಚುವರಿ ವಿನಾಯಿತಿಯನ್ನು ಒದಗಿಸಲಾಗಿದೆ.

ಇದನ್ನೂ ಓದಿ : Income tax Financial Year: ಮಾರ್ಚ್ 31 ರೊಳಗೆ ಈ ತುರ್ತು ಕೆಲಸ ಪೂರ್ಣಗೊಳಿಸಿ, ಇಲ್ದಿದ್ರೆ ಭಾರೀ ನಷ್ಟ

ಸ್ಟೇಟಸ್ ಏನು?

ಸೆಕ್ಷನ್ 80EEA ಅಡಿಯಲ್ಲಿ ಬಡ್ಡಿಯ ಮೇಲಿನ ತೆರಿಗೆ ವಿನಾಯಿತಿಗೆ ಅರ್ಹರಾಗಲು ನಿಮ್ಮ ಹೋಮ್ ಲೋನ್(Home Lone) ಅನ್ನು ಏಪ್ರಿಲ್ 1, 2019 ಮತ್ತು ಮಾರ್ಚ್ 31, 2022 ರ ನಡುವೆ ಬ್ಯಾಂಕ್ ಅಥವಾ NBFC ಅನುಮೋದಿಸಬೇಕು. ಅಲ್ಲದೆ, ಆಸ್ತಿಯ ಮುದ್ರಾಂಕ ಶುಲ್ಕ 45 ಲಕ್ಷ ರೂಪಾಯಿ ಮೀರಬಾರದು. ಮನೆ ಖರೀದಿದಾರರು ಯಾವುದೇ ಇತರ ವಸತಿ ಆಸ್ತಿಯನ್ನು ಹೊಂದಿರಬಾರದು. ಈ ರೀತಿಯಾಗಿ, 3.5 ಲಕ್ಷ ರೂ.ಗೆ ಕ್ಲೈಮ್ ಮಾಡಿದ ನಂತರ, ನಿಮ್ಮ ತೆರಿಗೆಯ ಆದಾಯವು ಒಂದೇ ಹೊಡೆತದಲ್ಲಿ ರೂ.6 ಲಕ್ಷಕ್ಕೆ ಇಳಿದಿದೆ.

5. ಆದಾಯ ತೆರಿಗೆಯ ಸೆಕ್ಷನ್ 80D ಅಡಿಯಲ್ಲಿ, ನಿಮ್ಮ ಕುಟುಂಬಕ್ಕೆ (ಹೆಂಡತಿ ಮತ್ತು ಮಕ್ಕಳು) 25 ಸಾವಿರ ರೂಪಾಯಿಗಳ ವೈದ್ಯಕೀಯ ಆರೋಗ್ಯ ವಿಮೆ(Health Insurance)ಯನ್ನು ನೀವು ಕ್ಲೈಮ್ ಮಾಡಬಹುದು. ಇದಲ್ಲದೆ, ಹಿರಿಯ ನಾಗರಿಕರು ಪೋಷಕರಿಗೆ ಪಾವತಿಸಿದ ಆರೋಗ್ಯ ವಿಮಾ ಪ್ರೀಮಿಯಂಗೆ 50 ಸಾವಿರ ಕ್ಲೈಮ್ ಮಾಡಬಹುದು. ಇದಲ್ಲದೇ 5000 ರೂ.ವರೆಗೆ ಆರೋಗ್ಯ ತಪಾಸಣೆಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟು 75 ಸಾವಿರ ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಕ್ಲೈಮ್ ಮಾಡಿದ ನಂತರ, ನಿಮ್ಮ ತೆರಿಗೆಯ ಆದಾಯವು 5.25 ಲಕ್ಷಕ್ಕೆ ಇಳಿದಿದೆ.

6. ಈಗ ನೀವು ನಿಮ್ಮ ತೆರಿಗೆಯ ಆದಾಯವನ್ನು 5 ಲಕ್ಷಕ್ಕೆ ತರಲು ಯಾವುದೇ ಸಂಸ್ಥೆ ಅಥವಾ ಟ್ರಸ್ಟ್‌ಗೆ 25 ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಬೇಕು. ಆದಾಯ ತೆರಿಗೆಯ ಸೆಕ್ಷನ್ 80G ಅಡಿಯಲ್ಲಿ ನೀವು ಅದನ್ನು ಕ್ಲೈಮ್ ಮಾಡಬಹುದು. 25 ಸಾವಿರ ದೇಣಿಗೆ ನೀಡಿದಾಗ, ನಿಮ್ಮ ತೆರಿಗೆಯ ಆದಾಯವು 5 ಲಕ್ಷಕ್ಕೆ ಇಳಿದಿದೆ.

ಇದನ್ನೂ ಓದಿ : Petrol Price : ರಷ್ಯಾ ಆಫರ್ ನಂತರ ಭಾರತದಲ್ಲಿ ಪೆಟ್ರೋಲ್ ದರ ಇಳಿಕೆ?

ನೀವು ಶೂನ್ಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ

ಈಗ ನಿಮ್ಮ ತೆರಿಗೆಯ ಆದಾಯ 5 ಲಕ್ಷ ರೂ. 2.5 ರಿಂದ 5 ಲಕ್ಷ ರೂಪಾಯಿಗಳ ಆದಾಯದ ಮೇಲೆ, ಶೇಕಡಾ 5 ರ ದರದಲ್ಲಿ, ನಿಮ್ಮ ತೆರಿಗೆ 12,500 ರೂ. ಆದರೆ ಇದಕ್ಕೆ ಸರ್ಕಾರದಿಂದ ವಿನಾಯಿತಿ ಇದೆ. ಈ ಸಂದರ್ಭದಲ್ಲಿ ನಿಮ್ಮ ತೆರಿಗೆ ಹೊಣೆಗಾರಿಕೆ ಶೂನ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News